ಮುಂದಿನ ವರ್ಷ ಬಿಡುಗಡೆಯಾಗಲಿರುವ ಸ್ಕೋಡಾ ಕಾರಿನ ಮೊದಲ ಮಾಲೀಕ ಕಾಸರಗೋಡಿನ ಕುರಾನ್ ಶಿಕ್ಷಕ ಮೊಹಮದ್ ಜಿಯಾದ್. ಹೊಸ ಕಾರಿಗೆ ಹೆಸರು ಸೂಚಿಸುವ ಸ್ಪರ್ಧೆಯಲ್ಲಿ ಜಿಯಾದ್ ಗೆದ್ದಿದ್ದಾರೆ.
ಕಾಸರಗೋಡು (ಆ.25): ಮುಂದಿನ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಸ್ಕೋಡಾ ಕಂಪನಿಯ ಮುಂದಿನ ಎಸ್‌ಯುವಿಯನ್ನು ಇತ್ತೀಚೆಗೆ ಅನಾವರಣ ಮಾಡಿತ್ತು. ಆದರೆ, ಮಾರುಕಟ್ಟೆಗ ಬರುವ ಮುನ್ನವೇ ಈ ಕಾರ್‌ನ ಮೊದಲ ಮಾಲೀಕರು ಯಾರಾಗಲಿದ್ದಾರೆ ಎನ್ನುವ ಮಾಹಿತಿಯನ್ನು ಸ್ವತಃ ಕಂಪನಿಯೇ ಹಂಚಿಕೊಂಡಿದೆ. ಕಾಸರಗೋಡಿನ ಮದರಸಾದಲ್ಲಿ ಕುರಾನ್ ಪಾಠ ಮಾಡುವ ಶಿಕ್ಷಕ ಮೊಹಮದ್ ಜಿಯಾದ್ ಈ ಕಾರ್‌ಗೆ ಮೊದಲ ಮಾಲೀಕರಾಗಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಅಂದಾಜು 4 ಮೀಟರ್ ಉದ್ದವಿರುವ ಕಾರ್‌ಗೆ ಹೊಸ ಹೆಸರು ಸೂಚಿಸುವಂತೆ ಸ್ಕೋಡಾ ಕಂಪನಿ ತನ್ನ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ತಿಳಿಸಿತ್ತು. ಹೊಸ ಕಾರ್‌ಗೆ ಹೆಸರು ಸೂಚಿಸುವ ಅಭಿಯಾನದಲ್ಲಿ ಮೊಹಮದ್ ಜಿಯಾದ್ ತಿಳಿಸಿದ ಹೆಸರು ಸೆಲೆಕ್ಟ್ ಆಗಿದ್ದನ್ನೂ ಸ್ವತಃ ಸ್ಕೋಡಾ ತನ್ನ ಇನ್ಸ್‌ಟಾಗ್ರಾಮ್ ಪುಟದಲ್ಲಿ ತಿಳಿಸಿದೆ.
"ಹೊಸ #SkodaKylaq ಅನ್ನು ಗೆದ್ದಿದ್ದಕ್ಕಾಗಿ ಕೇರಳದ ಮೊಹಮ್ಮದ್ ಜಿಯಾದ್ ಅವರಿಗೆ ಅಭಿನಂದನೆಗಳು. ಮುಂದಿನ ವರ್ಷ ಈ ಕಾರ್‌ಮಾರುಕಟ್ಟೆಗೆ ಬಿಡುಗಡೆಯಾದಾಗ ಇವರು ಅದನ ಮೊದಲ ಮಾಲೀಕರಾಗುತ್ತಾರೆ" ಎಂದು ಪೋಸ್ಟ್ ಹೇಳಿದೆ. ಕಾರಿಗೆ ಹೆಸರಿಡುವ ಸ್ಪರ್ಧೆಯಲ್ಲಿ ಸುಮಾರು 2 ಲಕ್ಷ ಜನರು ಭಾಗವಹಿಸಿದ್ದರು. ಮತ್ತೊಂದು ವೀಡಿಯೊದಲ್ಲಿ, ಸ್ಕೋಡಾ ಇಂಡಿಯಾ, ಕೈಲಾಕ್ ಎಂಬುದು ಸಂಸ್ಕೃತ ಪದವಾಗಿದ್ದು ಅದು 'ಸ್ಫಟಿಕ' ಎಂದರ್ಥ ಮತ್ತು ಶಿಖರ ಪದದಿಂದ ಪ್ರೇರಿತವಾಗಿದೆ ಎಂದಿದೆ.
undefined
ಕ್ಯಾಲಿಕಟ್ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಪದವೀಧರರಾಗಿರುವ ಜಿಯಾದ್ ಅವರು ಕಳೆದ ಎರಡೂವರೆ ವರ್ಷಗಳಿಂದ ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಕುರಾನ್ ಬೋಧನೆ ಮಾಡುತ್ತಿದ್ದಾರೆ. "ನನಗೆ ಕಾರ್ ಕ್ರೇಜ್ ಇಲ್ಲ. ನಾನು ಸ್ವಂತ ಕಾರು ಹೊಂದಲು ಬಯಸಿದ್ದೆ ಆದರೆ ಅದನ್ನು ಖರೀದಿಸುವಷ್ಟು ನನ್ನ ಕುಟುಂಬದ ಪರಿಸ್ಥಿತಿ ಸರಿಯಾಗಿಲ್ಲ" ಎಂದು ಜಿಯಾದ್ ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ತನ್ನ ಮುಂದಿನ ಎಸ್‌ಯುವಿಗೆ ಸೂಕ್ತವಾದ ಹೆಸರು ಸೂಚಿಸುವಂತೆ ಸ್ಕೋಡಾ ಕಂಪನಿಯ ಸ್ಪರ್ಧೆಯನ್ನು ನೋಡಿದ ಬಳಿಕ, ತಾನೊಂದು ಹೆಸರು ನೀಡಬೇಕು ಎಂದು ಯೋಚನೆ ಮಾಡಿದ್ದೆ ಎಂದಿದ್ದಾರೆ. ಇದಕ್ಕೆ ಸ್ಕೋಡಾ ಒಂದು ಷರತ್ತನ್ನೂ ನೀಡಿತ್ತು. ಯಾವುದೇ ಹೆಸರು ಸೂಚಿಸಿದರೂ ಅದು ಇಂಗ್ಲೀಷ್‌ನ K ಅಕ್ಷರದಿಂದ ಆರಂಭವಾಗಿ Q ಅಕ್ಷರದಿಂದ ಕೊನೆಯಾಗಬೇಕು ಎಂದಿತ್ತು.
