ಭಾರತದ ಚುನಾವಣೆ ಸುಧಾರಣೆಗಾಗಿ 180 ಕೋಟಿ ಹಣ : ಮತ್ತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿ

Published : Feb 24, 2025, 07:59 AM ISTUpdated : Feb 24, 2025, 08:34 AM IST
ಭಾರತದ ಚುನಾವಣೆ ಸುಧಾರಣೆಗಾಗಿ 180 ಕೋಟಿ ಹಣ : ಮತ್ತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿ

ಸಾರಾಂಶ

ಭಾರತದ ಚುನಾವಣಾ ಸುಧಾರಣೆಗೆ ಯುಎಸ್‌ ಏಡ್‌ ನಿಧಿಯಿಂದ ನೀಡಲಾದ ಹಣದ ಬಗ್ಗೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೋದಿ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಆದರೆ, ಚುನಾವಣೆಗೆ ಅಲ್ಲ, 7 ಯೋಜನೆಗೆ ಅಮೆರಿಕ ಹಣ ನೀಡಿರುವುದು ವರದಿಯಲ್ಲಿದೆ.

ವಾಷಿಂಗ್ಟನ್‌ (ಫೆ.24) : ಭಾರತದ ಚುನಾವಣೆ ಸುಧಾರಣೆಗಾಗಿ 180 ಕೋಟಿ ರು. ನೀಡಿದ್ದ ಯುಎಸ್‌ ಏಡ್‌ ನಿಧಿಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಕಿಡಿಕಾರಿದ್ದಾರೆ. ‘ನಮ್ಮ ವಸ್ತುಗಳಿಗೆ ಶೇ.200 ತೆರಿಗೆ ಹಾಕುವವರಿಗೆ ಅಷ್ಟು ಹಣ ಯಾಕೆ ಕೊಡಬೇಕು? ಅವರು ನಮ್ಮನ್ನು ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಕನ್ಸರ್ವೇಟಿವ್‌ ಪೊಲಿಟಿಕಲ್‌ ಆ್ಯಕ್ಷನ್‌ ಕಾನ್ಫರೆನ್ಸ್‌ (ಸಿಪಿಎಸಿ)ಯಲ್ಲಿ ಮಾತನಾಡಿದ ಅವರು, ‘ಭಾರತದ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅಮೆರಿಕದ ಹಿಂದಿನ ಅಧ್ಯಕ್ಷ ಬೈಡನ್‌ ಅಧಿಕಾರಾವಧಿಯಲ್ಲಿ 180 ಕೋಟಿ ರು. ನೀಡಲಾಗಿದೆ. ನಾವು ಹಳೆಯ ಬ್ಯಾಲೆಟ್‌ ಪೇಪರ್‌ ಬಳಸಿಕೊಂಡು, ಅವರ ಚುನಾವಣೆ ಸುಧಾರಣೆಗೆ ನೆರವು ನೀಡುವುದು ಸರಿಯೇ?’ ಎಂದರು.

‘ಅವರಿಗೆ ನಮ್ಮ ಹಣಬೇಕಿಲ್ಲ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆ ಹಾಕುವ ದೇಶಗಳಲ್ಲೊಂದಾಗಿದೆ. ನಾವೇನಾದರೂ ನಮ್ಮ ವಸ್ತುಗಳನ್ನು ಮಾರಾಟ ಮಾಡಲು ಹೋದರೆ ಅದರ ಮೇಲೆ ಅವರು ಶೇ.200ರಷ್ಟು ತೆರಿಗೆ ಹಾಕುತ್ತಾರೆ. ಆದರೂ ಅವರ ಚುನಾವಣೆಗೆ ನಾವು ಸಾಕಷ್ಟು ಹಣದ ನೆರವು ಕೊಡುತ್ತಿದ್ದೇವೆ’ ಎಂದು ಕಿಡಿಕಾರಿದರು.

ಬಾಂಗ್ಲಾ ವಿರುದ್ಧವೂ ಕಿಡಿ: ಇದೇ ವೇಳೆ ಬಾಂಗ್ಲಾದೇಶ ವಿರುದ್ಧವೂ ಕಿಡಿಕಾರಿದ ಅವರು, ನಾವು 251 ಕೋಟಿ ರು.ಅನ್ನು ಬಾಂಗ್ಲಾದೇಶದ ರಾಜಕೀಯ ಸುಧಾರಣೆಗೆ ನೀಡಿದ್ದೇವೆ, ಈ ಮೂಲಕ ಅವರು ಮೂಲಭೂತವಾದಿ ಎಡಪಂಥೀಯರಿಗೆ ಮತಹಾಕಲು ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು.

