Latest Videos

ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಮನೆಯಲ್ಲಿ ವಾಸ: ಫ್ರಿಡ್ಜ್‌ನಲ್ಲಿ ಗೋಮಾಂಸ: 11 ಜನರ ಮನೆ ಧ್ವಂಸ

By Kannadaprabha NewsFirst Published Jun 17, 2024, 1:14 PM IST
Highlights

ಫ್ರಿಡ್ಜ್‌ನಲ್ಲಿ ಗೋಮಾಂಸ ಹಾಗೂ ಕೊಠಡಿಗಳಲ್ಲಿ ದನದ ಮೂಳೆ ಹಾಗೂ ಚರ್ಮಗಳನ್ನು ಶೇಖರಿಸಿಟ್ಟಿದ್ದ 11 ಜನರ ಮನೆಯನ್ನು ಸರ್ಕಾರವು ಧ್ವಂಸ ಮಾಡಿದೆ. 

ಮಂಡ್ಲಾ (ಮ.ಪ್ರ): ಫ್ರಿಡ್ಜ್‌ನಲ್ಲಿ ಗೋಮಾಂಸ ಹಾಗೂ ಕೊಠಡಿಗಳಲ್ಲಿ ದನದ ಮೂಳೆ ಹಾಗೂ ಚರ್ಮಗಳನ್ನು ಶೇಖರಿಸಿಟ್ಟಿದ್ದ 11 ಜನರ ಮನೆಯನ್ನು ಸರ್ಕಾರವು ಧ್ವಂಸ ಮಾಡಿದೆ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದ ಕಾರಣ ನೀಡಿ ಇವರ ಮನೆಯನ್ನು ಕೆಡವಲಾಗಿದೆ. ಮಧ್ಯ ಪ್ರದೇಶದ ಮಂಡ್ಲಾದಲ್ಲಿ ಈ ಘಟನೆ ನಡೆದಿದೆ. 

ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಅಕ್ರಮ ಗೋಮಾಂಸದ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ಭಾಗವಾಗಿ ಭೈನ್‌ವಾಹಿ ಎಂಬಲ್ಲಿ ದನಗಳನ್ನು ಕಡಿಯಲು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕ ಬಳಿಕ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆರೋಪಿಗಳ ಮನೆಯ ಹಿಂಭಾಗದಲ್ಲಿ 150 ಗೋವುಗಳನ್ನು ಕಟ್ಟಿಹಾಕಿದ್ದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಮನೆಯ ಬೀಗ ಒಡೆದು ಒಳನುಗ್ಗಿದಾಗ ಮನೆಯ ಫ್ರಿಡ್ಜ್‌ನಲ್ಲಿ ಗೋಮಾಂಸ, ಕೊಠಡಿಯಲ್ಲಿ, ದನದ ಚರ್ಮ, ಮೂಳೆ ಹಾಗೂ ಬೊಜ್ಜು ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ. ಕೂಡಲೇ ಅವುಗಳನ್ನು ವಶಪಡಿಸಿಕೊಂಡ ಪೊಲೀಸರು, ದನಗಳನ್ನು ಗೋಶಾಲೆಗೆ ಸೇರಿಸಿ ಮನೆಯನ್ನು ಧ್ವಂಸ ಮಾಡಿದ್ದಾರೆ. ಸರ್ಕಾರಿ ಜಾಗ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಿದ ಕಾರಣ ಅವನ್ನು ಕೆಡವಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ನಡುವೆ, ಮುಸ್ಲಿಂ ಸಮುದಾಯಕ್ಕೆ ಸೇರಿರುವ ಎಲ್ಲ 11 ಆರೋಪಿಗಳ ಪೈಕಿ ಕೇವಲ ಒಬ್ಬ ಮಾತ್ರ ಸಿಕ್ಕಿದ್ದು, ಉಳಿದ 10 ಮಂದಿಗಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಕ್ರಮ ಗೋಮಾಂಸ ಸಾಗಾಟ; ತಡೆಯಲು ಯತ್ನಿಸಿದ ಬಜರಂಗದಳ ಕಾರ್ಯಕರ್ತರ ಮೇಲೆ ಅನ್ಯಕೋಮಿನ ವ್ಯಕ್ತಿಗಳಿಂದ ಹಲ್ಲೆ

‘ಗೋಮಾಂಸ ಪ್ರಚಾರಕಿ’ ಕಾಮಿಯಾ ಜಗನ್ನಾಥ ದೇಗುಲ ಪ್ರವೇಶ ಭಾರೀ ವಿವಾದ

click me!