ಮಹಿಳೆಯರು ಮಾಸಿಕ .10 ಸಾವಿರ ಆದಾಯ ಗಳಿಸಲು ಸರ್ಕಾರ ನೆರವು

Published : Jul 11, 2023, 06:16 AM IST
 ಮಹಿಳೆಯರು ಮಾಸಿಕ .10 ಸಾವಿರ ಆದಾಯ ಗಳಿಸಲು ಸರ್ಕಾರ ನೆರವು

ಸಾರಾಂಶ

ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ಘೊಷಿಸಿದ್ದು, ಬಡ ಕುಟುಂಬಗಳ ಗೃಹಿಣಿಯರು ಮಾಸಿಕ 10 ಸಾವಿರ ರು. ಗಳಿಕೆ ಮಾಡಲು ಸರ್ಕಾರ ನೆರವು ನೀಡಲಿದೆ ಎಂದು ಹೇಳಿದ್ದಾರೆ.

ಇಂದೋರ್‌: ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ಘೊಷಿಸಿದ್ದು, ಬಡ ಕುಟುಂಬಗಳ ಗೃಹಿಣಿಯರು ಮಾಸಿಕ 10 ಸಾವಿರ ರು. ಗಳಿಕೆ ಮಾಡಲು ಸರ್ಕಾರ ನೆರವು ನೀಡಲಿದೆ ಎಂದು ಹೇಳಿದ್ದಾರೆ.  ‘ನಮ್ಮ ಗುರಿಯೆಂದರೆ ಪ್ರತಿಯೊಂದು ಬಡ ಕುಟುಂಬದ ಗೃಹಿಣಿ ತಿಂಗಳಿಗೆ ಕನಿಷ್ಠ 10 ಸಾವಿರ ರು.ಗಳನ್ನು ಗಳಿಸುವಂತಾಗಬೇಕು. ಇದಕ್ಕಾಗಿ ಸಣ್ಣ ಸ್ವ ಸಹಾಯ ಸಂಘಗಳು ಅಥವಾ ಗೃಹಪಯೋಗಿ ವಸ್ತುಗಳ ಉತ್ಪಾದನೆಯಿಂದ ಗಳಿಸಿಕೊಳ್ಳಬಹುದು. ಇದಕ್ಕಾಗಿ ಸರ್ಕಾರದ ಗ್ಯಾರಂಟಿಯಲ್ಲಿ ಶೇ.2ರಷ್ಟು ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ’ ಎಂದು ಚೌಹಾಣ್‌ ಹೇಳಿದ್ದಾರೆ. ಇದಕ್ಕೂ ಮೊದಲು ಲಾಡ್ಲಿ ಬೆಹನಾ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಮಾಸಿಕ 1 ಸಾವಿರ ರು. ಸಹಾಯಧನ ನೀಡುವ ಯೋಜನೆಯನ್ನು ಅವರು ಘೋಷಿಸಿದ್ದರು.

ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ: ಸಚಿವ ಪರಮೇಶ್ವರ್‌

ಮಹಿಳಾ ಸಬಲೀಕರಣ, ಆರೋಗ್ಯದಲ್ಲಿ ಸುಧಾರಣೆ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಬಿಲ್ ಗೇಟ್ಸ್ ಮೆಚ್ಚುಗೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