ಭಕ್ತರ ಪಾಲಿಗೆ ಕುಂಭಮೇಳ ಭಾರಿ ದುಬಾರಿ! ವಿಮಾನ ಪ್ರಯಾಣ ದರ ಹಾಗೂ ವಸತಿ ಶುಲ್ಕ ಶೇ.50ರಿಂದ 300ರಷ್ಟು ವೆಚ್ಚ

Published : Feb 24, 2025, 08:45 AM ISTUpdated : Feb 24, 2025, 09:04 AM IST
ಭಕ್ತರ ಪಾಲಿಗೆ ಕುಂಭಮೇಳ ಭಾರಿ ದುಬಾರಿ! ವಿಮಾನ ಪ್ರಯಾಣ ದರ ಹಾಗೂ ವಸತಿ ಶುಲ್ಕ ಶೇ.50ರಿಂದ 300ರಷ್ಟು ವೆಚ್ಚ

ಸಾರಾಂಶ

ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ವಿಮಾನ ಪ್ರಯಾಣ ಮತ್ತು ವಸತಿ ಶುಲ್ಕವು ಶೇ.50ರಿಂದ 300ರಷ್ಟು ಹೆಚ್ಚಾಗಿತ್ತು ಎಂದು ಅಧ್ಯಯನವೊಂದು ತಿಳಿಸಿದೆ. 49 ಸಾವಿರ ಭಕ್ತರಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.


ಪ್ರಯಾಗ್‌ರಾಜ್‌ (ಫೆ.24): ಈ ಬಾರಿಯ ಕುಂಭಮೇಳವು ಇದೇ ಬುಧವಾರ ಕೊನೆಗೊಳ್ಳಲಿದ್ದು, ಈಗಾಗಲೇ ಕೋಟ್ಯಂತರ ಭಕ್ತರು ದೇಶ ವಿದೇಶಗಳಿಂದ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಆದರೆ ಅವರಿಗೆಲ್ಲ ಈ ಬಾರಿಯ ಕುಂಭ ಆರ್ಥಿಕವಾಗಿ ಅತಿ ದುಬಾರಿಯಾಗಿದೆ. ವಿಮಾನ ಪ್ರಯಾಣ ದರ ಹಾಗೂ ವಸತಿ ಶುಲ್ಕ ಶೇ.50ರಿಂದ 300ರಷ್ಟು ದುಬಾರಿ ಆಗಿದೆ ಎಂದು ಅಧ್ಯಯನವೊಂದು ಹೇಳಿದೆ. ಲೋಕಲ್‌ ಸರ್ಕಲ್‌ ಸಂಸ್ಥೆ ದೇಶದ 303 ಜಿಲ್ಲೆಗಳಿಂದ ಕುಂಭಮೇಳಕ್ಕೆ ಭೇಟಿ ನೀಡಿದ 49 ಸಾವಿರ ಭಕ್ತರಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದೆ

ವಿಮಾನ ಪ್ರಯಾಣಕ್ಕೆ 300% ಅಧಿಕ ವೆಚ್ಚ: ಕುಂಭಮೇಳದ ಪ್ರಯುಕ್ತ, ವಿವಿಧ ಕಡೆಗಳಿಂದ ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನಗಳ ಟಿಕೆಟ್‌ ದರವನ್ನು ಮನಸೋಇಚ್ಛೆ ಏರಿಸಲಾಗಿತ್ತು ಎಂಬ ಆರೋಪವಿದೆ. ಇದಕ್ಕೆ ಪೂರಕವೆಂಬಂತೆ, ಸಂದರ್ಶಿಸಲಾದ ಜನರಲ್ಲಿ ಶೇ.25ರಷ್ಟು ಮಂದಿ ವಿಮಾನಕ್ಕೆ ಮಾಮುಲಿ ದರಕ್ಕಿಂದ ಶೇ.300ಕ್ಕೂ ಅಧಿಕ ಪಾವತಿಸಿರುವುದಾಗಿ ತಿಳಿಸಿದ್ದಾರೆ. ಶೇ.13ರಷ್ಟು ಜನ ಮಾತ್ರ ಮೊದಲಿದ್ದ ದರದಲ್ಲೇ ಪ್ರಯಾಣಿಸಿದ್ದಾರೆ. ಒಟ್ಟು ಶೇ.87ರಷ್ಟು ಮಂದಿ ವಿಮಾನ ಪ್ರಯಾಣಕ್ಕೆ ಶೇ.50ರಿಂದ 300ರಷ್ಟು ಅಧಿಕ ವೆಚ್ಚ ಮಾಡಿದ್ದಾರೆ.

