ಹಾವಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ ಪೊಲೀಸ್‌ : ಭಯಾನಕ ವೀಡಿಯೋ ವೈರಲ್‌

By Suvarna News  |  First Published Oct 29, 2023, 10:36 AM IST

ಹಾವು ಎಂದಾಕ್ಷಣ ಎಲ್ಲರೂ ಭಯಬಿದ್ದು ಓಡಿ ಹೋಗೋದೆ ಹೆಚ್ಚು. ಆದರೆ ಇಲ್ಲೊಬ್ಬರು ಪೊಲೀಸ್‌ ಸಿಬ್ಬಂದಿ ಹಾವಿಗೂ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಭೋಪಾಲ್‌: ಹಾವು ಎಂದಾಕ್ಷಣ ಎಲ್ಲರೂ ಭಯಬಿದ್ದು ಓಡಿ ಹೋಗೋದೆ ಹೆಚ್ಚು. ಆದರೆ ಇಲ್ಲೊಬ್ಬರು ಪೊಲೀಸ್‌ ಸಿಬ್ಬಂದಿ ಹಾವಿಗೂ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಪೇದೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಜೊತೆಗೆ ಜನ ಹಾವಿಗೂ ಸಿಪಿಆರ್ ಮಾಡಿದ ಪೊಲೀಸ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಅಂದಹಾಗೆ ಮಧ್ಯಪ್ರದೇಶದ (Madhya Pradesh) ನರ್ಮದಾಪುರಂನಲ್ಲಿ(Narmadapuram) ಈ ಘಟನೆ ನಡೆದಿದೆ. 

ವಿಷಕಾರಿ ಅಲ್ಲದ ಹಾವೊಂದು ನರ್ಮದಾಪುರದ ವಸತಿ ಪ್ರದೇಶದ ಪೈಪ್‌ಲೈನ್‌ ಒಳಗೆ ನುಗ್ಗಿತ್ತು. ಪೈಪ್‌ಲೈನ್‌ಗೆ ನುಗ್ಗಿದ ಹಾವನ್ನು ಅಲ್ಲಿನ ನಿವಾಸಿಗಳು ಹೊರತೆಗೆಯಲು ನೋಡಿದ್ದಾರೆ. ಆದರೆ ಹಾವು ಮಾತ್ರ ಏನು ಮಾಡಿದರು ಹೊರಗೆ ಬಂದಿಲ್ಲ, ಹೀಗಾಗಿ ಅವರು ಕ್ರಿಮಿನಾಶಕ (pesticide) ಮಿಶ್ರಿತ ನೀರನ್ನು ಪೈಪ್‌ನಲ್ಲಿ ಸುರಿದಿದ್ದಾರೆ. ಇದಾದ ನಂತರ ಹಾವು ಪೈಪ್‌ನಿಂದ ಹೊರ ಬಂದಿದೆ. ಆದರೆ  ಕೀಟನಾಶಕ ಮಿಶ್ರಿತ ನೀರು ಎರಚಿದ  ಪರಿಣಾಮ ಅದು ಅಸ್ಥಸ್ಥಗೊಂಡಿತ್ತು.  ಈ ವೇಳೆ ಏನು ಮಾಡಬೇಕೆಂದು ತಿಳಿಯದೇ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿದ್ದಾರೆ. 

