ಜಿರಳೆ ಪಕ್ಷದದಿಂದ ‘ಲೈಫ್‌ ಆಫ್‌ ಕಾಕ್ರೋಚ್‌’ ಅಭಿಯಾನ ಆರಂಭ!

Kannadaprabha News   | Kannada Prabha
Published : May 31, 2026, 08:14 AM IST
cockroach janta party

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಜಿರಳೆ ಪಕ್ಷವು (ಸಿಜೆಪಿ) 'ಜಿರಳೆಯ ಜೀವನ' ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ, ಸರ್ಕಾರಿ ವೈಫಲ್ಯಗಳು, ಭ್ರಷ್ಟಾಚಾರ, ಮತ್ತು ಮೂಲಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳನ್ನು ಫೋಟೋ/ವಿಡಿಯೋ ಮೂಲಕ ಹಂಚಿಕೊಳ್ಳಲು ಯುವಕರಿಗೆ ಕರೆ ನೀಡಲಾಗಿದೆ. ಈ ಮೂಲಕ ನಾಯಕರ ಮೇಲೆ ಒತ್ತಡ ಹೇರಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ನವದೆಹಲಿ: ಸಿಜೆಐ ಅವರು ನಿರುದ್ಯೋಗಿ ಯುವಕರ ಬಗ್ಗೆ ನೀಡಿದ ಹೇಳಿಕೆಯಿಂದ ಹುಟ್ಟಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವ ಜಿರಳೆ ಪಕ್ಷ(ಸಿಜೆಪಿ) ತನ್ನ ಅಭಿಯಾನವನ್ನು ಅಧಿಕೃತವಾಗಿ ಆರಂಭ ಮಾಡಿದ್ದು, ಅದಕ್ಕೆ ‘ಜಿರಳೆಯ ಜೀವನ’ (ಲೈಫ್‌ ಆಫ್‌ ಕಾಕ್ರೋಚ್‌) ಎಂದು ಹೆಸರಿಟ್ಟಿದೆ.

ಜಿರಳೆ ಪಕ್ಷದಿಂದಹೊಸ ಅಭಿಯಾನ

ಈ ಬಗ್ಗೆ ಪಕ್ಷದ ಎಕ್ಸ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ, ‘ಸರ್ಕಾರದ ದುಃಸ್ಥಿತಿಯಿಂದ ಬೇಸತ್ತಿದ್ದರೂ ಅದರ ವಿರುದ್ಧ ಧ್ವನಿ ಎತ್ತಲಾಗದ ಅಥವಾ ಆ ಕೂಗನ್ನು ಸರಿಯಾದವರಿಗೆ ತಲುಪಿಸಲಾಗದ ಈ ಅಭಿಯಾನವನ್ನು ಆರಂಭ ಮಾಡಲಾಗುತ್ತಿದೆ. ಇದು, ಯುವಕರ ಸ್ಥಿತಿಯನ್ನು ನಾಯಕರಿಗೆ ತೋರಿಸುತ್ತದೆ ಹಾಗೂ ಕಾರ್ಯಪ್ರವೃತ್ತರಾಗುವಂತೆ ಅವರ ಮೇಲೆ ಒತ್ತಡ ಹೇರುತ್ತದೆ’ ಎಂದು ಜಿರಳೆಯೊಂದು ಹೇಳುತ್ತಿರುವಂತೆ ತೋರಿಸಲಾಗಿದೆ.

#LifeOfACockroach ಹ್ಯಾಷ್‌ಟ್ಯಾಗ್‌ ಬಳಸಿ ಪೋಸ್ಟ್‌

ಅಭಿಯಾನದ ಭಾಗವಾಗಿ, ಸರ್ಕಾರಿ ಶಾಲೆ, ಆಸ್ಪತ್ರೆಗಳ ದುಸ್ಥಿತಿ, ಕಚೇರಿಗಳಲ್ಲಾಗುತ್ತಿರುವ ಭ್ರಷ್ಟಾಚಾರ, ರಸ್ತೆಯಲ್ಲಿರುವ ಕಸದ ರಾಶಿ, ಗುಂಡಿಬಿದ್ದ ರಸ್ತೆ, ಕುಡಿವ ನೀರು, ಹಿಂದುಳಿದ ವರ್ಗದವರು ಅಥವಾ ಮಹಿಳೆಯರ ಮೇಲೆ ವ್ಯವಸ್ಥೆಯ ದಬ್ಬಾಳಿಕೆ ಇತ್ಯಾದಿಗಳ ಫೋಟೋ/ವಿಡಿಯೋ ಮಾಡಿ, ಸಿಜೆಪಿಯನ್ನು ಟ್ಯಾಗ್‌ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ #LifeOfACockroach ಹ್ಯಾಷ್‌ಟ್ಯಾಗ್‌ ಬಳಸಿ ಪೋಸ್ಟ್‌ ಮಾಡಲು ಯುವಕರಲ್ಲಿ ವಿನಂತಿಸಲಾಗಿದೆ. ಜತೆಗೆ ಇಂತಹ ಸಮಸ್ಯೆಗಳನ್ನು ಮುನ್ನೆಲೆಗೆ ತಂದು, ಆರ್‌ಟಿಐ ಅರ್ಜಿ ಸಲ್ಲಿಸಿ, ಮಾಧ್ಯಮಗಳ ಗಮನಕ್ಕೆ ತಂದು ನಾಯಕರ ಮೇಲೆ ಒತ್ತಡ ಹೇರಲಾಗುವುದು ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮ ಖಾತೆಗಳು ಬ್ಯಾನ್‌ ಆದರೂ ಹೊಸ ಖಾತೆಗಳ ಮೂಲಕ ಮತ್ತೆ ಪುಟಿದೆದ್ದಿರುವ ಪಕ್ಷವು ದಿನೇದಿನೇ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vice Admiral Krishna Swaminathan: ಕನ್ನಡಿಗನಿಗೆ ಸಿಕ್ತು ದೇಶದ ಪ್ರತಿಷ್ಠಿತ ಹುದ್ದೆ! ಭಾರತೀಯ ನೌಕಪಡೆಯ ನೂತನ ಸಾರಥಿಯಾದ ಬಸವನಗುಡಿಯ ಈ ಹುಡುಗ ಯಾರು?
Karnataka Latest News: ಅಣುಸ್ಥಾವರ ಮೇಲೆ ಕಣ್ಣಿಟ್ಟಿದ್ದ 9 ದಾವೂದ್‌ ಗ್ಯಾಂಗ್‌ ಉಗ್ರರ ಸೆರೆ! ಟೆರರಿಸ್ಟ್‌ಗಳ ಭೀಕರ ಸಂಚು ಬಯಲು!