Karnataka Latest News: ಅಣುಸ್ಥಾವರ ಮೇಲೆ ಕಣ್ಣಿಟ್ಟಿದ್ದ 9 ದಾವೂದ್‌ ಗ್ಯಾಂಗ್‌ ಉಗ್ರರ ಸೆರೆ! ಟೆರರಿಸ್ಟ್‌ಗಳ ಭೀಕರ ಸಂಚು ಬಯಲು!

Kannadaprabha News   | Kannada Prabha
Published : May 31, 2026, 06:56 AM IST
9 Dawood Gang Terrorists Plotting Nuclear Plant Attack Arrested by Delhi police

ಸಾರಾಂಶ

ದೆಹಲಿ ಪೊಲೀಸರ ವಿಶೇಷ ಸೆಲ್ 9 ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ರಾಷ್ಟ್ರ ರಾಜಧಾನಿ ಮತ್ತು ಮುಂಬೈನಲ್ಲಿ ನಡೆಯಬೇಕಿದ್ದ ಭಾರಿ ಉಗ್ರ ದಾಳಿಯ ಸಂಚನ್ನು ವಿಫಲಗೊಳಿಸಿದೆ. ಬಂಧಿತರು ಪಾಕಿಸ್ತಾನದ ಐಎಸ್‌ಐ ಮತ್ತು ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದರು ಎಂದು ತಿಳಿದುಬಂದಿದೆ.

ನವದೆಹಲಿ (ಮೇ.31): ರಾಷ್ಟ್ರರಾಜಧಾನಿ ದೆಹಲಿ(Delhi) ಹಾಗೂ ಆರ್ಥಿಕ ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ ಉಗ್ರದಾಳಿಗೆ ಸಂಚು ರೂಪಿಸಿದ್ದ 9 ಶಂಕಿತ ಉಗ್ರರನ್ನು ದೆಹಲಿ ಪೊಲೀಸರ ವಿಶೇಷ ಸೆಲ್‌(Delhi Police Special Cell) ಬಂಧಿಸಿದ್ದು, ಸಂಭವಿಸಬಹುದಾಗಿದ್ದ ಬಹುದೊಡ್ಡ ಅನಾಹುತವನ್ನು ತಪ್ಪಿಸಿದೆ.

ಬಂಧಿತರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ(Pakistan's intelligence agency ISI) ಹಾಗೂ ಭೂಗತಲೋಕದ ಡಾನ್‌ ದಾವೂದ್‌ ಇಬ್ರಾಹಿಂ(Dawood Ibrahim) ಜತೆ ನಂಟು ಹೊಂದಿದ್ದು, ಇವರ ಮೇಲೆ ಬಹುಕಾಲದಿಂದ ಕಣ್ಣಿಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಗ್ರ ದಾಳಿ ನಡೆವ ಬಗ್ಗೆ ಭದ್ರತಾ ಇಲಾಖೆಗೆ ಮಾಹಿತಿ ಲಭಿಸಿ, ಆ ಬಗ್ಗೆ ಅವರು ಸಾರ್ವಜನಿಕರನ್ನು ಎಚ್ಚರಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಯಾಗಿದೆ.

ಸೆರೆಸಿಕ್ಕವರಲ್ಲಿ ದೆಹಲಿ, ಮುಂಬೈ, ಪಂಜಾಬ್‌ ನಿವಾಸಿಗಳ ಜತೆ ವಿದೇಶಿಗರೂ ಇದ್ದಾರೆ. ಅವರಿಂದ ಭಾರೀ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಇವರಿಗೆ ಆರ್ಥಿಕ ನೆರವು ಹರಿದುಬರುತ್ತಿದ್ದ ಮಾರ್ಗ ಹಾಗೂ ಅದರ ಹಿಂದಿರುವ ಮಾರ್ಗದರ್ಶಕರ ಪತ್ತೆಗೆ ವಿಚಾರಣೆ ನಡೆಸಲಾಗುತ್ತಿದೆ.

ಏನೇನು ಗುರಿ?:

ಜನಸ್ತೋಮವಿರುವ ವಿಮಾನ ನಿಲ್ದಾಣ, ರೈಲು ನಿಲ್ದಾಣದಂತಹ ಪ್ರದೇಶಗಳು, ಪರಮಾಣು, ವಿದ್ಯುತ್ ಸ್ಥಾವರಗಳು, ಧಾರ್ಮಿಕ ಸ್ಥಳಗಳು, ಹಾಗೂ ಭದ್ರತಾ ಸಿಬ್ಬಂದಿ ಬಂಧಿತರ ಗುರಿಯಾಗಿದ್ದರು ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News: ಮತ್ತೆ 2 ಪರೀಕ್ಷಾ ಎಡವಟ್ಟು: CUET ವೇಳೆ ಭಾರಿ ತಾಂತ್ರಿಕ ಸಮಸ್ಯೆ! CBSE ಪೋರ್ಟಲ್‌ ಮೇಲೆ ಸೈಬರ್‌ ದಾಳಿ!
ಮತ್ತೆ 2 ಪರೀಕ್ಷಾ ಎಡವಟ್ಟು: CUET ವೇಳೆ ಭಾರಿ ತಾಂತ್ರಿಕ ಸಮಸ್ಯೆ, 2 ಗಂಟೆ ಪರೀಕ್ಷೆ ವಿಳಂಬ, ಸಿಬಿಎಸ್‌ಇ ಪೋರ್ಟಲ್‌ ಮೇಲೆ ಸೈಬರ್‌ ದಾಳಿ!