ವಸತಿಗೂ ಶೇ.300ರಷ್ಟು ಅಧಿಕ ಪಾವತಿ: ಲಾಡ್ಜ್‌, ಹೋಟೆಲ್‌, ಟೆಂಟ್‌ಗಳಲ್ಲಿ ವಸತಿಗೂ ಅತಿ ಹೆಚ್ಚು ಶುಲ್ಕ ವಿಧಿಸಲಾಗಿತ್ತು. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ.67ರಷ್ಟು ಜನ ಮಾಮೂಲಿಗಿಂತ ಶೇ.50ರಿಂದ 300ರಷ್ಟು ಅಧಿಕ ಹಣ ಪಾವತಿಸಿದ್ದಾಗಿ ತಿಳಿಸಿದ್ದಾರೆ. ಕೇವಲ ಶೇ.26ರಷ್ಟು ಮಂದಿ ಯಾವುದೇ ಅಧಿಕ ಶುಲ್ಕ ಪಾವತಿಸಿರಲಿಲ್ಲ.

ಸ್ಥಳೀಯ ಸಂಚಾರ ಶುಲ್ಕವೂ ಅಧಿಕ: ಪ್ರಯಾಗ್‌ರಾಜ್‌ನಲ್ಲಿ ಸ್ಥಳೀಯವಾಗಿ ಸಂಚರಿಸಲು ಹಾಗೂ ದೋಣಿಯಲ್ಲಿ ವಿಹರಿಸಲು ಶೇ.66ರಷ್ಟು ಜನ ಶೇ.50ರಿಂದ 300ರಷ್ಟು ಅಧಿಕ ಪಾವತಿಸಿರುವುದಾಗಿ ತಿಳಿಸಿದ್ದಾರೆ.

ಮಹಾಕುಂಭ ಮೇಳ ಟೀಕಿಸುವುದು ಗುಲಾಮಗಿರಿಯ ಮನಸ್ಥಿತಿ; ಖರ್ಗೆ, ದೀದಿ, ಲಾಲುಗೆ ಪರೋಕ್ಷವಾಗಿ ಮೋದಿ ತಿರುಗೇಟು!

49 ಸಾವಿರ ಭಕ್ತರನ್ನು ಮಾತನಾಡಿಸಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನಕ್ಕೆ ಉತ್ತರಿಸಿದವರಲ್ಲಿ ಶೇ.62ರಷ್ಟು ಪುರುಷರಿದ್ದರೆ, ಶೇ.38ರಷ್ಟು ಮಹಿಳೆಯರಿದ್ದರು. ಶೇ.44ರಷ್ಟು ಟೈರ್‌ 1, ಶೇ.25ರಷ್ಟು ಟೈರ್‌ 2, ಶೇ.31ರಷ್ಟು ಟೈರ್‌ 3,4,5 ಹಾಗೂ ಗ್ರಾಮೀಣ ಪ್ರದೇಶದ ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಗಂಡನ ಕೈಗೆ ತಾಳಿ ಇಟ್ಟು, ಪತಿಯನ್ನು ಲವರ್​ಗೆ ಬಿಟ್ಟುಕೊಟ್ಟು ಕುಂಭಮೇಳಕ್ಕೆ ಹೊರಟ ಭಾಗ್ಯ: ನಟಿ ಹೇಳಿದ್ದೇನು ಕೇಳಿ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್