Hindi Diwas: ದೇಶದ ಏಕತೆಗೆ ಹಿಂದಿ ಅತ್ಯಂತ ನಿರ್ಣಾಯಕ; ಕೇಂದ್ರ ಶಿಕ್ಷಣ ಸಚಿವರ ವಾದ

By BK Ashwin  |  First Published Sep 15, 2022, 11:31 AM IST

ಕೇಂದ್ರ ಬಿಜೆಪಿ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ಹಲವು ರಾಜ್ಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ಕೇಂದ್ರ ಸಚಿವರು ಹಿಂದಿ ಭಾಷೆಯನ್ನು ಸಮರ್ಥಿಸಿಕೊಂಡಿದ್ದು, ಇದು ಅಗತ್ಯವೆಂದು ಕೇಂದ್ರ ಶಿಕ್ಷಣ ಸಚಿವರು ಹೇಳಿದ್ದಾರೆ. 


ದೇಶದ ಹಲವೆಡೆ ನಿನ್ನೆ, ಸೆಪ್ಟೆಂಬರ್ 14 ರಂದು ಹಿಂದಿ ದಿವಸದ ಆಚರಣೆ ನಡೆಸಲಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಾಕಷ್ಟು ವಿರೋಧದ ನಡುವೆಯೂ ಹಲವೆಡೆ ಆಚರಣೆ ನಡೆದಿದೆ. ಅಲ್ಲದೆ, ಹಿಂದಿ ದಿವಸದ ಬಗ್ಗೆ ಹಾಗೂ ಹಿಂದಿಯ ಅಗತ್ಯತೆಯ ಬಗಗೆ ಕೇಂದ್ರ ಸಚಿವರು ಸೇರಿ ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ. ದೇಶವನ್ನು ಒಗ್ಗೂಡಿಸಲು ಹಿಂದಿ ಭಾಷೆ ಅಗತ್ಯ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಪ್ರತಿಪಾದಿಸಿದ್ದರು. ಇದೇ ರೀತಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಸಹ ಹಿಂದಿ ಭಾಷೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಮ್ಮ ವ್ಯವಹಾರಗಳಲ್ಲಿ ಹಿಂದಿ ಬಳಕೆಯು ಅತ್ಯಂತ ಅವಶ್ಯಕವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹಿಂದಿ ದಿವಸ್ ಅಂಗವಾಗಿ ತಿಳಿಸಿದ್ದಾರೆ.

“ಹಲವು ಉಪಭಾಷೆಗಳನ್ನು ಒಳಗೊಂಡಿರುವ ಹಿಂದಿ ಭಾಷೆಯು ಭಾರತವನ್ನು ಏಕತೆಯ ಎಳೆಯಿಂದ ಕಟ್ಟುವಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇಂದಿಗೂ ಜಗತ್ತಿನ ಹಲವು ಭಾಷೆಗಳಲ್ಲಿ ಹಿಂದಿ ಪದಗಳು ಬಳಕೆಯಾಗುತ್ತಿವೆ. ಹಿಂದಿ ದಿವಸ್ ಹಿನ್ನೆಲೆ ಎಲ್ಲರಿಗೂ ಶುಭಾಶಯಗಳು. ನಮ್ಮ ಮಾತೃಭಾಷೆಯೊಂದಿಗೆ ಹಿಂದಿಯ ಉನ್ನತಿಗೆ ಪಾಲುದಾರರಾಗಲು ನಾವು ಪ್ರತಿಜ್ಞೆ ಮಾಡೋಣ’’ ಎಂದು ಕೇಂದ್ರ ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Tap to resize

Latest Videos

ಇದನ್ನು ಓದಿ: Hindi Diwas: ''ಅಧಿಕೃತ ಭಾಷೆ ಹಿಂದಿ ದೇಶವನ್ನು ಒಗ್ಗೂಡಿಸುತ್ತದೆ'' ಎಂದ ಅಮಿತ್ ಶಾ

ಆಡಳಿತಾರೂಢ ಬಿಜೆಪಿಯಿಂದ ಹಿಂದಿ ಭಾಷೆಯ ಹೇರಿಕೆಯನ್ನು ಹಲವು ರಾಜ್ಯಗಳು ತೀವ್ರವಾಗಿ ವಿರೋಧಿಸುತ್ತಿರುವ ಸಮಯದಲ್ಲೇ ಧರ್ಮೇಂದ್ರ ಪ್ರಧಾನ್‌ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಹಿಂದಿಯಲ್ಲಿ ಟ್ವೀಟ್‌ ಮಾಡಿದ ಕೇಂದ್ರ ಶಿಕ್ಷಣ ಸಚಿವರು,  “ಹಿಂದಿ ಭಾಷೆಯ ಸಂದರ್ಭದಲ್ಲಿ, ದೇಶದ ಏಕತೆ ಮತ್ತು ಸಮಗ್ರತೆಗಾಗಿ, ರಾಷ್ಟ್ರೀಯ ಆಚರಣೆಯಲ್ಲಿ ಹಿಂದಿಯ ಬಳಕೆಯು ಸಂಪೂರ್ಣವಾಗಿ ಅಗತ್ಯ ಎಂದು ನಮ್ಮ ಸಂವಿಧಾನ ರಚಿಸಿದವರು ಸ್ಪಷ್ಟ ಅಭಿಪ್ರಾಯ ಹೊಂದಿದ್ದರು. ಅದರ ವಿಶಾಲತೆ ಮತ್ತು ಔದಾರ್ಯದಿಂದಾಗಿ, ಹಿಂದಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವೂ ಆಗಿದೆ’’ ಎಂದಿದ್ದಾರೆ.

