ಸಾಕು ನಾಯಿಗೆ ಇದೆಂಥಾ ಭಾಗ್ಯ, ಶ್ವಾನದ ಕೊರಳಿಗೆ 2.5 ಲಕ್ಷ ಮೌಲ್ಯದ ಚಿನ್ನದ ಸರ ಹಾಕಿದ ಮಹಿಳೆ!

By Santosh NaikFirst Published Jul 6, 2024, 9:44 PM IST
Highlights


Gold Chain For Pet Dog ಸಾಕಿದ ನಾಯಿಗಳನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಸಾಕಷ್ಟು ಕುಟುಂಬಗಳು ಭಾರತದಲ್ಲಿವೆ. ಆದರೆ, ಮುಂಬೈನ ಮಹಿಳೆಯೊಬ್ಬರು ತನ್ನ ಸಾಕು ನಾಯಿಯ ಜನ್ಮದಿನಕ್ಕೆ 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಗಿಫ್ಟ್‌ ಆಗಿ ನೀಡಿದ್ದಾರೆ.

ಮುಂಬೈ (ಜು.6): ಸಾಕಿದ ನಾಯಿಗಳನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಗೀಳು ಭಾರತದಲ್ಲಿ ಹೆಚ್ಚಾಗಿದೆ. ಕೆಲವು ಮನೆಗಳಲ್ಲಂತೂ ಮನೆಯಲ್ಲಿ ಮಕ್ಕಳಿಲ್ಲದಿದ್ದರೂ ತೊಂದರೆ ಇಲ್ಲ. ನಾಯಿ ಇರಬೇಕು ಎನ್ನುವಷ್ಟು ಶ್ವಾನ ಪ್ರೇಮ ಹೊಂದಿದವರನ್ನೂ ಕಂಡಿದ್ದೇವೆ. ನಾಯಿ ಸ್ನಾನ ಮಾಡಿಸೋದೇನು, ಊಟ ತಿನ್ನಿಸೋದೇನು, ಅದರಿಂದ ಕಚ್ಚಿಸಿಕೊಳ್ಳೋದೇನು, ಪರಿ ಪರಿಯಾದ ಡ್ರೆಸ್‌ಗಳನ್ನು ಹಾಕೋದೇನು.. ಒಟ್ಟಾರೆ ಅಂಥಾ ನಾಯಿಗಳು ನಿಜಕ್ಕೂ ಅದೃಷ್ಟವಂಥವು. ಈಗ ಇಂಥ ನಾಯಿಗಳಿಗಿತ ಅದೃಷ್ಟವಂತ ಶ್ವಾನ ಮುಂಬೈನಲ್ಲಿ ಸಿಕ್ಕಿದೆ. ಮುಂಬೈನಲ್ಲಿ ಮಹಿಳೆಯೊಬ್ಬರು ತಮ್ಮ ಮುದ್ದಿನ ನಾಯಿಯ ಜನ್ಮದಿನಕ್ಕೆ 2.5 ಲಕ್ಷ ರೂಪಾಯಿ ಮೌಲ್ಯದ 35 ಗ್ರಾಂ ಚಿನ್ನದ ಸರವನ್ನು ತೊಡಿಸಿದ್ದಾರೆ. ಸಾಕು ನಾಯಿಗೆ ಚಿನ್ನದ ಸರ ಹಾಕಿ ಅವರು ಸಂಭ್ರಮಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಚೆಂಬೂರ್‌ನಲ್ಲಿರುವ ಅನಿಲ್‌ ಜ್ಯುವೆಲ್ಲರ್‌ ಎನ್ನುವ ಆಭರಣ ಮಳಿಗೆಗೆ ತಾವು ಸಾಕಿದ್ದ ಶ್ವಾನವನ್ನು ಕರೆದುಕೊಂಡು ಹೋಗಿರುವ ಸರಿತಾ ಸುಧಾನ ಹೆಸರಿನ ಮಹಿಳೆ, ಅಲ್ಲಿ ಅಂದಾಜು 35 ಗ್ರಾಂನ ಚಿನ್ನದ ಸರವನ್ನು ಖರೀದಿಸಿ ಶ್ವಾನದ ಕೊರಳಿಗೆ ಹಾಕಿದ್ದಾರೆ.

