ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ತಲೆನೋವಾದ ಪೈಲಟ್‌ ಏಕಾಂಗಿ ಪ್ರಚಾರ

By Anusha KbFirst Published Jan 14, 2023, 9:21 AM IST
Highlights

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ 4 ವರ್ಷಗಳಿಂದ ಬಹಿರಂಗವಾಗಿಯೇ ಸಮರ ಸಾರಿಕೊಂಡು ಬಂದಿರುವ ಪಕ್ಷದ ಮತ್ತೋರ್ವ ಯುವನಾಯಕ ಸಚಿನ್‌ ಪೈಲಟ್‌ ಮತ್ತೆ ಬಂಡಾಯದ ಬಾವುಟ ಹಾರಿಸಿದ್ದಾರೆ.

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ 4 ವರ್ಷಗಳಿಂದ ಬಹಿರಂಗವಾಗಿಯೇ ಸಮರ ಸಾರಿಕೊಂಡು ಬಂದಿರುವ ಪಕ್ಷದ ಮತ್ತೋರ್ವ ಯುವನಾಯಕ ಸಚಿನ್‌ ಪೈಲಟ್‌ ಮತ್ತೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಅವರು ಮುಂದಿನ ವಾರದಿಂದ ಏಕಾಂಗಿಯಾಗಿ ರೈತರು ಮತ್ತು ಯುವಕರನ್ನು ಉದ್ದೇಶಿಸಿ ಸರಣಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಪೈಲಟ್‌ ಕೈಗೊಂಡ ನಿರ್ಧಾರ, ಕಾಂಗ್ರೆಸ್‌ಗೆ ಹೊಸ ತಲೆ ನೋವಾಗಿ ಕಾಣಿಸಿಕೊಂಡಿದೆ. ರಾಹುಲ್‌ರ ಭಾರತ್‌ ಜೋಡೋ ಯಾತ್ರೆ ರಾಜಸ್ಥಾನಕ್ಕೆ ಬಂದ ವೇಳೆ ಗೆಹ್ಲೋಟ್‌, ಸಚಿನ್‌ರನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಬಂಡಾಯ ಶಮನ ಮಾಡಲು ರಾಹುಲ್‌ ಯತ್ನಿಸಿದ್ದರು. ಆದರೆ ಯಾತ್ರೆ ರಾಜ್ಯ ಬಿಡುತ್ತಲೇ ಮತ್ತೆ ಸಚಿನ್‌ ಬಂಡಾಯದ ಬಾವುಟ ಹಾರಿಸಿದ್ದಾರೆ.

ಗೆಹ್ಲೋಟ್ ಆಪ್ತ ಸಚಿವರ ವಜಾಗೆ ಪೈಲೆಟ್ ಬಣ ಆಗ್ರಹ, ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!

ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿರುವ ಅಶೋಕ್ ಗೆಹ್ಲೋಟ್ ಹೊಗಳಿದ ಮೋದಿ!

click me!