ಮೂರು ಕಣ್ಣಿನ ಬೆಕ್ಕಿನ ಮರಿ ಜನನ: ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್‌

Published : Sep 10, 2022, 03:30 PM ISTUpdated : Sep 10, 2022, 03:54 PM IST
ಮೂರು ಕಣ್ಣಿನ ಬೆಕ್ಕಿನ ಮರಿ ಜನನ: ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್‌

ಸಾರಾಂಶ

ಮೂರು ಕಣ್ಣಿನ ಬೆಕ್ಕಿನ ಮರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಸಾಮಾಜಿಕ ಜಾಲತಾಣಗಳ ಕಾಲವಾಗಿದ್ದು, ಚಿತ್ರ ವಿಚಿತ್ರ ವಿಡಿಯೋಗಳು ಇಲ್ಲಿ ಕಾಣ ಸಿಗುತ್ತವೆ. ಸಾಮಾಜಿಕ ಜಾಲತಾಣಗಳು ಅನೇಕರ ಅಭಿವ್ಯಕ್ತಿಗೆ ವೇದಿಕೆಯೊದಗಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪಕ್ಷಿಗಳ ಅನೇಕ ವಿಡಿಯೋಗಳನ್ನು ನೀವೆಲ್ಲರೂ ಸಾಮಾನ್ಯವಾಗಿ ನೋಡಿರಬಹುದು. ಅದೇ ರೀತಿ ಈಗ ಬೆಕ್ಕಿನ ಮರಿಯೊಂದರ ವಿಡಿಯೋವೊಂದು ವೈರಲ್ ಆಗಿದೆ. 

ಮೂರು ಕಣ್ಣಿನ ಬೆಕ್ಕಿನ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಕೃತಿಯ ಸೃಷ್ಟಿ (Nature creation)ನಿಜಕ್ಕೂ ವೈವಿಧ್ಯ ಹಾಗೂ ನಿಗೂಢವಾದುದು. ಕೆಲವೊಮ್ಮೆ ಕೆಲ ನಿಗೂಢಗಳನ್ನು ಪವಾಡಗಳನ್ನು ನಮ್ಮ ಕಣ್ಣುಗಳು ನಂಬಲೇಬೇಕಾದಂತಹ ಸ್ಥಿತಿ ನಿರ್ಮಾಣವಾಗಿರುತ್ತದೆ. ಹಾಗೆಯೇ ಈಗ ಸಾಮಾಜಿಕ ಜಾಲತಾಣವಾದ (Social Media) ರೆಡಿಟ್‌ನಲ್ಲಿ interestingasfuck ಎಂಬ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಬೆಕ್ಕಿನ ಮರಿಯ ವಿಡಿಯೋ ನೋಡಿದವರೆಲ್ಲಾ ಅಚ್ಚರಿಗೆ ಒಳಗಾಗಿದ್ದಾರೆ. ವಿಡಿಯೋ ನೋಡಿದವರೆಲ್ಲಾ ಪ್ರಕೃತಿಯ ಈ ವೈಚಿತ್ರಕ್ಕೆ ಮರುಳಾಗಿದ್ದಾರೆ. 

ಆನ್‌ಲೈನ್ ಕ್ಲಾಸ್‌ ವೇಳೆ ಅಡ್ಡಬಂತು ಬೆಕ್ಕು, ಅಮಾನತುಗೊಂಡ ಶಿಕ್ಷಕಿಗೆ 4.7 ಲಕ್ಷ ರೂ ಪರಿಹಾರ!

ವಿಡಿಯೋದಲ್ಲಿ ಕಾಣಿಸುವಂತೆ ಮಹಿಳೆಯೊಬ್ಬರು ಬೆಕ್ಕಿನ ಮರಿಯನ್ನು ತನ್ನ ತೊಡೆಯಲ್ಲಿ ಮಲಗಿಸಿಕೊಂಡಿದ್ದು, ಮುದ್ದಾಡುತ್ತಾಳೆ. ಇದೇ ವೇಳೆ ಆಕೆ ಬೆಕ್ಕಿನ ಒಂದು ಕಣ್ಣನ್ನು ಕೈಯಲ್ಲಿ ಬಿಡಿಸಿದ್ದು, ಈ ವೇಳೆ ಒಂದೇ ಕಣ್ಣೊಳಗೆ ಎರಡು ಕಣ್ಣುಗುಡ್ಡೆಗಳಿರುವುದು (Eye ball) ಕಾಣಿಸುತ್ತಿದೆ. ಈ ಎರಡು ಕಣ್ಣು ಗುಡ್ಡೆಗಳು ಒಂದಕ್ಕೊಂದು ಅಂಟಿಕೊಂಡಿವೆ. 