ಇನ್ನು ಚಿನ್ನದ ಸರ ತೊಟ್ಟುಕೊಂಡ ಬಳಿಕ ಶ್ವಾನ ಕೂಡ ಖುಷಿಯಿಂದ ಬಾಲ ಅಲ್ಲಾಡಿಸಿ ಸಂಭ್ರಮಿಸಿದೆ. ಇನ್ನೂ ಸರಿತಾ ಸುಧಾನ ಅವರ ಸಂಭ್ರಮ ಹೇಳತೀರದಾಗಿದೆ. ಈ ವಿಡಿಯೋವನ್ನು ಅನಿಲ್‌ ಜ್ಯುವೆಲ್ಲರ್‌ ತನ್ನ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

Latest Videos

ಪ್ರೀತಿಯ ನಾಯಿಯನ್ನು ಕಳೆದುಕೊಂಡ ನಟಿ, ಶ್ರಾದ್ಧದ ಫೋಟೋ ಜೊತೆ 'ಕ್ಷಮಿಸಿ..' ಎಂದು ಪೋಸ್ಟ್‌!

ಈ ಪೋಸ್ಟ್‌ಗೆ ಸಾವಿರಾರು ಮಂದಿ ಕಾಮೆಂಟ್‌ ಮಾಡಿದ್ದಾರೆ. “ಸಾಕಿದ ನಾಯಿಗೆ ಚಿನ್ನ ಕೊಡಿಸಿದ ನಿಮ್ಮ ಮನಸ್ಸು ಕೂಡ ಬಂಗಾರದಷ್ಟೇ ಮೌಲ್ಯಯುತವಾಗಿದೆ” ಎಂದು ಒಬ್ಬರು ಬರೆದಿದ್ದಾರೆ. “ಈ ವಿಡಿಯೊವನ್ನು ನೋಡುವುದೇ ಖುಷಿ. ನಿಮಗೆ ಹಾಗೂ ನಾಯಿಗೆ ಒಳ್ಳೆಯದಾಗಲಿ” ಎಂದು ಕಾಮೆಂಟ್‌ ಮಾಡಲಾಗಿದೆ. 'ಜಗತ್ತಿನಲ್ಲಿ ನಾಯಿಗಳದ್ದೇ ಆದ ಒಂದು ಸುಂದರ ಪ್ರಪಂಚವಿದೆ. ನಾಯಿಗಳು ನಮ್ಮ ಮನಸ್ಸಿಗೆ, ಹೃದಯಕ್ಕೆ ಆಪ್ತವಾಗುತ್ತವೆ. ಅವು ಕೂಡ ನಮ್ಮ ಸಂಗಾತಿಗಳಾಗಿ ಇರುತ್ತವೆ” ಇನ್ನೊಬ್ಬ ಶ್ವಾನ ಪ್ರೇಮಿ ಬರೆದಿದ್ದಾನೆ. 

ಸಾಕು ನಾಯಿ ಕಚ್ಚಿದ ಬಳಿಕ ತಂದೆ, ಮಗ ರೇಬಿಸ್‌ನಿಂದ ಸಾವು!

“ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಉತ್ತಮ ಬಾಂಧವ್ಯ ಇದೆ, ಭಾವನೆಗಳ ಏರಿಳಿತ ಇದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದೆ” ಎಂಬುದಾಗಿ ಅನಿಲ್‌ ಜ್ಯುವೆಲ್ಲರ್ಸ್‌ ಕೂಡ ಈ ಪೋಸ್ಟ್‌ಗೆ ಕ್ಯಾಪ್ಶನ್‌ ಬರೆದಿದೆ. ಬರೆದುಕೊಂಡಿದೆ. ಮಹಿಳೆಯು ಶ್ವಾನಕ್ಕೆ ಚಿನ್ನದ ಸರ ಕೊಡಿಸಿದ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. ಹಲವು ಮಂದಿ ವಿಡಿಯೊಗೆ ಕಮೆಂಟ್‌ ಮಾಡುವ ಮೂಲಕ ತಮಗೆ ಶ್ವಾನಗಳ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

 

click me!