ಆರ್‌​ಬಿಐ ಅನು​ಮತಿ ಇಲ್ಲದೇ 5 ಶಾಖೆ: ಸಹ​ಕಾರ ಬ್ಯಾಂಕ್‌ಗೆ ಅನು​ಮ​ತಿ

Published : Jun 10, 2023, 12:30 AM IST
ಆರ್‌​ಬಿಐ ಅನು​ಮತಿ ಇಲ್ಲದೇ 5 ಶಾಖೆ: ಸಹ​ಕಾರ ಬ್ಯಾಂಕ್‌ಗೆ ಅನು​ಮ​ತಿ

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ನೇತೃತ್ವದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 

ನವದೆಹಲಿ(ಜೂ.10):  ದೇಶದಲ್ಲಿರುವ 1,514 ನಗರ ಪ್ರದೇಶ ಸಹಕಾರಿ ಬ್ಯಾಂಕ್‌ಗಳ ಬಲವರ್ಧನೆಗಾಗಿ ಪೂರ್ವಾನುಮತಿ ಇಲ್ಲದೇ ಗರಿಷ್ಠ 5 ಶಾಖೆಗಳನ್ನು ತೆರೆಯಲು ಅನುಮತಿ ಸೇರಿದಂತೆ 4 ಪ್ರಮುಖ ಕ್ರಮಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಕೈಗೊಂಡಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ನೇತೃತ್ವದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಸಹಕಾರಿ ಬ್ಯಾಂಕ್‌ಗಳು, 1 ವರ್ಷ​ದ​ಲ್ಲಿ ಒಟ್ಟಾರೆ ಶಾಖೆಗಳಿಗಿಂತ ಹೆಚ್ಚುವರಿ ಶೇ.10ರಷ್ಟುಶಾಖೆಗಳನ್ನು ಆರ್‌ಬಿಐ ಪೂರ್ವಾನುಮತಿ ಇಲ್ಲದೇ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಗರಿಷ್ಠ 5 ಶಾಖೆಗಳನ್ನಷ್ಟೇ ತೆರೆಯಬಹುದಾಗಿದೆ.

ಇನ್ಮುಂದೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕೂಡ ಇ-ರುಪಿ ವೋಚರ್ ವಿತರಿಸಬಹುದು: ಆರ್ ಬಿಐ

ಅದೇ ರೀತಿ ಆದ್ಯತಾ ವಲಯಕ್ಕೆ ಸಾಲ ನೀಡಲು ಈ ಬ್ಯಾಂಕ್‌ಗಳಿಗೆ ವಿಧಿಸಲಾಗಿದ್ದ ಮಿತಿಯನ್ನು 2026ರ ಮಾ.31ರವೆಗೆ ವಿಸ್ತರಿಸಲಾಗಿದೆ. ಆದ್ಯತಾ ವಲಯವನ್ನು ಗುರುತಿಸುವ ಅವಧಿಯನ್ನೂ ಸಹ 2024ರ ಮಾ.31ಕ್ಕೆ ವಿಸ್ತರಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳಿಗೆ ನೀಡಿರುವಂತೆ ಒಂದೇ ಬಾರಿಗೆ ಸೆಟಲ್‌ಮೆಂಟ್‌ ಮಾಡುವ ಅವಕಾಶವನ್ನು ಈ ಸಹಕಾರಿ ಬ್ಯಾಂಕ್‌ಗಳಿಗೂ ಒದಗಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!