
ನವದೆಹಲಿ (ಮೇ.31): ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಬೆಂಗಳೂರಿನ ಬಸವನಗುಡಿಯ ಎನ್‌ಆರ್ ಕಾಲೋನಿಯಲ್ಲಿ ಬೆಳೆದ ವೈಸ್ ಅಡ್ಮಿ ರಲ್ ಕೃಷ್ಣ ಸ್ವಾಮಿನಾಥನ್ ಭಾನುವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ, ಸ್ವಾಮಿನಾಥನ್ ಹೊಸ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. 2028ರ ಡಿ.31ರವರೆಗೆ ಅವರ ಅವಧಿ ಇರಲಿದೆ.
ಬಸವನಗುಡಿಯ ಎನ್‌ಆರ್ ಕಾಲೋನಿಯಲ್ಲಿ ಬೆಳೆದ ಸ್ವಾಮಿನಾಥನ್, ಬಿಷಪ್ ಕಾಟನ್ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ವಿಜಯಪುರದ ಸೈನಿಕ ಶಾಲೆಯಲ್ಲಿ ಸೇನಾ ಶಿಕ್ಷಣ ಪೂರೈಸಿದರು. ಮೊದಲ ಪ್ರಯತ್ನದಲ್ಲೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆ ಪಾಸ್ ಮಾಡಿ, 1987ರಲ್ಲಿ 19ನೇ ವಯಸ್ಸಿನಲ್ಲೇ ಭಾರತೀಯ ನೌಕಾಪಡೆಗೆ ನೇಮಕಗೊಂಡರು.
ಇದನ್ನೂ ಓದಿ: ಅನುಮಾನಾಸ್ಪದ ಬೋಟುಗಳ ಬಗ್ಗೆ ನಿಗಾ ವಹಿಸಲು ಮೀನುಗಾರರಿಗೆ ಸೂಚನೆ
ಸದ್ಯ ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫಿಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು, ಐಎನ್‌ಎಸ್ ವಿಕ್ರಮಾದಿತ್ಯದ ಕಮಾಂಡರ್ ಆಗಿ, ನೌಕಾಪಡೆಯ ಉಪಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
- ಬಸವನಗುಡಿಯಲ್ಲಿ ಬಾಲ್ಯ ಕಳೆದಿದ್ದರು
- ವಿಜಯಪುರದಲ್ಲಿ ಸೇನಾ ಶಿಕ್ಷಣ
- ಚುಕ್ಕಾಣಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