ಇನ್ಮುಂದೆ ಸಿಮ್‌ ಕಾರ್ಡ್‌ ಡೀಲರ್‌ಗಳಿಗೆ ಪೊಲೀಸ್‌ ಪರಿಶೀಲನೆ ಕಡ್ಡಾಯ

By Anusha KbFirst Published Aug 18, 2023, 11:02 AM IST
Highlights

ಸಿಮ್‌ ಕಾರ್ಡ್‌ಗಳನ್ನು ದುಷ್ಕೃತ್ಯಕ್ಕೆ ಬಳಸುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಸಿಮ್‌ ಕಾರ್ಡ್‌ ಡೀಲರ್‌ಗಳಿಗೆ ಪೊಲೀಸ್‌ ಪರಿಶೀಲನೆ ಕಡ್ಡಾಯಗೊಳಿಸಿ ಆದೇಶಿಸಿದೆ.

ನವದೆಹಲಿ: ಸಿಮ್‌ ಕಾರ್ಡ್‌ಗಳನ್ನು ದುಷ್ಕೃತ್ಯಕ್ಕೆ ಬಳಸುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಸಿಮ್‌ ಕಾರ್ಡ್‌ ಡೀಲರ್‌ಗಳಿಗೆ ಪೊಲೀಸ್‌ ಪರಿಶೀಲನೆ ಕಡ್ಡಾಯಗೊಳಿಸಿ ಆದೇಶಿಸಿದೆ. ಅಲ್ಲದೆ ಸಗಟು ಪ್ರಮಾಣದಲ್ಲಿ ಸಿಮ್‌ ಕಾರ್ಡ್‌ ಸಂಪರ್ಕದ ಅವಕಾಶವನ್ನೂ ರದ್ದುಗೊಳಿಸಿ ನಿರ್ಧಾರ ಕೈಗೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ದೂರಸಂಪರ್ಕ ಖಾತೆ ಸಚಿವ ಅಶ್ವಿನ್‌ ವೈಷ್ಣವ್‌, ‘2023ರ ಮೇ ತಿಂಗಳ ಬಳಿಕ ದೇಶಾದ್ಯಂತ 52 ಲಕ್ಷ ಮೊಬೈಲ್‌ ಸಂಪರ್ಕ ರದ್ದುಗೊಳಿಸಲಾಗಿದೆ. 67 ಸಾವಿರ ಡೀಲರ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ, ಸಿಮ್‌ ಕಾರ್ಡ್‌ ಡೀಲರ್‌ಗಳ ವಿರುದ್ಧ 300 ಎಫ್‌ಐಆರ್‌ ದಾಖಲಿಸಲಾಗಿದೆ. ವಾಟ್ಸಾಪ್‌ ಕೂಡಾ 66 ಸಾವಿರ ಖಾತೆಗಳನ್ನು ವಂಚನೆ ಪ್ರಕರಣಗಳ ಹಿನ್ನೆಲೆಯಲ್ಲಿ ಬ್ಲಾಕ್‌ ಮಾಡಿದೆ.

Latest Videos

ಹೀಗಾಗಿಯೇ ಸಿಮ್‌ ಕಾರ್ಡ್‌ ಡೀಲರ್‌ಗಳಿಗೆ ಪೊಲೀಸ್‌ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಅವರು ಯಾವುದೇ ನಿಯಮಗಳನ್ನು ಉಲ್ಲಂಘಿಸಿದ್ದು ಪತ್ತೆಯಾದರೆ 10 ಲಕ್ಷ ರು.ದಂಡ ವಿಧಿಸಲಾಗುವುದು. ದೇಶದಲ್ಲಿ 10 ಲಕ್ಷ ಸಿಮ್‌ಕಾರ್ಡ್‌ ಡೀಲರ್‌ಗಳಿದ್ದಾರೆ. ಅವರೆಲ್ಲರಿಗೂ ಪೊಲೀಸ್‌ ಪರಿಶೀಲನೆಗೆ ಸಾಕಷ್ಟುಸಮಯ ನೀಡಲಾಗುವುದು ಎಂದು ಸಚಿವ ವೈಷ್ಣವ್‌ ತಿಳಿಸಿದ್ದಾರೆ. ಇನ್ನು ಸಗಟು ಸಿಮ್‌ಕಾರ್ಡ್‌ ಸಂಪರ್ಕವನ್ನು ರದ್ದುಗೊಳಿಸಲಾಗುವುದು. ಅದರ ಬದಲಾಗಿ ಬಿಸಿನೆಸ್‌ ಸಂಪರ್ಕ ಎಂಬ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

click me!