
ಲಕ್ನೋ(ಮೇ.23): ಉತ್ತರ ಪ್ರದೇಶದ ಮಸೀದಿಗಳಲ್ಲಿ ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಮಾಡಲಾಗಿದೆ ಇನ್ನೂ ಹಲವೆಡೆ ಇದರ ಸಹವಾಸವೇ ಬೇಡ ಎಂದು ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ. ತೆಗೆದ ಧ್ವನಿವರ್ಧಕಗಳನ್ನು ಶಾಲೆ, ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರಪತ್ರಿಕೆಗಳಾದ ಆರ್ಗನೈಸರ್ ಮತ್ತು ಪಾಂಚಜನ್ಯ 75 ವರ್ಷಗಳನ್ನು ಪೂರೈಸಿದ ಕುರಿತು ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, “ಚುನಾವಣೆ ಮುಗಿದ ನಂತರ ಹಲವು ರಾಜ್ಯಗಳಲ್ಲಿ ಗಲಭೆಗಳು ನಡೆದಿವೆ. ಚುನಾವಣೆ ವೇಳೆ ಅಥವಾ ನಂತರ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆ ನಡೆದಿಲ್ಲ. ಇದೇ ಉತ್ತರಪ್ರದೇಶದಲ್ಲಿ ಈ ಹಿಂದೆ ಸಣ್ಣಪುಟ್ಟ ವಿಚಾರಗಳಿಗೆ ಗಲಭೆಗಳು ನಡೆಯುತ್ತಿದ್ದವು.
ಕಾಫಿನಾಡಿನಲ್ಲಿ ನಮಾಜ್ ವೇಳೆ ದೇವಸ್ಥಾನದಲ್ಲಿ ಮೊಳಗಿದ ಸುಪ್ರಭಾತ!
ರಾಜ್ಯದಲ್ಲಿ ಬಿಡಾಡಿ ಪ್ರಾಣಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ಪ್ರಸ್ತಾಪಿಸಿದರು. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಲೌಡ್‌ಸ್ಪೀಕರ್ ಅಳವಡಿಕೆ ಮೂಲಭೂತ ಹಕ್ಕಲ್ಲ
ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ಅಳವಡಿಕೆ ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಚ್ ಮಹತ್ವದ ತೀರ್ಪು ಪ್ರಕಟಿಸಿದೆ. ದೇಶದ ಹಲವೆಡೆ ಮಸೀದಿಗಳಲ್ಲಿ ಅಕ್ರಮವಾಗಿ ಲೌಡ್‌ಸ್ಪೀಕರ್ ಹಾಕಿ ಆಜಾನ್ ಮೊಳಗಿಸಲಾಗುತ್ತಿದೆ ಎಂದು ಗಲಾಟೆಗಳ ನಡೆದಿರುವ ನಡುವೆಯೇ, ಹೈಕೋರ್ಚ್ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ ಹಾಗೂ ಅಳವಡಿಕೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದೆ.
ಬದಾಯೂ ಜಿಲ್ಲೆಯ ಧೋರನ್‌ಪುರ ಗ್ರಾಮದ ನೂರಾನಿ ಮಸೀದಿಯಲ್ಲಿ ಆಜಾನ್ ಮೊಳಗಿಸಲು ಲೌಡ್‌ಸ್ಪೀಕರ್ ಅಳವಡಿಕೆಗೆ ಅನುಮತಿ ಕೋರಿ, ಬಿಸೌಲಿ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಅರ್ಜಿಯನ್ನು ಉಪವಿಭಾಗಾಧಿಕಾರಿಗಳು 2021ರ ಡಿ.3ರಂದು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಇರ್ಫಾನ್ ಎಂಬ ವ್ಯಕ್ತಿ ಹೈಕೋರ್ಚ್ ಮೊರೆ ಹೋಗಿದ್ದ. ‘ಉಪವಿಭಾಗಾಧಿಕಾರಿಗಳ ನಿರ್ಧಾರದಿಂದ ನಮ್ಮ ಕಾನೂನಾತ್ಮಕ ಹಕ್ಕು ಹಾಗೂ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ’ ಎಂದು ವಾದಿಸಿದ್ದ.
ಮೋದಿ ಹೋದ್ರೆ, ಗುಜರಾತ್ ಕೂಡ ಹೋಗುತ್ತೆ ಅಂತಾ ಆಡ್ವಾಣಿಗೆ ಹೇಳಿದ್ರು ಬಾಳಾಸಾಹೇಬ್ ಠಾಕ್ರೆ!