ಇತ್ತ ನೋಡುಗರು ಕುತೂಹಲದಿಂದ ಈ ಬೆಕ್ಕಿನ ಮರಿ ಬಗ್ಗೆ ವಿಚಾರಿಸಿದ್ದು, ಈ ಮೂರನೇ ಕಣ್ಣಿನಲ್ಲಿ ರೆಟಿನಾ ಇದೆಯೇ, ಈ ಬೆಕ್ಕಿನ ಮೂರನೇ ಕಣ್ಣು ಕೂಡ ಕಾರ್ಯನಿರ್ವಹಿಸುತ್ತಿದೆಯೇ ಎಂದೆಲ್ಲಾ ಪ್ರಶ್ನಿಸಿದ್ದಾರೆ. ಅನೇಕರ ಈ ರೀತಿಯ ಕುತೂಹಲಕಾರಿ ಪ್ರಶ್ನೆಗಳಿಗೆ ಪಶುವೈದ್ಯರೊಬ್ಬರು ಉತ್ತರಿಸಿದ್ದು, ಕ್ಷಿಪ್ರ ರೂಪಾಂತರಗಳು ಎಲ್ಲಾ ಸಮಯದಲ್ಲೂ ಸಂಭವಿಸುತ್ತವೆ. ಅವುಗಳಲ್ಲಿ ಹೆಚ್ಚಿನವು ಸರಿಪಡಿಸಲ್ಪಡುತ್ತವೆ ಅಥವಾ ಹೊರ ಹಾಕಲ್ಪಡುತ್ತವೆ. ಅವುಗಳಲ್ಲಿ ಹೆಚ್ಚಿನವು ಸಂಬಂಧಿವಿಲ್ಲದ್ದಾಗಿದ್ದು, ಇವುಗಳು ಡಿಎನ್‌ಎ ಕೋಡಿಂಗ್‌ನ (DNA Coding) ಭಾಗಗಳಲ್ಲ. ಆದರೆ ಕೆಲವೊಮ್ಮೆ ಈ ರೀತಿಯ ಆಸಕ್ತಿದಾಯಕ ಬದಲಾವಣೆಗಳಾಗುತ್ತವೆ ಎಂದು ಉತ್ತರಿಸಿದ್ದಾರೆ.

Kolar: ಕುಚಿಕು ಫ್ರೆಂಡ್ಸ್‌ಗಳಾದ ಕೋತಿ, ನಾಯಿ ಹಾಗೂ ಬೆಕ್ಕು!

ಕೆಲ ದಿನಗಳ ಹಿಂದೆ ಮಧ್ಯಪ್ರದೇಶಲ್ಲಿ ವಿಚಿತ್ರ ಮಗುವೊಂದು ಜನಿಸಿತ್ತು. ಕಾಲುಗಳಿರುವ ಜಾಗದಲ್ಲಿ ಈ ಮಗುವಿಗೆ ಕೊಂಬಿನಾಕೃತಿಯ ರಚನೆ ಇತ್ತು. ಸಾಮಾನ್ಯವಾಗಿ ವಿಚಿತ್ರ ಕಲ್ಪನೆಗಳನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಮಗುವಿನ ಮುಖದೊಂದಿಗೆ ಪ್ರಾಣಿಗಳಂತಹ ದೇಹ, ಮನುಷ್ಯರ ಕೈ ಕಾಲುಗಳ ಬದಲು ಪ್ರಾಣಿಗಳ ಕೈಕಾಲು ಕೊಂಬು ಹೊಂದಿರುವ ಹೈಬ್ರೀಡ್ ಮಗು ಜನಿಸುವುದು ಮುಂತಾದ ರೋಚಕ ದೃಶ್ಯಗಳನ್ನು ಕಾರ್ಟೂನ್ ಸಿರೀಸ್‌ಗಳಲ್ಲಿ ಹಾಲಿವುಡ್‌ ಸಿನಿಮಾಗಳಲ್ಲಿ(Hollywood movies) ನೋಡಿರುತ್ತೇವೆ. ಆದರೆ ಮಧ್ಯಪ್ರದೇಶದಲ್ಲಿ ಈ ಇಂತಹ ಕಲ್ಪನೆಯನ್ನು ನಿಜವಾಗಿಸುವ ಘಟನೆಯೊಂದು ಕೆಲ ದಿನಗಳ ಹಿಂದೆ ನಡೆದಿತ್ತು.

