
ಜಬಲ್‌ಪುರ (ಜೂನ್ 10, 2023): ಚುನಾವಣಾ ವರ್ಷದಲ್ಲಿ ಮಹಿಳಾ ಮತದಾರರ ಸೆಳೆಯಲು ಮುಂದಾಗಿರುವ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಉಚಿತ ಕೊಡುಗೆಗಳ ಜಾರಿಗೆ ಮುಂದಾಗಿದೆ. ಇದರ ಭಾಗವಾಗಿ ತನ್ನ ಮಹತ್ವಕಾಂಕ್ಷೆಯ ಲಾಡ್ಲಿ ಬೆಹೆನಾ (ಪ್ರಿಯ ಸೋದರಿ) ಯೋಜನೆಗೆ ಅದು ಶನಿವಾರ ಚಾಲನೆ ನೀಡಲಿದೆ. ಈ ಯೋಜನೆಯನ್ವಯ ರಾಜ್ಯದ 1.25 ಕೋಟಿ ಮಹಿಳೆಯರಿಗೆ ಮಾಸಿಕ 1000 ರೂ. ಭತ್ಯೆ ಲಭಿಸಲಿದೆ.
ಮಧ್ಯಪ್ರದೇಶ ರಾಜ್ಯದ 1.25 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 1000 ರೂ. ಜಮೆ ಮಾಡುವ ಯೋಜನೆಗೆ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಶನಿವಾರ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ 2.6 ಕೋಟಿ ಮಹಿಳಾ ಮತದಾರರಿದ್ದು, ರಾಜ್ಯದ 230 ವಿಧಾನಸಭಾ ಕ್ಷೇತ್ರಗಳ ಪೈಕಿ 18ರಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರನ್ನು ಓಲೈಸುವ ಸಲುವಾಗಿ ‘ಲಾಡ್ಲಿ ಬೆಹನಾ’ ಯೋಜನೆ ಜಾರಿಗೆ ತರಲಾಗಿದ್ದು, ಇದು 23 ರಿಂದ 60 ವರ್ಷ ವಯೋಮಾನದ ಮಹಿಳೆಯರಿಗೆ (ಆದಾಯ ತೆರಿಗೆದಾರರನ್ನು ಹಾಗೂ ವಾರ್ಷಿಕ ಆದಾಯ 2.5 ಲಕ್ಷ ರೂ. ದಾಟುವವರನ್ನು ಹೊರತುಪಡಿಸಿ) ಅನ್ವಯ ಆಗಲಿದೆ.
ಇದನ್ನು ಓದಿ: ಅಕ್ಟೋಬರ್ 11 ರಂದು Ujjain ಮಹಾಕಾಲ ಲೋಕ ಉದ್ಘಾಟನೆ: ಪ್ರಧಾನಿ Modiಯಿಂದ ಲೋಕಾರ್ಪಣೆ
ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಗೆದ್ದರೆ ತಾನು ಹಲವು ಉಚಿತ ಯೋಜನೆಗಳು ಹಾಗೂ ಜನ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಈಗಾಗಲೇ ವಿಪಕ್ಷ ಕಾಂಗ್ರೆಸ್ ಕೂಡಾ ಘೋಷಿಸಿದೆ. ಇದರಲ್ಲಿ ಮಹಿಳೆಯರಿಗೆ ಮಾಸಿಕ 1500 ರೂ. ಭತ್ಯೆ, 100 ಯೂನಿಟ್ ಉಚಿತ ವಿದ್ಯುತ್, 500 ರೂ. ಗೆ ಗ್ಯಾಸ್ ಸಿಲಿಂಡರ್, ರೈತ ಸಾಲ ಮನ್ನಾ, ಹಳೇ ಪಿಂಚಣಿ ಯೋಜನೆ ಸೇರಿವೆ.
ಯೋಜನೆಯ ಹೈಲೈಟ್ಸ್
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು: ತಪ್ಪಿತು ಮತ್ತೊಂದು ದೊಡ್ಡ ಅನಾಹುತ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