ನವದೆಹಲಿ (ಮೇ.26): ಕಳೆದ ವರ್ಷ ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ, ಕೋಲ್ಕತಾದ ಕಾನೂನು ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ.ಜೂ.25ರ ಸಂಜೆ ನಡೆದ ಘಟನೆ ಸಂಬಂಧ ಅದೇ ಕಾಲೇಜಿನ ಇಬ್ಬರು ಹಿರಿಯ ವಿದ್ಯಾರ್ಥಿಗಳು ಮತ್ತು ಒಬ್ಬ ಹಳೆಯ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಮೂವರನ್ನೂ ನ್ಯಾಯಾಲಯ 4 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
07:45 PM (IST) Jun 28
ಮುಕೇಶ್ ಅಂಬಾನಿ ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾರತೀಯ ಹೂಡಿಕೆದಾರರಿಗೆ ಕೈಗೆಟುಕುವ, ಪಾರದರ್ಶಕ, ಹಾಗೂ ತಂತ್ರಜ್ಞಾನ ಚಾಲಿತ ಗುರಿ ಇಟ್ಟುಕೊಂಡಿರುವ ಅಂಬಾನಿಯ ಜಿಯೋ ಬ್ಲ್ಯಾಕ್‌ರಾಕ್‌ಗೆ ಸೆಬಿ ಅನುಮೋದನೆ ನೀಡಿದೆ.
07:34 PM (IST) Jun 28
ತಿರುಮಲಕ್ಕೆ ಬರುವ ಭಕ್ತರಿಗೆ ಹೊಸ ಯೋಜನೆ ಜಾರಿಗೆ ತರಲು ಟಿಟಿಡಿ ಚಿಂತನೆ ನಡೆಸುತ್ತಿದೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದ್ರೆ ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
05:02 PM (IST) Jun 28
05:00 PM (IST) Jun 28
ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಕುರಿತು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಪ್ರಸ್ತಾಪಿಸಿದ್ದಾರೆ. ಜಾತಿ, ಧರ್ಮ, ಭಾಷೆ ಮುಂತಾದ ಭಾವನಾತ್ಮಕ ವಿಷಯಗಳಿಂದ ದೂರವಿದ್ದು, ನಗರಗಳ ಮೂಲಸೌಕರ್ಯ, ಸಾರ್ವಜನಿಕ ಸೇವೆಗಳನ್ನು ಮುಖ್ಯ ಅಜೆಂಡಾವನ್ನಾಗಿ ಹೊಂದಿರುವ ಪಕ್ಷದ ಅಗತ್ಯವಿದೆ ಎಂದಿದ್ದಾರೆ.
03:50 PM (IST) Jun 28
ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ ತನ್ನ ಮೇಲೆ 2013 ರಲ್ಲಿ ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
03:31 PM (IST) Jun 28
ಕಾಂತಾ ಲಗಾ ಹಾಡಿನ ನಟಿ ಶೆಫಾಲಿ ಜರಿವಾಲಾ ಅವರ ಹಠಾತ್ ನಿಧನವು ಮನರಂಜನಾ ಲೋಕದಲ್ಲಿ ಆಘಾತ ಮೂಡಿಸಿದೆ. ಅವರ ಮೊದಲ ಪತಿ ಮೀಟ್ ಬ್ರದರ್ಸ್‌ನ ಹರ್ಮೀತ್ ಸಿಂಗ್ ಜೊತೆಗಿನ ಸಂಬಂಧದ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಶೆಫಾಲಿ ಮತ್ತು ಹರ್ಮೀತ್ ಅವರ ದಾಂಪತ್ಯ ಮತ್ತು ವಿಚ್ಛೇದನದ ಕಾರಣ ತಿಳಿದುಕೊಳ್ಳಿ.
