ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಆಗ್ರಾದಿಂದ ಟೇಕ್ ಆಫ್ ಆದ ಸಿಎಂ ಯೋಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಲಖನೌ(ಮಾ.26) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತದ ಜನಪ್ರಿಯ ಸಿಎಂ. ಇಷ್ಟೇ ಅಲ್ಲ ತಮ್ಮ ನೇರ ಮಾತು ಹಾಗೂ ನಡೆಯಿಂದ ಬೆದರಿಕೆಗಳು ಕೂಡ ಹೆಚ್ಚು. ಇದರ ನಡುವೆ ಇಂದು ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಯೋಗಿ ಆದಿತ್ಯನಾಥ್ ವಿಮಾನ ಆಗ್ರಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣವೇ ಆಗ್ರಾದ ಖೇರಿಯಾ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಆಗ್ರಾದ ಖೇರಿಯಾದಲ್ಲಿರುವ ವಿಮಾನ ನಿಲ್ದಾಣದಿಂದ ಯೋಗಿ ಆದಿತ್ಯನಾಥ್ ವಿಮಾನ ಟೇಕ್ ಆಫ್ ಆಗಿತ್ತು. ಯೋಗಿ ಆದಿತ್ಯನಾಥ್ ವಿಮಾನ ಪ್ರಯಾಣ ಆರಂಭಗೊಂಡ ಕೆಲ ಹೊತ್ತಲ್ಲೇ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಪೈಲೆಟ್ ಹಾಗೂ ಕೋ ಪೈಲೆಟ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಕಂಟ್ರೋಲ್ ರೂಂಗೆ ಸೂಚನೆ ನೀಡಿದ ಪೈಲೆಟ್ ವಿಮಾನವನ್ನುಉದ್ದೇಶಿತ ಸ್ಥಳ್ಕಕೆ ಪ್ರಯಾಣ ಮುಂದುವರಿಸದೇ ವಾಪಸ್ ಆಗಿದ್ದಾರೆ. ಬಳಿಕ ಖೇರಿಯಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ಲಂಚ ಕೇಳಿದರೆ, ಆತನ ಇಡೀ ಭವಿಷ್ಯದ ಜನರೇಷನ್‌ಗೆ ಇರೋದಿಲ್ಲ ಸರ್ಕಾರಿ ನೌಕರಿ: ಯೋಗಿ ಖಡಕ್ ವಾರ್ನಿಂಗ್
ಲಖನೌದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯೋಗಿ ಸರ್ಕಾರ 8 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಹತ್ವದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ್ರಾದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯೋಗಿ ಆದಿತ್ಯನಾಥ್ ಇಂದು ಬೆಳಗ್ಗೆ ಆಗ್ರಾಗೆ ಆಗಮಿಸಿದ್ದರು. ಸಂಜೆಯ ಕಾರ್ಯಕ್ರಮಕ್ಕೆ ಲಖನೌಗೆ ತೆರಳಲು ಖೇರಿಯಾ ವಿಮಾನ ನಿಲ್ದಾಣಕ್ಕೆ ಯೋಗಿ ಆದಿತ್ಯನಾಥ್ ಆಗಮಿಸಿದ್ದರು. ಆಗ್ರಾದ ಖೇರಿಯಾ ವಿಮಾನ ನಿಲ್ದಾಣದಿಂದ ಯೋಗಿ ಆದಿತ್ಯನಾಥ್ ಲಖನೌಗೆ ಪ್ರಯಾಣ ಆರಂಭಿಸಿದ್ದರು.
ಆದರೆ ತಾಂತ್ರಿಕ ದೋಷದ ಕಾರಣ ಮತ್ತೆ ಟೇಕ್ ಆಫ್ ಆದ ಖೇರಿಯಾ ವಿಮಾನ ನಿಲ್ದಾದಲ್ಲೇ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಘಟನೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಸದ್ಯ ಯೋಗಿ ಆದಿತ್ಯನಾಥ್ ಖೇರಿಯಾ ವಿಮಾನ ನಿಲ್ದಾದ ಲಾಂಜ್‌ನಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಇತ್ತ ವಿಮಾನದ ತಂತ್ರಜ್ಞರು, ಎಂಜಿಯನೀಯರ್ಸ್ ತಾಂತ್ರಿಕ ದೋಷ ಪರಿಶೀಲನೆ ನಡೆಸುತ್ತಿದ್ದಾರೆ. ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಯುವಕರಿಗೆ ಬೆಂಬಲ! ಗೊಂಡಾದಲ್ಲಿ ಯೋಗಿ 55 ಕೋಟಿ ಸಾಲ ವಿತರಣೆ!