ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್‌ ಆರೋಗ್ಯ ಏರುಪೇರು: ಜೀರೋ ಟ್ರಾಫಿಕ್‌ನಲ್ಲಿ ಆಸ್ಪತ್ರೆಗೆ ದಾಖಲು

By Sathish Kumar KH  |  First Published Jul 10, 2023, 9:16 PM IST

ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್‌ ಅವರು ಆರೋಗ್ಯದಲ್ಲಿ ಏರುಪೇರು ಸಂಭವಿಸಿದ್ದು, ಬೆಂಗಳೂರಿನ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಬೆಂಗಳೂರು (ಜು.10): ದೇಶದ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್‌ ಅವರು ಆರೋಗ್ಯದಲ್ಲಿ ಏರುಪೇರು ಸಂಭವಿಸಿದ್ದು, ಬೆಂಗಳೂರಿನ ಬೊಮ್ಮಸಂದ್ರ ಬಳಿಯಿರುವ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ದೇಶದ ಖ್ಯಾತ ವಿಜ್ಞಾನಿಗಳಲ್ಲಿ ಒಬ್ಬರಾದ ಹಾಗೂ ಇಸ್ರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಕಸ್ತೂರಿ ರಂಗನ್‌ ಅವರು ಆರೋಗ್ಯ ಸಮಸ್ಯೆಯಿಂದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಬೆಂಗಳೂರಿನ ಬೊಮ್ಮಸಂದ್ರ ಬಳಿಯ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿದ್ದು, ಚಿಕಿತ್ಸೆ ನಿಡಲಾಗುತ್ತಿದೆ. ಇನ್ನು ಶ್ರೀಲಂಕಾದ ಪ್ರವಾಸದಲ್ಲಿದ್ದ ಕಸ್ತೂರಿ ರಂಗನ್‌ ಅವರಿಗೆ ಹೃದಯಾಘಾತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಕೊಲಂಬೋದಿಂದ ಏರ್‌ಲಿಫ್ಟ್‌ ಮಾಡಿ ಸೀದಾ ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ನಂತರ ಜೀರೋ ಟ್ರಾಫಿಕ್‌ ಮೂಲಕ ಬೊಮ್ಮಸಂದ್ರದ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Tap to resize

Latest Videos

ರಾಹುಲ್‌ ಗಾಂಧಿಯಿಂದ ಮತ್ತೊಂದು ಭಾರತ್‌ ಜೋಡೋ ಯಾತ್ರೆ: ಈಸ್ಟ್‌ ಟು ವೆಸ್ಟ್‌ ಶೀಘ್ರ ಆರಂಭ

ಎಮರ್ಜೆನ್ಸಿ ಕೇರ್‌ ಯೂನಿಟ್‌ನಲ್ಲಿ ಚಿಕಿತ್ಸೆ: ಶ್ರೀಲಂಕಾದ ಕೊಲಂಬೋದಲ್ಲಿದ್ದ ಕಸ್ತೂರಿ ರಂಗನ್​ ಅವರನ್ನು ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದೆ. ನಂತರ, ಇಂಟೆನ್ಸಿವ್‌ಕೇರ್‌ ಸೌಲಭ್ಯವಿರುವ ವಿಮಾನದಲ್ಲಿ ಬೆಂಗಳೂರಿಗೆ ರವಾನೆ ಮಾಡಾಗಿದೆ. ತುರ್ತು ಕಾರ್ಯದ ನಿಮಿತ್ತ ಕಸ್ತೂರಿ ರಂಗನ್‌ ಅವರನ್ನು ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಏರ್‌ಲಿಫ್ಟ್‌ ಮಾಡಲಾಗಿದೆ. ಇನ್ನು ಇಲ್ಲಿಂದ ಆಂಬುಲೆನ್ಸ್‌ ಮೂಲಕ ಜೀರೋ ಟ್ರಾಫಿಕ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದು ತರುವಾಗ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಎಲ್ಲರೊಂದಿಗೆ ಮಾತನಾಡಿದ್ದಾರೆ. ತೀವ್ರ ಪ್ರಮಾಣದ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಎಮರ್ಜೆನ್ಸಿ ಕೇರ್ ಯೂನಿಟ್‌ಗೆ ರವಾನೆ ಮಾಡಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

click me!