ಮುಂಬೈನಲ್ಲಿ 'ಪ್ರೀಮಿಯರ್‌ ಪದ್ಮಿನಿ' ಯುಗಾಂತ್ಯ

Published : Oct 29, 2023, 07:41 AM ISTUpdated : Oct 30, 2023, 02:39 PM IST
ಮುಂಬೈನಲ್ಲಿ 'ಪ್ರೀಮಿಯರ್‌ ಪದ್ಮಿನಿ' ಯುಗಾಂತ್ಯ

ಸಾರಾಂಶ

ಡಬ್ಬಲ್‌ ಡೆಕ್ಕರ್‌ ಡೀಸೆಲ್‌ ಬಸ್‌ಗಳ ಓಡಾಟ ಅಂತ್ಯಗೊಂಡ ಬೆನ್ನಲ್ಲೇ ಮುಂಬೈ ನಗರದ ಜೊತೆ ಗುರುತಿಸಿಕೊಂಡಿದ್ದ ‘ಪ್ರೀಮಿಯರ್‌ ಪದ್ಮಿನಿ’ ಟ್ಯಾಕ್ಸಿ ಸೇವೆಯೂ ಸಹ ಅಂತ್ಯಗೊಂಡಿದೆ.

ಮುಂಬೈ: ಡಬ್ಬಲ್‌ ಡೆಕ್ಕರ್‌ ಡೀಸೆಲ್‌ ಬಸ್‌ಗಳ ಓಡಾಟ ಅಂತ್ಯಗೊಂಡ ಬೆನ್ನಲ್ಲೇ ಮುಂಬೈ ನಗರದ ಜೊತೆ ಗುರುತಿಸಿಕೊಂಡಿದ್ದ ‘ಪ್ರೀಮಿಯರ್‌ ಪದ್ಮಿನಿ’ ಟ್ಯಾಕ್ಸಿ ಸೇವೆಯೂ ಸಹ ಅಂತ್ಯಗೊಂಡಿದೆ. ಕಪ್ಪು ಹಾಗೂ ಹಳದಿ ಬಣ್ಣದ ಈ ಕಾರುಗಳು ಸೋಮವಾರದಿಂದ ರಸ್ತಗಿಳಿಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕಾಲಿ ಪೀಲಿ’ ಎಂಬ ಹೆಸರಿನೊಂದಿಗೆ ಮುಂಬೈ ಜನರ ಜೊತೆಗಾರರಾಗಿದ್ದ ಈ ಟ್ಯಾಕ್ಸಿ ಭಾನುವಾರ ಕೊನೆಯದಾಗಿ ರಸ್ತೆಗಳಿಯಲಿದೆ. 2003ರಲ್ಲಿ ಕೊನೆಯ ಪ್ರೀಮಿಯರ್‌ ಪದ್ಮಿನಿ ಟ್ಯಾಕ್ಸಿ ನೋಂದಣಿಗೊಂಡಿತ್ತು. ಈ ವಾಹನಗಳಿಗೆ 20 ವರ್ಷಗಳ ಕಾಲ ಮಿತಿ ಇರುವುದರಿಂದ ಅವಧಿ ಮುಕ್ತಾಯವಾದ ಕಾರು ಸೇವೆಯನ್ನು ನಿಲ್ಲಿಸಲಿದೆ. ‘ಇದೀಗ ಆ್ಯಪ್‌ಗಳ ಮುಖಾಂತರ ಸೇವೆ ಒದಗಿಸುವ ಕಾರುಗಳು ಮುಂಬೈ ರಸ್ತೆಯನ್ನು ಆಕ್ರಮಿಸಿದ್ದು, ಈ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದು ಮುಂಬೈನ ಗೌರವವಾಗಿತ್ತು. ನಮಗೆ ಜೀವನವಾಗಿತ್ತು’ ಎಂದು ಕೊನೆಯ ಕಾರು ಹೊಂದಿದ್ದ ಕಾರಿನ ಮಾಲಿಕ ಹೇಳಿದ್ದಾರೆ.

ಈ ಕಾರುಗಳು ಸುಮಾರು 50 ವರ್ಷಗಳ ಸೇವೆ ನೀಡಿದ್ದು, ಇವುಗಳನ್ನು ಸಹ ಸ್ಮಾರಕವಾಗಿ ಸಂರಕ್ಷಿಸಬೇಕು ಎಂದು ಜನ ಬೇಡಿಕೆ ಸಲ್ಲಿಸಿದ್ದಾರೆ.

₹2 ಕೋಟಿಯ ಮನೆ ಖರೀದಿಗೆ ರಾತ್ರಿ 8 ತಾಸು ರಸ್ತೇಲಿ ಕಾದು ನಿಂತ ಜನ!

ಪುಣೆ: ದೇಶದ ಪ್ರಮುಖ ಐಟಿ ನಗರಗಳ ಪೈಕಿ ಒಂದಾದ ಮಹಾರಾಷ್ಟ್ರದ ಪುಣೆಯಲ್ಲಿ ಜನರು 2 ಕೋಟಿ ರು.ಗೆ ಐಶಾರಾಮಿ ಫ್ಲಾಟ್‌ (Luxurious Flat) ಖರೀದಿಸಲು ಬರೋಬ್ಬರಿ ರಾತ್ರಿಯಿಡೀ ಕಾದು ಸಾಲಿನಲ್ಲಿ ನಿಂತ ಪ್ರಸಂಗ ನಡೆದಿದೆ. ವಿಕಾಸ್‌ ಜಾವಡೇಕರ್‌ (Vikas Javadekar) ಎಂಬ ಬಿಲ್ಡರ್‌ ಈ ವಸತಿ ಸಮುಚ್ಚಯ ಮಾಲೀಕರು ಪುಣೆಯಿಂದ 15 ಕಿಲೋಮೀಟರ್‌ ದೂರದ ವಾಕಡ್‌ನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿದ್ದಾರೆ. ಇದನ್ನು ಖರೀದಿ ಮಾಡಲು ಜನರು ಮುಗಿಬಿದ್ದು, 8 ತಾಸು ಸಾಲಿನಲ್ಲಿ ಕಾದು ನಿಂತಿದ್ದರು. ಈ ವಿಡಿಯೋ ವೈರಲ್‌ ಆಗಿದೆ.

ಇಸ್ರೇಲ್ ಹಮಾಸ್ ಯುದ್ಧದ ಮೊದಲು ಹಾಗೂ ನಂತರ: ಗಾಜಾಪಟ್ಟಿಯ ಸ್ಯಾಟಲೈಟ್‌ ಫೋಟೋ ಬಿಡುಗಡೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