
ತಿರುಮಲ: ಒಟ್ಟೊಟ್ಟಿಗೆ ಬಂದ ಸೆಕೆಂಡ್ ಸಟರ್ಡೇ, ಭಾನುವಾರ ಹಾಗೂ ಸೋಮವಾರ ಬಕ್ರೀದ್ ಹಬ್ಬದ ರಜೆಯಿಂದಾಗಿ ಹಿಂದೂ ತೀರ್ಥಕ್ಷೇತ್ರ ತಿರುಪತಿಯಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದು, ದೇವರ ದರ್ಶನಕ್ಕಾಗಿ 3 ಕಿಲೋ ಮೀಟರ್ ಸರತಿಯಲ್ಲಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಶನಿವಾರ, ಭಾನುವಾರದ ರಜೆ ಹಾಗೂ ಸೋಮವಾರ ಬಕ್ರೀದ್ ರಜೆ ಕಾರಣ ತಿರುಮಲದ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಶನಿವಾರ ಭಾರೀ ಜನದಟ್ಟಣೆ ಕಂಡುಬಂದಿದ್ದು, ಭಕ್ತಾದಿಗಳು ದೇವರ ದರ್ಶನಕ್ಕಾಗಿ ಸುಮಾರು 3 ಕಿ.ಮೀ.ವರೆಗೂ ಸರತಿ ಸಾಲಿನಲ್ಲಿ ನಿಂತಿದ್ದರು.
ತಿರುಪತಿಯಲ್ಲಿ ತಲೆ ಬೋಳಿಸಿಕೊಂಡ ದಕ್ಷಿಣದ ಪ್ರಖ್ಯಾತ ನಟಿ!
ದೇಶದಲ್ಲಿ ಚುನಾವಣೆ ಮುಕ್ತಾಯಗೊಂಡಿದ್ದು, ಅನೇಕ ಪರೀಕ್ಷೆಗಳ ಫಲಿತಾಂಶವೂ ಹೊರಬಿದ್ದಿದೆ. ಇದರ ಜೊತೆಗೆ ವಾರಾಂತ್ಯ ಹಾಗೂ ಬಕ್ರೀದ್ ಹಬ್ಬ ಜೊತೆ ಜೊತೆಗೆ ಬಂದಿರುವುದರಿಂದ ಮಕ್ಕಳಿಗೂ ಶಾಲೆಗೆ ರಜೆ ಇದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಈ ದಟ್ಟಣೆ ಸೋಮವಾರದವರೆಗೂ ಅಂದರೆ ಇಂದು ಸಂಜೆಯವರೆಗೂ ಮುಂದುವರೆಯುವ ಸಾಧ್ಯತೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ತಿಳಿಸಿದೆ.
ಈ ನಿಟ್ಟಿನಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ದೇಗುಲ ಟ್ರಸ್ಟ್ ಹೇಳಿದೆ.
ಭ್ರಷ್ಟಾಚಾರ ಕೊನೆಗೊಳಿಸುವೆ, ಹಿಂದೂ ಧರ್ಮ ರಕ್ಷಿಸುವೆ: ತಿರುಪತಿಗೆ ಭೇಟಿ ಬಳಿಕ ಆಂಧ್ರ ಸಿಎಂ ನಾಯ್ಡು ವಾಗ್ದಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