
ಅನಾರೋಗ್ಯದ ಹಿನ್ನೆಲೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಬಿಹಾರದ ಮಾಜಿ ಸಿಎಂ, ರಾಷ್ಟ್ರೀಯ ಜನತಾದಳ (RJD) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಸುಧಾರಿಸಿದೆ. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಆರೋಗ್ಯ ಸುಧಾರಿಸುತ್ತಿದ್ದು, ಕೈ ಮತ್ತು ಬೆನ್ನಿನ ಮೇಲಿನ ಗಾಯಗಳು ಇನ್ನೂ ಗುಣವಾಗುತ್ತಿವೆ. ಮಧುಮೇಹದಿಂದಾಗಿ ಗಾಯಗಳು ವಾಸಿಯಾಗಲು ಸಮಯ ತೆಗೆದುಕೊಳ್ಳುತ್ತಿದೆ. ಮೊದಲಿಗಿಂತ ಆರೋಗ್ಯ ಸುಧಾರಿಸಿದೆ ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ. ಮುಂದಿನ ಎರಡು-ಮೂರು ದಿನಗಳಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಿದ್ದಾರೆ. ಲಾಲು ಯಾದವ್ ಅವರ ಕೈ ಮತ್ತು ಬೆನ್ನಿನ ಮೇಲಿನ ಗಾಯಗಳು ವಾಸಿಯಾಗುತ್ತಿರಲಿಲ್ಲ. ಈ ಕಾರಣಕ್ಕೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗುವುದು ಅನಿವಾರ್ಯವಾಗಿತ್ತು. ಏಪ್ರಿಲ್ 3 ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅದಾದ ಬಳಿಕ ಏಪ್ರಿಲ್ 5 ರಂದು ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಮತ್ತೆ ಅವರನ್ನು ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟದಲ್ಲಿ ಏರಿಳಿತ ಉಂಟಾಗಿರುವುದರಿಂದ ತೀವ್ರ ನಿಗಾಘಟಕದಲ್ಲಿ ಇರಿಸಲಾಗಿದೆ. ಸಕ್ಕರೆ ಕಾಯಿಲೆ ಇರುವ ಕಾರಣ ವೈದ್ಯರು ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸುತ್ತಿದ್ದಾರೆ.
ಆಗಸ್ಟ್ ವೇಳೆಗೆ ಕೇಂದ್ರದ ಮೋದಿ ಸರ್ಕಾರ ಪತನ, ಲಾಲೂ ಪ್ರಸಾದ್ ಯಾದವ್ ಭವಿಷ್ಯ
ಮಧುಮೇಹ ವಿಪರೀತ ಏರಿಕೆ ಕಂಡ ಕಾರಣ ಕಾಲುಗಳು ಮತ್ತು ಬೆನ್ನಿನ ಮೇಲೆ ಗಾಯ ಹೆಚ್ಚಾಯಿತು. ಮೊದಲು ಪಾಟ್ನಾದಲ್ಲಿ ಚಿಕಿತ್ಸೆ ಪ್ರಾರಂಭಿಸಲಾಯ್ತು. ಆದರೆ ಅಷ್ಟೊಂದು ಪರಿಣಾಮ ಕಾಣದ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಏಮ್ಸ್ ಗೆ ಶಿಫ್ಟ್ ಮಾಡಲಾಯ್ತು. ಶಸ್ತ್ರಚಿಕಿತ್ಸೆಯ ನಂತರ ಲಾಲು ಬಹುಬೇಗ ಚೇತರಿಕೆ ಕಾಣಬೇಕು ಎಂಬ ಕಾರಣಕ್ಕೆ ಇನ್ಸುಲಿನ್ ಚುಚ್ಚುಮದ್ದನ್ನು ಸಹ ನೀಡಲಾಗುತ್ತಿದೆ. ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಈ ಮೊದಲು ಲಾಲು ಪ್ರಸಾದ್ ಯಾದವ್ ಅವರು ಮೂತ್ರಪಿಂಡ ಕಸಿ ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 76 ವರ್ಷದ ಲಾಲು ಅವರು ದೀರ್ಘಕಾಲದಿಂದ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 2024 ರಲ್ಲಿ ಮುಂಬೈನಲ್ಲಿ ಆಂಜಿಯೋಪ್ಲ್ಯಾಸ್ಟಿ ಮಾಡಿಸಿಕೊಂಡಿದ್ದರು. 2014 ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದಕ್ಕೂ ಮುನ್ನ 2022 ರಲ್ಲಿ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಈಗ ಅನಾರೋಗ್ಯದಿಂದ ಚೇತರಿಸಿಕೊಳ್ಳು ಅವರ ವಯಸ್ಸು ಕೂಡ ಸಹಕರಿಸುತ್ತಿಲ್ಲ.
Baba Hariharnath Mandir:ಶಿವಲಿಂಗದ ಮೇಲೆ ಕೈತೊಳೆದ ಲಾಲೂ ಪ್ರಸಾದ್, ರಾಬ್ಡಿ ದೇವಿ!
ತಮ್ಮ ತಂದೆ ಆಸ್ಪತ್ರೆಗೆ ದಾಖಲಾಗುವ ಮುನ್ನ ಪಾಟ್ನಾದಲ್ಲಿ ಸುದ್ದಿ ಮಾಧ್ಯಮದವರ ಜೊತೆಗೆ ಮಾತನಾಡಿರುವ ಪುತ್ರ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಆರ್‌ಜೆಡಿ ಮುಖ್ಯಸ್ಥರ ಬೆನ್ನಿನ ಮೇಲೆ ಮತ್ತು ತೋಳಿನ ಮೇಲೆ ಹುಣ್ಣುಗಳಿದ್ದವು, ದೆಹಲಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಆಶಯ ಇತ್ತು. ಲಾಲು ಜಿ ದೆಹಲಿಗೆ ವಿಮಾನ ಹತ್ತಲು ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ನನ್ನ ತಾಯಿ ರಾಬ್ರಿ ದೇವಿ ಅವರೊಂದಿಗೆ ಇದ್ದರು. ಈ ವೇಳೆ ಬಿಪಿ ಹಠಾತ್ ಕುಸಿತವಾದ ಕಾರಣ ಅವರನ್ನು ಪಾಟ್ನಾದ ಪ್ಯಾರಾಸ್ ಆಸ್ಪತ್ರೆಗೆ ದಾಖಲಿಸಲಾಯ್ತು. ತಮ್ಮ ತಂದೆ ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ಲಾಲು ಪ್ರಸಾದ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. 1990 ರಿಂದ 1995ರವರೆಗೆ ಮತ್ತು 1995 ರಿಂದ 1997ರವರೆಗೆ. 2004 ರಿಂದ 2009 ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಲಾಲು ಮೇವು ಹಗರಣದಲ್ಲಿ ಅಪರಾಧಿಯಾಗಿದ್ದು, 17 ಏಪ್ರಿಲ್ 2021 ರವರೆಗೆ ಶಿಕ್ಷೆ ಅನುಭವಿಸುತ್ತಿದ್ದರು. ಬಳಿಕ ಅನಾರೋಗ್ಯದ ಹಿನ್ನೆಲೆ ಜಾಮೀನು ಸಿಕ್ಕಿತ್ತು. ಲಾಲೂ ಮತ್ತು ರಾಬ್ರಿ ದೇವಿಗೆ ಏಳು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