ಮೋದಿ ಸ್ಪಷ್ಟನೆಗೆ ಕಾಂಗ್ರಸ್‌ ಆಗ್ರಹ: ಪ್ರಧಾನಿ ನರೇಂದ್ರ ಮೋದಿ ಅವರಿಗೆ 180 ಕೋಟಿ ರು. ಚುನಾವಣಾ ಅನುದಾನವನ್ನು ಅಮೆರಿಕ ನೀಡಿತ್ತು ಎಂಬ ಟ್ರಂಪ್‌ ಶನಿವಾರದ ಹೇಳಿಕೆ ಬಗ್ಗೆ ಮೋದಿ ಹಾಗೂ ಕೇಂದ್ರ ಸರ್ಕಾರ ಮೌನ ಮುರಿದು ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಚುನಾವಣೆಗೆ ಇಲ್ಲ, ಬದಲಾಗಿ 7 ಯೋಜನೆಗೆ ಅಮೆರಿಕದಿಂದ ಹಣ
ನವದೆಹಲಿ: ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ 180 ಕೋಟಿ ನೆರವು ನೀಡಲಾಗಿದೆ ಎಂಬ ಆರೋಪದ ನಡುವೆಯೇ 2024ನೇ ಸಾಲಿನಲ್ಲಿ ಬಿಡುಗಡೆಯಾದ ಯುಎಸ್‌ಏಡ್‌ಗೆ ಸಂಬಂಧಿಸಿದ ಹಣಕಾಸು ಸಚಿವಾಲಯದ ವಾರ್ಷಿಕ ವರದಿಯಲ್ಲಿ ಮಾತ್ರ ಅದರ ಯಾವುದೇ ಪ್ರಸ್ತಾಪ ಇಲ್ಲ.ಬದಲಾಗಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯುಎಸ್‌ಏಡ್‌ನಡಿ 6,498 ಕೋಟಿ ರು. ವೆಚ್ಚದ 7 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವಾಲಯದ 2023-24ನೇ ಸಾಲಿನ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

'ಟ್ರಂಪ್, ಮೋದಿ ಮತ್ತು ನಾನು ಬಲಪಂಥೀಯ ನಾಯಕರು ಒಂದಾದ್ರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆಯೇ?' ಎಡಪಂಥೀಯರ ವಿರುದ್ಧ ಮೆಲೋನಿ ಕಿಡಿ!

2023-24ನೇ ಹಣಕಾಸು ವರ್ಷದಲ್ಲಿ 7 ಯೋಜನೆಗಳಿಗೆ ಯುಎಸ್‌ಏಡ್‌ನಿಂದ 825 ಕೋಟಿ ರು. ನೆರವು ಹರಿದುಬಂದಿದೆ. ಆ ಹಣಕಾಸು ವರ್ಷದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿ ಯಾವುದೇ ಹಣ ನೀಡಿಲ್ಲ. ಆದರೆ ಕೃಷಿ ಮತ್ತು ಆಹಾರ ಭದ್ರತೆ ಕಾರ್ಯಕ್ರಮಗಳು, ನೀರು, ನೈರ್ಮಲ್ಯ ಮತ್ತು ಶುಚಿತ್ವ, ನವೀಕರಿಸಬಹುದಾದ ಇಂಧನ ಮತ್ತು ವಿಪತ್ತು ನಿರ್ವಹಣೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹಣ ಒದಗಿಸಲಾಗಿದೆ.ಇದರ ಜತೆಗೆ ಸುಸ್ಥಿರ ಅರಣ್ಯ ಹಾಗೂ ಕ್ಲೈಮ್ಯಾಟ್‌ ಅಡಾಪ್ಟೇಷನ್‌ ಪ್ರೋಗ್ರಾಂ, ಇಂಧನ ಕಾರ್ಯಕ್ಷಮತೆ ತಂತ್ರಜ್ಞಾನ ವಾಣಿಜ್ಯೀಕರಣ ಮತ್ತು ಆವಿಷ್ಕಾರ ಯೋಜನೆಗಳಿಗೆ ಸಂಬಂಧಿಸಿಯೂ ಹಣ ಒದಗಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶೀಘ್ರದಲ್ಲಿ ಭಾರತ, ಚೀನಾದ ಮೇಲೆಯೂ ಪ್ರತಿ ತೆರಿಗೆ ಹೇರುತ್ತೇವೆ : ಡೊನಾಲ್ಡ್‌ ಟ್ರಂಪ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..