ತೆರೆದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ: ಬೋನಿಳಿಸಿ ರಕ್ಷಿಸಿದ ಅರಣ್ಯ ಸಿಬ್ಬಂದಿ

Published : Jun 20, 2022, 11:20 AM IST
ತೆರೆದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ: ಬೋನಿಳಿಸಿ ರಕ್ಷಿಸಿದ ಅರಣ್ಯ ಸಿಬ್ಬಂದಿ

ಸಾರಾಂಶ

ತೆರೆದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಮಹಾರಾಷ್ಟ್ರದ ಹಳ್ಳಿಯೊದರಲ್ಲಿ ಈ ಘಟನೆ ನಡೆದಿದೆ. 

ತೆರೆದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಮಹಾರಾಷ್ಟ್ರದ ಹಳ್ಳಿಯೊದರಲ್ಲಿ ಈ ಘಟನೆ ನಡೆದಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು, ಅರಣ್ಯ ಸಿಬ್ಬಂದಿ ಚಿರತೆಯನ್ನು ಬಾವಿಯಿಂದ ಮೇಲೆ ಎತ್ತಿ ರಕ್ಷಿಸುತ್ತಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಬಾವಿಗೆ ಬಿದ್ದ ಚಿರೆತೆಯನ್ನು ಮೇಲೆತ್ತಲು ಮೊದಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗ ಕಟ್ಟಿದ ಬೋನನ್ನು ಬಾವಿಗೆ ಇಳಿಸಿದ್ದಾರೆ. ಬಳಿಕ ಬೋನಿಗೆ ನುಗ್ಗಿ ಕುಳಿತ ಚಿರತೆಯನ್ನು ಹಗ್ಗಗಳ ಸಹಾಯದಿಂದ ಮೇಲೆತ್ತಿದ್ದಾರೆ. ಈ ವೇಳೆ ಬೋನಿನ ಒಳಗೆಯೇ ವ್ಯಾಘ್ರಗೊಂಡಿರುವ ಚಿರತೆ ದಾಳಿ ನಡೆಸಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಹಾರಾಷ್ಟ್ರದಲ್ಲಿ (Maharashtra) ತೆರೆದ ಬಾವಿಯೊಂದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯೊಂದನ್ನು ರಕ್ಷಿಸಿದ್ದಾರೆ. ದಯವಿಟ್ಟು ತೆರೆದ ಬಾವಿಯ ಮೇಲ್ಭಾಗವನ್ನು ಮುಚ್ಚಿ ಕಾಡು ಪ್ರಾಣಿಗಳು ತೆರೆದ ಬಾವಿಗೆ ಬಿದ್ದು ಸಂಕಟ ಪಡುವುದನ್ನು ತಪ್ಪಿಸಿ ಎಂದು ಅವರು ಮನವಿ ಮಾಡಿದ್ದಾರೆ. 

 

ಭಾನುವಾರ ಪೋಸ್ಟ್ ಆದ ಈ ವಿಡಿಯೋವನ್ನು  13,000 ಕ್ಕೂ ಹೆಚ್ಚು ಜನ ಟ್ವಿಟ್ಟರ್‌ನಲ್ಲಿ ವೀಕ್ಷಿಸಿದ್ದಾರೆ. ಅನೇಕರು ಅರಣ್ಯ ಇಲಾಖೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಸಲಾಂ ಒಳ್ಳೆಯ ಕೆಲಸ ಮಾಡಿದ್ದಾರೆ. ತೆರೆದ ಬಾವಿಯನ್ನು ಮುಚ್ಚುವ ಬಗ್ಗೆ ಅಥವಾ ಅದನ್ನು ಮೇಲ್ಭಾಗದಿಂದ ನೆಟ್‌ ಅಳವಡಿಸುವಂತೆ ನಾವು ಜನರಿಗೆ ತಿಳುವಳಿಕೆ ಮೂಡಿಸಬೇಕಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಆಗಾಗ ಬಾವಿಗೆ ಬಿಳೋ ಚಿರತೆಗಳು: ನಿನ್ನೆ ಮಂಚ ಕಳ್ಸಿದ್ರು ಇವತ್ತು ಏಣಿ ಇಳ್ಸಿದ್ರು

ಆದರೆ, ರಾಜ್ಯದ ಶೇ.90 ರಷ್ಟು ರೈತರು ಬಾವಿಗಳನ್ನು ಮುಚ್ಚಲು ಶಕ್ತರಾಗಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ 90% ದಷ್ಟು ರೈತರು ಕನಿಷ್ಠ ಅವರ ಆದಾಯವು ತೀರ ಕಡಿಮೆ ಇದ್ದು, ತಮ್ಮನ್ನು ತಾವು ಪೋಷಿಸಲು ಕೂಡ ಅದು ಸಾಕಾಗುವುದಿಲ್ಲ. ಇಂತಹ ಪರಿಸ್ಥಿತಿ ಇರುವಾಗ ತೆರೆದ ಬಾವಿಗಳನ್ನು ಮುಚ್ಚಲು ಹೇಗೆ ಖರ್ಚು ಮಾಡುತ್ತಾರೆ? ಬಾವಿಗಳನ್ನು ಮುಚ್ಚಲು ಸರ್ಕಾರವು ಸಬ್ಸಿಡಿಯನ್ನು ವಿಸ್ತರಿಸಬೇಕು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಧುತ್ತನೇ ಬಂದು ಸೈಕಲ್ ಸವಾರನ ಮೇಲೆರಗಿದ ಚೀತಾ: ವಿಡಿಯೋ ನೋಡಿ

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಪುಣೆಯ ಜುನ್ನಾರ್‌ನಲ್ಲಿ ಚಿರತೆಯೊಂದು 45 ಅಡಿ ಆಳದ ಬಾವಿಗೆ ಬಿದ್ದಿತ್ತು. ಈ ಚಿರತೆಯನ್ನು ರಕ್ಷಿಸಲು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಾವಿಗೆ ಮಂಚವನ್ನು ಇಳಿಸಿದ್ದರು. ಮಂಚವೇರಿದ ಚಿರತೆಯ ಮೇಲೆ ಬೋನನ್ನು ಇಳಿಸಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!