03:25 PM (IST) Jun 28
03:03 PM (IST) Jun 28
ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, ಕೆಲವೇ ಪುರುಷರು ಇಂತಹ ಅಪರಾಧಗಳನ್ನು ಮಾಡುತ್ತಾರೆ ಎಂದು ಹೇಳಿದ್ದಲ್ಲದೆ, ಒಬ್ಬ ಸ್ನೇಹಿತ ತನ್ನ ಸ್ನೇಹಿತೆಯನ್ನೇ ರೇಪ್ ಮಾಡಿದ್ರೆ ಸರ್ಕಾರ ಏನು ಮಾಡೋಕೆ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
01:16 PM (IST) Jun 28
11:53 AM (IST) Jun 28
ಹೃದಯ ಕಾಯಿಲೆ (heart disease) ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಮಾರಕವಾಗಿದೆ ಮತ್ತು ಲಕ್ಷಣಗಳು ಭಿನ್ನವಾಗಿರುತ್ತವೆ. ಒತ್ತಡ, ಭಾವನಾತ್ಮಕ ಆರೋಗ್ಯ ಮತ್ತು ಋತುಬಂಧವು ಮಹಿಳೆಯರ ಹೃದಯದ ಅಪಾಯಗಳ ಮೇಲೆ ಪರಿಣಾಮ ಬೀರುತ್ತವೆ. ಆದರೆ ಹೆಚ್ಚಿನ ಹೃದಯ ಕಾಯಿಲೆಗಳನ್ನು ತಡೆಗಟ್ಟಬಹುದು.
11:09 AM (IST) Jun 28
10:04 AM (IST) Jun 28
ಕೆಟ್ಟ ಸಿಬಿಲ್ ರೇಟ್‌ನಿಂದಾಗಿ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಗೊಳಿಸಿದ ಎಸ್‌ಬಿಐ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ, ಸಾರ್ವಜನಿಕ ಹಣವನ್ನು ಒಳಗೊಂಡಿರುವ ಪಾತ್ರಗಳಿಗೆ ಆರ್ಥಿಕ ಶಿಸ್ತು ಅತ್ಯಗತ್ಯ ಎಂದು ಒತ್ತಿ ಹೇಳಿದೆ.
07:45 AM (IST) Jun 28
ಕಳೆದ ವರ್ಷ ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ, ಕೋಲ್ಕತಾದ ಕಾನೂನು ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ.
07:44 AM (IST) Jun 28
ತನ್ನ ವಿರುದ್ಧ ಉಗ್ರರನ್ನು ಛೂಬಿಟ್ಟ ಪಾಕಿಸ್ತಾನಕ್ಕೆ ಈಗಾಗಲೇ ಯುದ್ಧದ ಮುಖಾಂತರವಷ್ಟೇ ಅಲ್ಲದೆ, ಸಿಂಧು ನೀರನ್ನು ತಡೆಯುವ ಮೂಲಕವೂ ಉಸಿರುಗಟ್ಟಿಸಿರುವ ಭಾರತಕ್ಕೆ ಇದೀಗ ಇನ್ನೊಂದು ಮಗ್ಗುಲಲ್ಲಿ ಮುಳ್ಳಾಗಿ ಚುಚ್ಚತೊಡಗಿರುವ ಬಾಂಗ್ಲಾದೇಶಕ್ಕೂ ಅದೇ ಮಾದರಿಯಲ್ಲಿ ಬುದ್ಧಿ ಕಲಿಸುವ ಅವಕಾಶ ಒದಗಿಬಂದಿದೆ.
07:44 AM (IST) Jun 28
ಪ್ರತಿ ತೆರಿಗೆ ಮೂಲಕ ವಿಶ್ವದ ಬಹುತೇಕ ದೇಶಗಳನ್ನು ಬೆದರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ಶೀಘ್ರವೇ ಭಾರತದೊಂದಿಗೆ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ಉಭಯ ದೇಶಗಳು ಶೀಘ್ರವೇ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸುಳಿವು ನೀಡಿದ್ದಾರೆ.
