ಆರ್ಥಿಕ ಬಿಕ್ಕಟ್ಟು : ಲಂಕಾ ಸೇನೆಯಲ್ಲಿ ಯೋಧರ ಸಂಖ್ಯೆಯಲ್ಲಿ ಭಾರಿ ಕಡಿತ

By Kannadaprabha NewsFirst Published Jan 14, 2023, 10:06 AM IST
Highlights

ವ್ರ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಶ್ರೀಲಂಕಾ 2030ರವೇಳೆಗೆ ತನ್ನ ಸೈನಿಕರ ಸಂಖ್ಯೆಯನ್ನು ಅರ್ಧದಷ್ಟುಕಡಿಮೆ ಮಾಡಲು ನಿರ್ಧರಿಸಿದೆ. ಸುಮಾರು 2 ಲಕ್ಷ ಸೈನಿಕರಿರುವ ಸೇನೆ ಸಂಖ್ಯೆಯನ್ನು 1 ಲಕ್ಷಕ್ಕೆ ಇಳಿಸಲು ಲಂಕಾ ನಿರ್ಧರಿಸಿದೆ.

ಕೋಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಶ್ರೀಲಂಕಾ 2030ರವೇಳೆಗೆ ತನ್ನ ಸೈನಿಕರ ಸಂಖ್ಯೆಯನ್ನು ಅರ್ಧದಷ್ಟುಕಡಿಮೆ ಮಾಡಲು ನಿರ್ಧರಿಸಿದೆ. ಸುಮಾರು 2 ಲಕ್ಷ ಸೈನಿಕರಿರುವ ಸೇನೆ ಸಂಖ್ಯೆಯನ್ನು 1 ಲಕ್ಷಕ್ಕೆ ಇಳಿಸಲು ಲಂಕಾ ನಿರ್ಧರಿಸಿದೆ. ಆರೋಗ್ಯ ಹಾಗೂ ಶಿಕ್ಷಣಕ್ಕೆ ಮೀಸಲಿಟ್ಟಿದ್ದ ವೆಚ್ಚಕ್ಕಿಂತ ಸೈನ್ಯದ ವೆಚ್ಚವೇ ಹೆಚ್ಚಾಗಿತ್ತು ಎಂಬ ಹಿನ್ನೆಲೆಯಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಸೈನಿಕರ ಸಂಖ್ಯೆ ಅರ್ಧದಷ್ಟುಕಡಿಮೆ ಮಾಡಿ ಮುಂಬರುವ ಸಮಸ್ಯೆಗಳನ್ನು ಎದುರಿಸಲು ತಾಂತ್ರಿಕವಾಗಿ ಸಮತೋಲಿತ ರಕ್ಷಣಾ ಪಡೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಲಂಕಾ ರಕ್ಷಣಾ ಸಚಿವಾಲಯ ತಿಳಿಸಿದೆ. ಕಳೆದ ವರ್ಷ ವಿದೇಶಿ ವಿನಿಮಯ ಕೊರತೆಯಿಂದಾಗಿ ಔಷಧ, ತೈಲ, ರಸಗೊಬ್ಬರಗಳನ್ನೂ ಖರೀದಿ ಮಾಡಿಕೊಳ್ಳದಷ್ಟುಆರ್ಥಿಕ ಸಂಕಷ್ಟವನ್ನು ಅನುಭವಿಸಿತ್ತು.

ಸಿಎಎ ತಮಿಳರ ವಿರುದ್ಧ; ಶ್ರೀಲಂಕಾ ತಮಿಳು ನಿರಾಶ್ರಿತರನ್ನು ಹೊರಗಿಡುವುದು ಸರಿಯಲ್ಲ: ಸುಪ್ರೀಂಗೆ ಡಿಎಂಕೆ ಹೇಳಿಕೆ

click me!