अनेकों भाषाओं-बोलियों को समेटे हिंदी भाषा का भारत को एकता के सूत्र में बांधने में विशेष स्थान रहा है। विश्व की अनेकों भाषाओं में भी आज हिन्दी शब्दों का उपयोग होने लगा है।

हिन्दी दिवस पर सभी को शुभकामनाएं।आइए अपनी मातृभाषा के साथ हिन्दी के उत्थान में भागीदार बनने का संकल्प लें। pic.twitter.com/UNb4Bv8SbC

— Dharmendra Pradhan (@dpradhanbjp)

ಹಾಗೆ, “ಇಡೀ ದೇಶದ ಸಂಪರ್ಕ-ಭಾಷೆಯಾಗಿರುವ ಮೂಲಕ, ಇಡೀ ರಾಷ್ಟ್ರವನ್ನು ಒಂದುಗೂಡಿಸುವಲ್ಲಿ ಹಿಂದಿ ತನ್ನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಅಧಿಕೃತ ಕೆಲಸದಲ್ಲಿ ಭಾರತದ ಒಕ್ಕೂಟದ ರಾಷ್ಟ್ರೀಯ ಭಾಷಾ ನೀತಿಯ ಅನುಸರಣೆ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ಉದ್ಯೋಗಿಯ ಸಾಂವಿಧಾನಿಕ ಕರ್ತವ್ಯವಾಗಿದೆ’’ ಎಂದು ಅವರು ಬರೆದಿದ್ದಾರೆ. ಇದರೊಂದಿಗೆ, "ನಾವು ನಮ್ಮ ಅಧಿಕೃತ ಕೆಲಸದಲ್ಲಿ ಹಿಂದಿಯನ್ನು ಹೆಚ್ಚು ಹೆಚ್ಚು ಬಳಸುತ್ತೇವೆ, ಅಲ್ಲದೆ, ಹಿಂದಿಯನ್ನು ವಿಶ್ವ ವಿಜ್ಞಾನದ ಶ್ರೀಮಂತ ಭಾಷೆಯಾಗಿ ಸ್ಥಾಪಿಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ" ಎಂದೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್  ಬರೆದುಕೊಂಡಿದ್ದಾರೆ.

ಇದದನ್ನೂ ಓದಿ: ಕನ್ನಡ, ಕನ್ನಡಿಗರ ಧ್ವನಿಯಾದ ಕುಮಾರಣ್ಣ, ಹಿಂದಿ ದಿವಸ ಆಚರಣೆ ವಿರೋಧಿಸಿ ಸಿಎಂಗೆ ಪತ್ರ

ಹಿಂದಿ ದಿವಸಕ್ಕೆ ವಿರೋಧಿಸಿ ಸಿಎಂಗೆ ಪತ್ರ ಬರೆದಿದ್ದ ಕುಮಾರಸ್ವಾಮಿ
ರಾಜ್ಯದಲ್ಲಿ ಹಿಂದಿ ದಿವಸ ಆಚರಣೆಯನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದರು.. ಭಾರತವು ಸಾವಿರಾರು ಭಾಷೆ ಹಾಗೂ ಉಪ ಭಾಷೆಗಳನ್ನು ಒಳಗೊಂಡ, 560ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಭಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಒಕ್ಕೂಟವಾಗಿದೆ. ಇಂತಹ ನಾಡಿನಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರವೇ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಅನ್ಯಾಯವಾಗಿದೆ ಎಂದು ಪತ್ರದಲ್ಲಿ ಹೇಳಿದ್ದರು. ಅಲ್ಲದೆ, ಹಿಂದಿ ದಿವಸ ಆಚರಣೆ ವಿರೋಧಿಸಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಪ್ರತಿಭಟನೆಯನ್ನೂ ನಡೆಸಿತ್ತು. ಹಾಗೂ, ಕನ್ನಡ ಪರ ಸಂಘಟನೆಗಳು ಸೇರಿ ಹಲವರು ಹಿಂದಿ ದಿವಸ ಆಚರಣೆಗೆ ವಿರೋಧಿಸಿ ಆಕ್ರೋಶ ಹೊರಹಾಕಿದ್ದಲ್ಲದೆ, ರಾಜ್ಯದ ಹಲವೆಡೆ ಪ್ರತಿಭಟನೆಯನ್ನೂ ನಡೆಸಿದ್ದಾರೆ. 

click me!