07:44 AM (IST) Jun 28
ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯ ಸಂಸ್ಥಾಪಕ, 20 ಲಕ್ಷ ಕೋಟಿ ಆಸ್ತಿಯೊಂದಿಗೆ ವಿಶ್ವದ 4ನೇ ಶ್ರೀಮಂತ ಎಂಬ ದಾಖಲೆ ಹೊಂದಿರುವ ಜೆಫ್ ಬೆಜೋಸ್ ತಮ್ಮ ಗೆಳತಿ, ಪತ್ರಕರ್ತೆ ಲಾರೆನ್ ಸ್ಯಾಂಟೆಜ್ ಜತೆ ಶನಿವಾರ ಅದ್ಧೂರಿ ವಿವಾಹಕ್ಕೆ ಸಜ್ಜಾಗಿದ್ದಾರೆ.
07:43 AM (IST) Jun 28
ವಿಶ್ವದ ಯಾವುದೇ ರಾಡಾರ್ ವ್ಯವಸ್ಥೆಗೆ ಮಂಕು ಬೂದಿ ಎರಚುವ ಅತ್ಯಾಧುನಿಕ, 6ಜಿ ಆಧರಿತ ವಿಶ್ವದ ಮೊದಲ ಎಲೆಕ್ಟ್ರಾನಿಕ್ ಯುದ್ಧಾಸ್ತ್ರವನ್ನು ಚೀನಾದ ವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ.
07:43 AM (IST) Jun 28
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ತಲೆಬಿಸಿಯನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಮಾರ್ಗವನ್ನು ಹುಡುಕಿದೆ. ಅದರನ್ವಯ ಕಡಿಮೆ ಟೋಲ್ ಸಂಗ್ರಹಿಸುವ ರಸ್ತೆಯ ಮಾಹಿತಿಯನ್ನು ಚಾಲಕರು ಆ್ಯಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.
07:43 AM (IST) Jun 28
ಪ್ರಧಾನಿ ನರೇಂದ್ರ ಮೋದಿ ಜು.2ರಿಂದ 5 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯ ವೇಳೆಯಲ್ಲೇ ಅವರು ಬ್ರೆಜಿಲ್‌ನಲ್ಲಿ ನಡೆಯುವ ಬ್ರಿಕ್ಸ್ ದೇಶಗಳ ಶೃಂಗಸಭೆಯಲ್ಲೂ ಭಾಗಿಯಾಗಲಿದ್ದಾರೆ.
07:42 AM (IST) Jun 28
ಕಣ್ಣಪ್ಪ ರಿಲೀಸ್ ಆದ್ಮೇಲೆ ಕಾಜಲ್ ಅಗರ್ವಾಲ್ ಪಾರ್ವತಿ ದೇವಿಯ BTS ಫೋಟೋಗಳನ್ನ ಶೇರ್ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
07:42 AM (IST) Jun 28
ರಶ್ಮಿಕಾ ಮಂದಣ್ಣ ಎಲ್ಲಿದ್ರೂ ಹಿಟ್ ಗ್ಯಾರಂಟಿ ಅನ್ನೋ ಹಾಗೆ ಈಗ ಆಕೆಯ ಹವಾ. ಪುಷ್ಪ 2, ಛಾವಾ, ಅನಿಮಲ್, ಈಗ ಕುಬೇರ ಸಿನಿಮಾಗಳ ಸಕ್ಸಸ್‌ನಿಂದ ರಶ್ಮಿಕಾ ಫುಲ್ ಫಾರ್ಮ್‌ನಲ್ಲಿದ್ದಾರೆ.
07:41 AM (IST) Jun 28
ಕಲ್ಕಿ 2898 AD ಚಿತ್ರ ಬಿಡುಗಡೆಯಾಗಿ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಗ್ ಬಿ ಅಮಿತಾಬ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಕಲ್ಕಿ 2 ಬಗ್ಗೆ ಸುಳಿವು ನೀಡಿದ್ದಾರೆ.
ADVERTISEMENT