ಮಹಿಳೆಯೊಬ್ಬರು ಕಾಲುಗಳ ಜಾಗದಲ್ಲಿ ಕೊಂಬುಗಳ (horn) ಆಕಾರವಿರುವ ಮಗುವಿಗೆ ಜನ್ಮ ನೀಡಿದ್ದರು. ಮಧ್ಯಪ್ರದೇಶದ ಶಿವಪುರ ಜಿಲ್ಲೆಯಲ್ಲಿ ಬರುವ, ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಗಸ್ಟ್ 26ರಂದು ಈ ಮಗು ಜನಿಸಿತ್ತು. ಈ ವಿಚಿತ್ರ ಮಗುವನ್ನು ನೋಡಿ ಮಗುವಿನ ತಾಯಿಯ ಜೊತೆ ವೈದ್ಯಕೀಯ ಸಿಬ್ಬಂದಿಯೂ ದಂಗಾಗಿದ್ದರು. 

ಇಂತಹ ವಿಚಿತ್ರ ಮಕ್ಕಳು ಜನಿಸಿದ್ದು ಇದೇ ಮೊದಲೇನಲ್ಲ. ಕಳೆದ ಜೂನ್‌ನಲ್ಲಿ ಉತ್ತರಪ್ರದೇಶದ ಹರ್ದೊಯಿಯಲ್ಲಿ ವಿಚಿತ್ರ ಮಗುವೊಂದು ಜನಿಸಿತ್ತು. ನಾಲ್ಕು ಕಾಲು ಹಾಗೂ ನಾಲ್ಕು ತೋಳುಗಳನ್ನು  ಹೊಂದಿದ ಈ ಮಗು ಜನಿಸಿದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಮಗು ದೇವಿಯ ಪ್ರತಿರೂಪ ಎಂದು ಭಾವಿಸಿ ಮಗುವನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸಿದ್ದರು. ಹೆಣ್ಣು ಮಗು ಇದಾಗಿದ್ದು, ಅರೋಗ್ಯವಾಗಿತ್ತು. ಉತ್ತರ ಪ್ರದೇಶ (Uttar Pradesh) ರಾಜ್ಯದ ಹರ್ದೋಯಿ (Hardoyi) ಜಿಲ್ಲೆಯ  ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರೀನಾ (Kareena) ಹಾಗೂ ಸಂಜಯ್(Sanjay) ಎಂಬ ದಂಪತಿಗೆ ಈ ಮಗು ಜನಿಸಿತ್ತು. 

ಭಾರತದಲ್ಲಿ ಈ ರೀತಿ ಮಗು ಜನಿಸಿದ್ದು ಇದೇ ಮೊದಲಲ್ಲ, ಈ ವರ್ಷದ ಆರಂಭದಲ್ಲಿ, ನಾಲ್ಕು ಕೈಗಳು ಮತ್ತು ಕಾಲುಗಳೊಂದಿಗೆ ಜನಿಸಿದ ಮತ್ತೊಂದು ಪುಟ್ಟ ಮಗುವನ್ನು ದೇವರ ಅವತಾರವೆಂದು ಭಾವಿಸಿ ಸ್ಥಳೀಯರು ಆರಾಧಿಸಲು ಆರಂಭಿಸಿದ್ದರು. ಜನವರಿ 17 ರಂದು ಮಹಿಳೆಯೊಬ್ಬರು ವಿಚಿತ್ರ ಮಗುವಿಗೆ ಜನ್ಮ ನೀಡಿದ್ದರು. ಹಾಗೆಯೇ 2019ರಲ್ಲಿ ಮತ್ತೊಬ್ಬ ಮಹಿಳೆ ನಾಲ್ಕು ಕಾಲುಗಳು ಹಾಗೂ ಮೂರು ಕೈಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ
ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್