ಆದರೆ ಅರ್ಜಿ ತಿರಸ್ಕರಿಸಿದ ಹೈಕೋರ್ಚ್‌ನ ದ್ವಿಸದಸ್ಯ ಪೀಠ, ‘ಮಸೀದಿ ಮೇಲೆ ಲೌಡ್ ಸ್ಪೀಕರ್ ಅಳವಡಿಕೆ ಮೂಲಭೂತ ಹಕ್ಕಲ್ಲ’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ನಾಯಿ ಸಾಕುವವರಿಗೆ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ವಾರ್ನಿಂಗ್
ಉತ್ತರ ಪ್ರದೇಶದಲ್ಲಿ ಸ್ವಚ್ಛತೆ ವ್ಯವಸ್ಥೆ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜವಾಬ್ದಾರಿಯುತರಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಸಾಕು ನಾಯಿ ಸಾಕುವವರಿಗೆ ವಿಶೇಷ ಹಾಗೂ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮನೆಯಲ್ಲಿ ಸಾಕಿದ ನಾಯಿಗಳನ್ನು ಸಾಕುವವರು ಬೀದಿಗಿಳಿಸಿ ಕೊಳಕು ಸೃಷ್ಟಿಸಬಾರದು ಎಂದರು. ಅಗತ್ಯವಿದ್ದರೆ ಅವುಗಳ ನೋಂದಾಯಿಸಲು ಖಚಿತಪಡಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಲಸಿಕೆ ಹಾಕುವುದನ್ನು ಸಹ ಖಚಿತಪಡಿಸಿಕೊಳ್ಳಿ. ಮಹಾನಗರ ಪಾಲಿಕೆ ಹಾಗೂ ಇತರೆ ಜವಾಬ್ದಾರಿಯುತ ಇಲಾಖೆಗಳು ಈ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳುವಂತೆ ತಿಳಿಸಿದರು.
ರಿಕ್ಷಾದಲ್ಲಿ ಬಿಟ್ಟೋಗಿದ್ದ 1.6 ಲಕ್ಷದ ನೆಕ್ಲೇಸ್ ಹಿಂದಿರುಗಿಸಿದ ಆಟೋ ಚಾಲಕ
ಸಿಎಂ ಯೋಗಿ ಅವರ ನೇರ ಆದೇಶ
ರಸ್ತೆ ನಿಮ್ಮ ಸೊಸೈಟಿಗೆ ಸೇರಿರಲಿ ಅಥವಾ ಮಹಾನಗರ ಪಾಲಿಕೆಗೆ ಸೇರಿರಲಿ, ಯಾರಾದರೂ ತಮ್ಮ ನಾಯಿಯನ್ನು ಶೌಚ ಮಾಡಿಸುವ ಉದ್ದೇಶದಿಂದ ಹೊರತಂದು ತಿರುಗಾಡಿಸುವುದು ಕಂಡುಬಂದರೆ ತಕ್ಷಣವೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದೆ ಸರ್ಕಾರ. ವಾಸ್ತವವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಾಯಿ ಮಾಲೀಕರಿಗೆ ಅಂದರೆ ಸಾಕುಪ್ರಾಣಿಗಳ ಮಾಲೀಕರಿಗೆ ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ. ನಾಯಿ ಸಾಕುವವರಿಗೆ ಸ್ವಚ್ಛತೆ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿದ ಸಿಎಂ ಯೋಗಿ, 'ಕಾನ್ಪುರ ಮತ್ತು ಲಖನೌ ನಾಯಿ ಮಾಲೀಕರಿಗೆ ಪ್ರಾಣಿಗಳನ್ನು ರಸ್ತೆಗೆ ಕರೆದೊಯ್ಯುವಾಗ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಹಾಗೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಾಕು ಪ್ರಾಣಿಯನ್ನು ಹೊರಗೆ ಕರೆದುಕೊಂಡು ಹೋಗುವಾಗ ಸ್ವಚ್ಛತೆ ಕಾಪಾಡಿ ಎಂದು ಸಿಎಂ ಯೋಗಿ ಹೇಳಿದ್ದಾರೆ. ರಸ್ತೆಯಲ್ಲಿ ಕಸ ಹಾಕಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದೂ ವಾರ್ನಿಂಗ್ ಕೊಟ್ಟಿದ್ದಾರೆ.
ನಿಗಮದ ನೌಕರರಿಗೆ ಸೂಚನೆ ನೀಡಲಾಗಿದೆ
ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವುದು ನಗರಸಭೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಕೆಲಸವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಜನರು ಸ್ವತಃ ಜಾಗೃತರಾಗುವವರೆಗೆ ಅವರಿಗೆ ವಿವರಿಸಿ. ಇದಾದ ನಂತರವೂ ಜನರು ತಮ್ಮ ಸಾಕುನಾಯಿಯೊಂದಿಗೆ ರಸ್ತೆಯಲ್ಲಿ ಕಸ ಹಾಕುತ್ತಿರುವುದು ಕಂಡು ಬಂದರೆ ಕೂಡಲೇ ತಡೆದು ಅವರನ್ನು ಗುರುತಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