ವಿಮಾನದಲ್ಲಿ ಪ್ರಯಾಣಿಸುವ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಮಹತ್ವದ ಸೂಚನೆ!

Published : Jun 20, 2022, 11:07 AM IST
ವಿಮಾನದಲ್ಲಿ ಪ್ರಯಾಣಿಸುವ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಮಹತ್ವದ ಸೂಚನೆ!

ಸಾರಾಂಶ

* ಸರ್ಕಾರಿ ವೆಚ್ಚದಲ್ಲಿ ಪ್ರಯಾಣಿಸುವಾಗ ಈ ನಿಯಮ ಅನ್ವಯ * ಅಗ್ಗದ ಏರ್‌ ಟಿಕೆಟ್‌ ಬುಕ್‌ ಮಾಡಿ: ಉದ್ಯೋಗಿಗಳಿಗೆ ಕೇಂದ್ರ ಸೂಚನೆ * ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಕೇಂದ್ರ ಕ್ರಮ

ನವದೆಹಲಿ(ಜೂ.20): ಹಣಕಾಸು ಸಚಿವಾಲಯವು ಮಿತವ್ಯಯ ಮಂತ್ರ ಪಠಿಸಿದೆ. ಸರ್ಕಾರಿ ಉದ್ಯೋಗಿಗಳು ಸರ್ಕಾರದ ವೆಚ್ಚದಲ್ಲಿ ಪ್ರಯಾಣ ನಡೆಸುವಾಗ ಲಭ್ಯವಿರುವ ಅತಿ ಅಗ್ಗದ ಬೆಲೆಯಲ್ಲಿ ವಿಮಾನದ ಟಿಕೆಟ್‌ಗಳನ್ನು ಖರೀದಿಸಬೇಕು ಹಾಗೂ ಪ್ರವಾಸದ 21 ದಿನಗಳ ಮುಂಚಿತವಾಗಿ ಟಿಕೆಟ್‌ ಬುಕ್‌ ಮಾಡಬೇಕು’ ಎಂದು ಆದೇಶ ಹೊರಡಿಸಿದೆ. ಈ ಮೂಲಕ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

‘ಸರ್ಕಾರಿ ವೆಚ್ಚದಲ್ಲಿ ಪ್ರಯಾಣ ಮಾಡುವಾಗ ಉದ್ಯೋಗಿಗಳು, ಬಾಲ್ಮರ್‌ ಲೌರಿ ಮತ್ತು ಕೊ, ಅಶೋಕ ಟ್ರಾವೆಲ್ಸ್‌ ಆ್ಯಂಡ್‌ ಟೂ​ರ್‍ಸ್ ಹಾಗೂ ಐಆರ್‌ಸಿಟಿಸಿ ಈ ಮೂರು ಅಧಿಕೃತ ಟ್ರಾವೆಲ್‌ ಏಜೆಂಟ್‌ಗಳ ಬಳಿಯಿಂದ ಮಾತ್ರ ವಿಮಾನ ನಿಲ್ದಾಣದ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಉದ್ಯೋಗಿಗಳು ತಮ್ಮ ನಿಗದಿತ ಪ್ರಯಾಣ ವರ್ಗದಲ್ಲಿ ಲಭ್ಯವಿರುವ ಅತಿ ಅಗ್ಗದ ಬೆಲೆಯ ವಿಮಾನಗಳ ಟಿಕೆಟ್‌ ಖರೀದಿಸಬೇಕು’ ಎಂದು ಸಚಿವಾಲಯ ಸೂಚಿಸಿದೆ.

‘ಉದ್ಯೋಗಿಗಳು ಪ್ರವಾಸದ ಕಾರ್ಯಕ್ರಮವು ಅನುಮೋದನೆ ಪ್ರಕ್ರಿಯೆಯಲ್ಲಿದ್ದರೂ ಉದ್ದೇಶಿತ ಪ್ರಯಾಣಕ್ಕಾಗಿ ಬುಕಿಂಗ್‌ ಮಾಡಬಹುದು. ಆದರೆ ಅನಗತ್ಯವಾಗಿ ಟಿಕೆಟ್‌ ರದ್ದು ಮಾಡಬಾರದು’ ಎಂದು ಸಚಿವಾಲಯ ಸೂಚಿಸಿದೆ.

‘ಒಂದು ವೇಳೆ ಪ್ರಯಾಣದ 72 ಗಂಟೆಗಳ ಒಳಗಾಗಿ ಅಧಿಕ ಬೆಲೆಯಲ್ಲಿ ಟಿಕೆಟ್‌ ಬುಕ್‌ ಮಾಡಿದರೆ, ಅಥವಾ ಪ್ರಯಾಣದ 24 ಗಂಟೆಗಳ ಒಳಗಾಗಿ ಟಿಕೆಟ್‌ ರದ್ದುಗೊಳಿಸಿದರೆ ಉದ್ಯೋಗಿ ಸ್ವಯಂ ಘೋಷಿತ ಸಮರ್ಥನೆಯನ್ನು ಸಲ್ಲಿಸುವುದು ಅನಿವಾರ್ಯವಾಗಿದೆ’ ಎಂದು ನಿರ್ದೇಶನ ನೀಡಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!