Mann Ki Baat: ಹುಲಿಗಳ ಸಂತತಿ ಹೆಚ್ಚಲು ಕರ್ನಾಟಕದ ಸೋಲಿಗರು ಕಾರಣ, ಪ್ರಧಾನಿ ಮೋದಿ ಮೆಚ್ಚುಗೆ

Published : Feb 24, 2025, 06:47 AM ISTUpdated : Apr 29, 2025, 04:07 PM IST
Mann Ki Baat: ಹುಲಿಗಳ ಸಂತತಿ ಹೆಚ್ಚಲು ಕರ್ನಾಟಕದ ಸೋಲಿಗರು ಕಾರಣ, ಪ್ರಧಾನಿ ಮೋದಿ ಮೆಚ್ಚುಗೆ

ಸಾರಾಂಶ

ಪ್ರಧಾನಿ ಮೋದಿ ಅವರು ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಘು ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳಕ್ಕೆ ಸೋಲಿಗ ಬುಡಕಟ್ಟು ಜನಾಂಗದ ಕೊಡುಗೆಯನ್ನು ಕೊಂಡಾಡಿದ್ದಾರೆ.

ನವದೆಹಲಿ (ಫೆ.24): ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 9 ಚಿನ್ನ ಸೇರಿ 11 ಪದಕ ಪಡೆದ ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಘು ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ರಾಷ್ಟ್ರೀಯ ಕ್ರೀಡಾಕೂಟ ರೋಮಾಂಚಕಾರಿಯಾಗಿತ್ತು. ದೇಶಾದ್ಯಂತದ 11,000ಕ್ಕೂ ಹೆಚ್ಚು ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದರು. ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಘು ದೇಶವಾಸಿಗಳ ಹೃದಯ ಗೆದ್ದಿದ್ದಾರೆ. ಅವರು 3 ಹೊಸ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು’ ಎಂದರು.

 ‘ಕರ್ನಾಟಕದ ಬಿಳಿಗಿರಿ ರಂಗನ ಬೆಟ್ಟ (ಬಿಆರ್‌ಟಿ) ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಜನಸಂಖ್ಯೆ ನಿರಂತರವಾಗಿ ಏರಿದೆ. ಇದಕ್ಕೆ ಹೆಚ್ಚಿನ ಮನ್ನಣೆ ಸಲ್ಲುವುದು ಹುಲಿಯನ್ನು ಪೂಜಿಸುವ ಸೋಲಿಗ ಬುಡಕಟ್ಟು ಜನಾಂಗಕ್ಕೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.

ಭಾನುವಾರ ‘ಮಾಸಿಕ ಮನ್‌ ಕೀ ಬಾತ್‌’ ರೇಡಿಯೋ ಭಾಷಣ ಮಾಡಿದ ಮೋದಿ, ‘ಕಾಡು ಪ್ರಾಣಿಗಳು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಹುದುಗಿವೆ. ಅನೇಕ ಪ್ರಾಣಿಗಳನ್ನು ನಮ್ಮ ದೇವರು ಮತ್ತು ದೇವತೆಗಳ ವಾಹನಗಳಾಗಿಯೂ ಆಚರಿಸಲಾಗುತ್ತದೆ. ಕರ್ನಾಟಕದ ಹುಲಿ ವೇಷ, ತಮಿಳುನಾಡಿನ ಪೂಲಿ ಮತ್ತು ಕೇರಳದ ಪುಲಿಕಲಿ ಮುಂತಾದ ಅನೇಕ ಸಾಂಸ್ಕೃತಿಕ ನೃತ್ಯಗಳು ನಮ್ಮಲ್ಲಿವೆ, ಅವು ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಸಂಬಂಧ ಹೊಂದಿವೆ’ ಎಂದರು.

‘ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ಏಕೆಂದರೆ ಅವರು ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಕರ್ನಾಟಕದ ಬಿಆರ್‌ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಜನಸಂಖ್ಯೆ ನಿರಂತರವಾಗಿ ಏರಿದೆ. ಇದಕ್ಕೆ ಹೆಚ್ಚಿನ ಮನ್ನಣೆ ಸಲ್ಲುವುದು ಹುಲಿಯನ್ನು ಪೂಜಿಸುವ ಸೋಲಿಗ ಬುಡಕಟ್ಟು ಜನಾಂಗಕ್ಕೆ. ಅವರ ಕಾರಣದಿಂದಾಗಿ, ಈ ಪ್ರದೇಶದಲ್ಲಿ ಮನುಷ್ಯ-ಪ್ರಾಣಿ ಸಂಘರ್ಷ ಬಹುತೇಕ ಇಲ್ಲ’ ಎಂದರು.

ಇದನ್ನೂ ಓದಿ: ಮಹಾಕುಂಭ ಮೇಳ ಟೀಕಿಸುವುದು ಗುಲಾಮಗಿರಿಯ ಮನಸ್ಥಿತಿ; ಖರ್ಗೆ, ದೀದಿ, ಲಾಲುಗೆ ಪರೋಕ್ಷವಾಗಿ ಮೋದಿ ತಿರುಗೇಟು!

‘ಮಧ್ಯ ಭಾರತದ ಅನೇಕ ಬುಡಕಟ್ಟು ಜನಾಂಗದವರು ಬಾಗೇಶ್ವರನನ್ನು ಪೂಜಿಸುತ್ತಾರೆ. ಮಹಾರಾಷ್ಟ್ರದಲ್ಲಿ ವಾಘೋಬಾನನ್ನು ಪೂಜಿಸುವ ಸಂಪ್ರದಾಯವಿದೆ. ಭಗವಾನ್ ಅಯ್ಯಪ್ಪ ಹುಲಿಯೊಂದಿಗೆ ಬಹಳ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ’ ಎಂದರು.

ಧಿನಿಧಿ ಬಗ್ಗೆ ಪ್ರಶಂಸೆ:

ನವದೆಹಲಿ: ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 9 ಚಿನ್ನ ಸೇರಿ 11 ಪದಕ ಪಡೆದ ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಘು ಅವರನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಜೆ ಮುಗಿಸಿ ವಾಪಾಸ್‌ ಬಂದ ಬಾಲಕಿಯರಿಗೆ ಪ್ರೆಗ್ನೆನ್ಸಿ ಟೆಸ್ಟ್‌, ಸರ್ಕಾರಿ ಗರ್ಲ್ಸ್‌ ಹಾಸ್ಟೆಲ್‌ನ ಹೊಸ ನಿಯಮಕ್ಕೆ ಆಕ್ರೋಶ
ಜರ್ಮನಿಗೆ ತೆರಳಿದ ರಾಹುಲ್ ಗಾಂಧಿ: 6 ತಿಂಗಳಲ್ಲಿ ವಿರೋಧ ಪಕ್ಷದ ನಾಯಕನ 5ನೇ ವಿದೇಶಿ ಪ್ರವಾಸ