ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಶನಿವಾರ ಗುಜರಾತ್‌ನ ಹಜಿರಾದಲ್ಲಿ ತನ್ನ ಲಘು ಯುದ್ಧ ಟ್ಯಾಂಕ್ ಜೊರಾವರ್ ಅನ್ನು ಪರೀಕ್ಷಿಸಿದೆ ಹಾಗೂ ಅನಾವರಣ ಮಾಡಿದೆ.
ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಶನಿವಾರ ಗುಜರಾತ್‌ನ ಹಜಿರಾದಲ್ಲಿ ತನ್ನ ಲಘು ಯುದ್ಧ ಟ್ಯಾಂಕ್ ಜೊರಾವರ್ ಅನ್ನು ಪರೀಕ್ಷಿಸಿದೆ ಹಾಗೂ ಅನಾವರಣ ಮಾಡಿದೆ. ಈ ಟ್ಯಾಂಕ್‌ಗಳನ್ನು ಕಡಿದಾದ ಚೀನಾ-ಲಡಾಖ್ ಗಡಿಯಲ್ಲಿ ನಿಯೋಜಿಸಲಾಗುತ್ತದೆ.ಜೋರಾವರ್ ಅನ್ನು ಡಿಆರ್‌ಡಿಒ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಕೇವಲ ದಾಖಲೆಯ 2 ವರ್ಷದಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಭಾರತೀಯ ಸೇನೆಗಾಗಿ ಸಿದ್ಧಪಡಿಸಲಾಗಿರುವ ಟ್ಯಾಂಕ್‌ಅನ್ನು ಡಿಆರ್‌ಡಿಒ ಮುಖ್ಯಸ್ಥ ಡಾ ಸಮೀರ್ ವಿ. ಕಾಮತ್ ಪರಿಶೀಲಿಸಿದರು.
ಭಾರವಾದ ಟಿ-72 ಮತ್ತು ಟಿ-90 ಟ್ಯಾಂಕ್‌ಗಳಿಗಿಂತ ಹಗುರವಾದ ಮತ್ತು ನೀರು/ಭೂಮಿಯಲ್ಲಿ ಚಲಿಸಬಹುದಾದ ಸಾಮರ್ಥ್ಯಗಳನ್ನು ಹೊಂದಿರುವ ಈ ಲಘು ಟ್ಯಾಂಕ್ 25 ಟನ್ ತೂಗುತ್ತದೆ. ಪರ್ವತಗಳಲ್ಲಿ ಕಡಿದಾದ ಆರೋಹಣಗಳ ಮೂಲಕ ಮತ್ತು ನದಿಗಳು ಮತ್ತು ಇತರ ಜಲಮೂಲಗಳನ್ನು ಸುಲಭವಾಗಿ ದಾಟುತ್ತವೆ. ಕಾಮತ್ ಪ್ರಕಾರ, ಟ್ಯಾಂಕ್ 2027 ರ ವೇಳೆಗೆ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
ಭಾರಿ ಮಳೆಗೆ ಕೊಚ್ಚಿ ಹೋದ ಹೆದ್ದಾರಿ: ಚೀನಾಗೆ ಹೊಂದಿಕೊಂಡಿರುವ ಭಾರತದ ಗ್ರಾಮಕ್ಕೆ ಸಂಪರ್ಕ ಕಡಿತ
Unveiled: India's very own Light Battle Tank, Zorawar.
Developed in a record time of under two years, this DRDO-L&T joint effort is a very agile and powerful machine.
Will soon head for punishing trials in Ladakh.
Based on the short test run I witnessed, will easily conquer pic.twitter.com/fy79p4wOWG
ಭಾರತ-ಚೀನಾ ನಡುವಿನ ಶಾಂತಿ, ಎರಡು ದೇಶಗಳಿಗೆ ಮಾತ್ರವಲ್ಲ ಜಗತ್ತಿಗೆ ಮುಖ್ಯ: ಪ್ರಧಾನಿ ಮೋದಿ