"ನಾನು ಕೆಲವು ದಿನಗಳವರೆಗೆ ಅದರ ಬಗ್ಗೆ ಯೋಚಿಸಿದೆ ಮತ್ತು K ಮತ್ತು Q ನಿಂದ ಪ್ರಾರಂಭವಾಗುವ ಹೆಸರುಗಳ ಪಟ್ಟಿಯನ್ನು ಮಾಡಿ ನಂತರ ಕೈಲಾಕ್‌ನಲ್ಲಿ ಅಂತಿಮಗೊಳಿಸಿದೆ," ಎಂದು ಜಿಯಾದ್ ಹಹೇಳಿದ್ದಾರೆ. ಮಲಪ್ಪುರಂ ಜಿಲ್ಲೆಯ ಚೆಮ್ಮಾಡ್‌ನಲ್ಲಿರುವ ಅಲ್ ಮರ್ಜನ್ ಇನ್‌ಸ್ಟಿಟ್ಯೂಟ್ ಫಾರ್ ಹಫಾಝತ್ ಅಲ್ ಕುರಾನ್‌ನಲ್ಲಿ ಏಳು ವರ್ಷ ಇಸ್ಲಾಮಿಕ್ ಶಿಕ್ಷಣ ಮಾಡಿರುವ ಜಿಯಾದ್, ಕೋಝಿಕ್ಕೋಡ್‌ನ ಕುಟ್ಟಿಕಟೂರ್‌ನಲ್ಲಿರುವ ಜಾಮಿಯಾ ಯಮಾನಿಯಾ ಅರೇಬಿಕ್ ಕಾಲೇಜಿನಲ್ಲಿ ಒಂದು ವರ್ಷದ ಇಸ್ಲಾಮಿಕ್ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ಕಳೆದ ವಾರ, ಸ್ಕೋಡಾ ಇಂಡಿಯಾ ಫೈನಲ್ ಆಗಿದ್ದ ಎಂಟು ಹೆಸರುಗಳನ್ನು ವೋಟಿಂಗ್‌ಗೆ ಹಾಕಿತ್ತು. ಕ್ವಿಕ್, ಕೈಲಾಕ್, ಕಾಸ್ಮಿಕ್, ಕೈರೋಕ್, ಕಾರಿಕ್, ಕಾರ್ಮಿಕ್, ಕ್ಲಿಕ್ ಮತ್ತು ಕಯಾಕ್. ಮತದಾನದ ಆಧಾರದ ಮೇಲೆ, ಐದು ಹೆಸರುಗಳನ್ನು ಆಯ್ಕೆ ಮಾಡಲಾಗಿತ್ತು. ಕ್ವಿಕ್, ಕೈಲಾಕ್, ಕಾಸ್ಮಿಕ್, ಕ್ಲಿಕ್ ಮತ್ತು ಕಯಾಕ್.
ಸ್ಕೋಡಾ ಕುಶಾಖ್ ಮೊಂಟೆ ಕಾರ್ಲೋ ಪ್ರಯಾಣ, ಎಲ್ಲಾ ರಸ್ತೆಯಲ್ಲೂ ಆರಾಮ; Test Drive Review!
ಎರಡು ದಿನಗಳ ಹಿಂದೆ ಸ್ಕೋಡಾ ಇಂಡಿಯಾದಿಂದ ತನ್ನ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಯಾದ್‌ಗೆ ಕರೆ ಬಂದಿತ್ತು. "ಯಾಕೆ? ನಿಮಗೆ ನಂಬಲು ಸಾಧ್ಯವಾಗುತ್ತಿಲ್ಲವೇ," ಕಾರ್ಯನಿರ್ವಾಹಕ ಅವರನ್ನು ಕೇಳಿದರು. "ಬೇಕಿದ್ದರೆ, ಸ್ಕೋಡಾ ಇಂಡಿಯಾ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿ" ಎಂದು ಕಾರ್ಯನಿರ್ವಾಹಕರು ಅವರಿಗೆ ಹೇಳಿದರು. "ನಾನು ಪರಿಶೀಲಿಸಿದಾಗ ನನ್ನ ಹೆಸರನ್ನು ನೋಡಿದೆ. ಮೊಹಮ್ಮದ್ ಜಿಯಾದ್, ಕೇರಳ ಎಂದು ತನ್ನ ಹೆಸರಿತ್ತು" ಅವರು ಹೇಳಿದರು.
ಕಾರು ಖರೀದಿಸುವಾಗ ಭಾರತೀಯರ ಮೊದಲ ಆದ್ಯತೆ ಏನು? ಸ್ಕೋಡಾ ಸಮೀಕ್ಷೆಯಿಂದ ಬಹಿರಂಗ!