ಮುಂಬೈನಲ್ಲಿ 'ಪ್ರೀಮಿಯರ್‌ ಪದ್ಮಿನಿ' ಯುಗಾಂತ್ಯ: ಮನೆ ಖರೀದಿಗೆ ರಾತ್ರಿ 8 ತಾಸು ಕ್ಯೂ ನಿಂತ ಜನ

Tap to resize

Latest Videos

ಅಲ್ಲಿಗೆ ಬಂದ ಪೊಲೀಸ್ ಕಾನ್ಸ್‌ಟೇಬಲ್ ಅತುಲ್ ಶರ್ಮಾ( Atul Sharma) ಎಂಬುವವರು  ಅಸ್ವಸ್ಥಗೊಂಡು ನಿಶ್ಚಲವಾಗಿ ಮಲಗಿದ್ದ ಹಾವಿಗೆ ಮರುಜೀವ ನೀಡುವ ಸಲುವಾಗಿ ಈ ಪೊಲೀಸ್‌ ಹಾವಿನ ಬಾಯಿಗೆ ಬಾಯಿ ಇಟ್ಟು ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ. ಆದರೆ ಈ ವಿಚಾರದ ಬಗ್ಗೆ ಮಾಧ್ಯಮವೊಂದು ಪಶುವೈದ್ಯರನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ, ಅವರ ಪ್ರಕಾರ, ಸಿಪಿಆರ್‌ (CPR) ಹಾವನ್ನು ಬದುಕಿಸುವುದಿಲ್ಲವಂತೆ. ಹಾವು ಅದಾಗಿಯೇ ಮರುಜೀವ ಪಡೆದಿರಬಹುದು ಎಂದು ಅವರು ಹೇಳಿದ್ದಾರೆ. 

ಬೆಂಗಳೂರು ಐಕಿಯಾದಲ್ಲಿ ಹೃದಯಾಘಾತ: ಶಾಪಿಂಗ್ ಬಂದ ವೈದ್ಯರಿಂದ ವ್ಯಕ್ತಿಯ ರಕ್ಷಣೆ

ಹಾವನ್ನು ಉಳಿಸಿದ ಪೊಲೀಸ್ ಕಾನ್ಸ್‌ಟೇಬಲ್ ಅತುಲ್ ಶರ್ಮಾ (Atul Sharma) ಅವರು, ತಮ್ಮನ್ನು ತಾವು ಹಾವಿನ ರಕ್ಷಕ ಎಂದು ಹೇಳಿಕೊಂಡಿದ್ದಾರೆ. ಅಸ್ವಸ್ಥವಾಗಿದ್ದ ಹಾವಿದ್ದ ಸ್ಥಳಕ್ಕೆ ಭೇಟಿ ನೀಡಿದ ಅವರು, ಹಾವನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ಹಾವು ಉಸಿರಾಡುತ್ತಿದೆಯೇ ಎಂಬುದನ್ನು ಗಮನಿಸಿದ್ದಾರೆ. ನಂತರ ಅದರ ಬಾಯಿಗೆ ತಮ್ಮ ಬಾಯಿಯ ಮೂಲಕ ಉಸಿರು ನೀಡಿದ್ದಾರೆ. ನಂತರ  ಶುದ್ಧವಾದ ನೀರನ್ನು ಹಾವಿನ ಮೇಲೆ ಸುರಿದ್ದು, ಅದರ ದೇಹಕ್ಕೆ ಅಂಟಿಕೊಂಡಿದ್ದ ಕ್ರಿಮಿನಾಶಕವನ್ನು ತೊಳೆದಿದ್ದಾರೆ. ಕಳೆದ 15 ವರ್ಷಗಳಿಂದ ತಾವು 500 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವುದಾಗಿ ಅತುಲ್ ಶರ್ಮಾ ಹೇಳಿದ್ದಾರೆ.  ಡಿಸ್ಕವರಿ ಚಾನೆಲ್‌ ನೋಡುತ್ತಾ ನೋಡುತ್ತಾ ಈ ಕಲೆಯನ್ನು ತಾನು ಸಿದ್ದಿಸಿಕ್ಕೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. 

ಹಿರಿಯ ನಾಗರಿಕನ ಮೇಲೆ ಹಲ್ಲೆ: ಯುವಕನ ಹಿಡಿದು ಸರಿಯಾಗಿ ತದುಕಿದ ಮೆಟ್ರೋ ಪ್ರಯಾಣಿಕರು  

😲: Cop gives ‘CPR’ to unconscious snake, helps it survive‼️

——

⚡️WATCH: A police constable in Madhya Pradesh is the toast of animal lovers after giving CPR to a snake that had fallen unconscious after being drenched in pesticide-laced toxic water to flush it out of a house in… pic.twitter.com/U2jl1hi73z

— truth. (@thetruthin)

 

click me!