ಅಯ್ಯೋ ಕಾಪಾಡಿ... ಪಾರ್ಟಿಗೆ ಬಂದ ಸಿಂಹಿಣಿ: ಮರವೇರಿದ ಅತಿಥಿ video viral

Published : Sep 15, 2022, 12:16 PM ISTUpdated : Sep 15, 2022, 02:32 PM IST
ಅಯ್ಯೋ ಕಾಪಾಡಿ... ಪಾರ್ಟಿಗೆ ಬಂದ ಸಿಂಹಿಣಿ: ಮರವೇರಿದ ಅತಿಥಿ video viral

ಸಾರಾಂಶ

ಸಡನ್ ಆಗಿ ಸಿಂಹ ಎದುರಾದರೆ ಏನು ಮಾಡಬಹುದು. ಒಮ್ಮೆಗೆ ಮೀಟರ್ ಆಫ್ ಆಗುವುದಂತು ಗ್ಯಾರಂಟಿ. ಅದೇ ರೀತಿಯ ಸ್ಥಿತಿ ಇಲ್ಲೊಂದು ಕಡೆ ನಡೆದಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾನ್ಯವಾಗಿ ಪಾರ್ಟಿಗಳಿಗೆ ಸಖತ್ ಆಗಿ ಎಂಜಾಯ್ ಮಾಡುವ ಸಲುವಾಗಿ ಎಲ್ಲರೂ ಹೋಗುತ್ತಾರೆ. ಸ್ನೇಹಿತರ ಜೊತೆಗೂಡಿ ಉತ್ತಮವಾದ ಸಮಯವನ್ನು ಕಳೆಯಲು ಬಯಸುತ್ತಾರೆ. ಆದರೆ ಈ ವೇಳೆ ಸಡನ್ ಆಗಿ ಸಿಂಹ ಎದುರಾದರೆ ಏನು ಮಾಡಬಹುದು. ಒಮ್ಮೆಗೆ ಮೀಟರ್ ಆಫ್ ಆಗುವುದಂತು ಗ್ಯಾರಂಟಿ. ಅದೇ ರೀತಿಯ ಸ್ಥಿತಿ ಇಲ್ಲೊಂದು ಕಡೆ ನಡೆದಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋಗೆ ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ. 

ಹುಲಿ ಸಿಂಹ ಮುಂತಾದ ಪರಭಕ್ಷಕ ಪ್ರಾಣಿಗಳು ತಮಗೆ ಹಸಿವಾಗದ ಹೊರತು ಬೇರೆ ಪ್ರಾಣಿಗಳ ಮೇಲೆ ಕಣ್ಣು ಹಾಕುವುದಿಲ್ಲ. ಆದರೆ ಹಸಿವಾದರೆ ಎದುರು ಸಿಕ್ಕಿದ್ದನ್ನು ಸುಮ್ಮನೆ ಬಿಡುವುದಿಲ್ಲ. ಕೈಗಾರಿಕೆ ಹಾಗೂ ಆಧುನೀಕರಣದ ಪರಿಣಾಮ ವನ್ಯಜೀವಿಗಳ (Wildlife) ಆವಾಸ ಸ್ಥಾನ ವಿನಾಶದತ್ತ ಸಾಗುತ್ತಿದೆ. ಈ ಕಾರಣಕ್ಕೆ ಕಾಡುಪ್ರಾಣಿಗಳು ನಾಡಂಚಿನ ಗ್ರಾಮಕ್ಕೆ ಬಂದು ದಾಂಧಲೆ ನಡೆಸುವುದು ಇತ್ತೀಚೆಗೆ ಸಾಮಾನ್ಯ ಎನಿಸಿದೆ. ಕಾಡುಪ್ರಾಣಿಗಳ ಉಪಟಳಕ್ಕೆ ಸಿಲುಕಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಈ ಮಧ್ಯೆ ಸಮಾರಂಭವೊಂದಕ್ಕೆ ನುಗ್ಗಿದ ಸಿಂಹವೊಂದು (lion) ಅಲ್ಲಿ ಅತಿಥಿಯೊಬ್ಬರನ್ನು ಓಡಿಸಿದ್ದು, ಇದರ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.

 

ವಿಡಿಯೋದಲ್ಲಿ ಕಾಣಿಸುವಂತೆ ಸಿಂಹವೊಂದು ಪಾರ್ಟಿ ನಡೆಯುತ್ತಿದ್ದ ರೆಸಾರ್ಟ್ (Resort)ವೊಂದಕ್ಕೆ ಬಂದಿದ್ದು, ಈ ವೇಳೆ ಅಲ್ಲಿದ್ದ ಅತಿಥಿಯೊಬ್ಬರು ಹೆದರಿ ಅಲ್ಲೇ ಇದ್ದ ತಾಳೆಯ ಮರವೊಂದನ್ನು ಏರುತ್ತಾರೆ. ಈ ವೇಳೆ ಆತನನ್ನು ಬೆನ್ನಟ್ಟಿದ ಸಿಂಹವೂ ಕೂಡ ತಾಳೆಯ ಮರವೇರಿದ್ದು, ಈ ವೇಳೆ ಮರವೇರಿದಾತ ತನ್ನ ಕಾಲಿನಿಂದ ಕೆಳಗಿದ್ದ ಸಿಂಹಕ್ಕೆ ಒದೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನೋಡುಗರಿಗೆ ಈ ವಿಡಿಯೋ ಒಂದು ಕ್ಷಣ ಅವಕ್ಕಾಗುವಂತೆ ಮಾಡುತ್ತಿದೆ. ಹೀಗಿರುವಾಗ ಸಿಂಹ ಬೆನ್ನಟ್ಟಿದ ಆ ವ್ಯಕ್ತಿಯ ಸ್ಥಿತಿ ಏನಾಗಿರಬಹುದು. ನೀವೇ ಯೋಚಿಸಿ.

 

ಆದರೆ ಕೊನೆಗೂ ಏನಾಯಿತು ಎಂಬ ಬಗ್ಗೆ ಈ ವಿಡಿಯೋದಲ್ಲಿ ವಿವರಗಳಿಲ್ಲ. ಹಳೆಯ ವಿಡಿಯೋ ಈಗ ವೈರಲ್ ಆಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಇದು ಎಲ್ಲಿ ನಡೆದಿದೆ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. lions.habitat ಎಂಬ ಇನ್ಸ್ಟಾ ಪೇಜ್‌ನಿಂದ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದವರು ಕೆಲವರು ಭಯ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ನಾನು ಸಿಂಹಗಳು ಮರವೇರಲ್ಲ ಎಂದು ಭಾವಿಸಿದ್ದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು ಈ ದೃಶ್ಯವನ್ನು ಯಾರೂ ರೆಕಾರ್ಡ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಸಿಂಹ ಅಷ್ಟೊಂದು ಆಕ್ರಮಣಕಾರಿಯಾಗಿ ಕಾಣಿಸುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಭಯ ಮೂಡಿಸುವುದಂತೂ ನಿಜ.

ಕಣ್ಣೀರು ತರಿಸುತ್ತಿದೆ ಕಾಡಿನ ರಾಜನ ದುಸ್ಥಿತಿ: ತಿನ್ನಲು ಆಹಾರವಿಲ್ಲದೇ ಅಸ್ಥಿಪಂಜರದಂತಾದ ಸಿಂಹಗಳು

ಕಳೆದ ಡಿಸೆಂಬರ್‌ನಲ್ಲಿ ತನ್ನ ಮೇಲೆ ದಾಳಿ ಮಾಡಲು ಬಂದ ಎರಡು ಸಿಂಹಗಳನ್ನು ಎತ್ತೊಂದು ಬೆನ್ನಟ್ಟಿದ ಘಟನೆ ಗುಜರಾತ್‌ ರಾಜ್ಯದ ಹಳ್ಳಿಯೊಂದರಲ್ಲಿ ನಡೆದಿತ್ತು. ಇದರ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ ಬಳಿಕ ಈ ರೋಚಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜುನಗಡ (Junagad) ಜಿಲ್ಲೆಯ ವಿಶ್ವದರ ತಾಲೂಕಿನ ಹದಮತಿಯಾ (Hadmatiya) ಹಳ್ಳಿಗೆ ಎರಡು ಸಿಂಹಗಳು ಸುತ್ತಾಡುತ್ತಾ ಬಂದಿದ್ದು, ಅಲ್ಲೇ ಇದ್ದ ಎತ್ತೊಂದರ ಮೇಲೆ ದಾಳಿ ಮಾಡಲು ಯತ್ನಿಸಿವೆ. ಆರಂಭದಲ್ಲಿ ಸ್ವಲ್ಪ ಹಿಂಜರಿದ ಎತ್ತು ನಂತರ ಈ ಎರಡೂ ಸಿಂಹಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ. ಸಿಂಹಗಳು ಮತ್ತೆ ಮತ್ತೆ ದಾಳಿಗೆ  ಯತ್ನಿಸುತ್ತಿದ್ದಂತೆ ಎತ್ತು ಅವುಗಳತ್ತ ಮುನ್ನುಗಿ ಅವುಗಳನ್ನು ಓಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ನೋಡಿದ ಅನೇಕರು ಎತ್ತಿನ ಸಾಹಸವನ್ನು ಕೊಂಡಾಡಿದ್ದರು.

WorldLionDay: ಗಿರ್‌ ಅರಣ್ಯದಲ್ಲಿ ರಾಜ ರಾಣಿ ಮಕ್ಕಳು... ಅಪರೂಪದ ದೃಶ್ಯ ಸೆರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..