ಇತಿಹಾಸದ ಮೂಲಗಳು ಹೇಳುವಂತೆ ಈ ಕೊಹಿನೂರ್ ವಜ್ರವನ್ನು, ಆಂಗ್ಲೋ-ಸಿಖ್ ಯುದ್ಧದ ನಂತರ ಲಾಹೋರ್‌ನ ಮಹಾರಾಜರೊಂದಿಗೆ ಸಹಿ ಮಾಡಿದ ದಂಡನಾತ್ಮಕ ಒಪ್ಪಂದದ ಭಾಗವಾಗಿ 1849 ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು.
ಇಂಗ್ಲೆಂಡ್ ರಾಣಿ ಎಲಿಜಬೆತ್ ನಿಧನದ ನಂತರ ಸೋಶಿಯಲ್ ಮೀಡಿಯಾದಲ್ಲಿ ಪೂರ್ತಿ ರಾಣಿಗೆ ಸಂಬಂಧಿಸಿದ ವಿಚಾರಗಳೇ ಟ್ರೆಂಡ್ ಆಗಿ ಜೊತೆ ಜೊತೆಗೆ ಟ್ರೋಲ್ ಕೂಡ ಆಗಿತ್ತು. ನಿನ್ನೆ ರಾಣಿ ಎಲಿಜಬೆತ್ ಪುತ್ರ ಚಾರ್ಲ್ಸ್ ಫೋಟೋವನ್ನು ಇಟ್ಟುಕೊಂಡು, 70 ವರ್ಷದಿಂದ ನಿರುದ್ಯೋಗಿಯಾಗಿದ್ದ ನಿಮಗೆ ಒಮ್ಮಿಂದೊಮ್ಮೆಲೇ ಕೆಲಸ ಸಿಗುತ್ತದೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳಿ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ಇದರ ಜೊತೆಗೆ ಎಲಿಜಬೆತ್ ಸಾವಿನ ಘೋಷಣೆಯಾದ ಎರಡು ನಿಮಿಷಗಳ ನಂತರ ಬಕಿಂಗ್ ಹ್ಯಾಮ್ ಅರಮನೆ ಮುಂದೆ ಎರಡು ಕಾಮನಬಿಲ್ಲುಗಳು ಕಾಣಿಸಿಕೊಂಡಿದ್ದವು. ಇದರ ಜೊತೆಗೆ ವಿಂಡ್ಸರ್ ಕಾಸ್ಟೆಲ್ ಮುಂಭಾಗದಲ್ಲೂ ಒಂದು ಕಾಮನಬಿಲ್ಲು ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದವು. ಇವುಗಳ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿ ಜನ ಬ್ರಿಟಿಷ್ ಸಾಮ್ರಾಜ್ಯವನ್ನು ಧೀರ್ಘ ಕಾಲ ಆಳಿದ ರಾಣಿಯ ಅಂತಿಮ ವಿದಾಯದ ಗೌರವಾರ್ಥವಾಗಿ ಕಾಮನಬಿಲ್ಲುಗಳು ಕಾಣಿಸಿಕೊಂಡವು ಎಂದು ಬಣ್ಣಿಸಿದ್ದವು.
ಈ ಮಧ್ಯೆ ಬ್ರಿಟಿಷ್ ರಾಣಿಯ ಬಳಿ ಇದ್ದ ವಿಶ್ವದ ಅತ್ಯಂತ ದುಬಾರಿ ಆಭರಣಗಳು ವಸ್ತುಗಳ ಬಗ್ಗೆಯೂ ಸಾಮಾಜಿಕ ಜಾಲತಾಣ ಅದರಲ್ಲೂ ಟ್ವಿಟ್ಟರ್‌ನಲ್ಲಿ ಸಾಕಷ್ಟು ಚರ್ಚೆಯಾಗಿದ್ದವು. ಅವರ ಮೈ ಪೂರ್ತಿ ಇರುವ ಆಭರಣ ಒಂದೊಂದು ದೇಶದಿಂದ ಕದ್ದು ಕಳುವಾದಂತಹವುಗಳು ಎಂಬ ಪೋಸ್ಟ್‌ಗಳು ಕಾಣಿಸಿಕೊಂಡಿದ್ದವು. ಈ ನಡುವೆ ಭಾರತೀಯ ನೆಟ್ಟಿಗರು, ಭಾರತದಿಂದ ಬ್ರಿಟಿಷರು ಕದ್ದೊಯ್ದಿದ್ದಾರೆ ಎನ್ನಲಾದ ಕೊಹಿನೂರು ವಜ್ರವನ್ನು ಮರಳಿ ಭಾರತಕ್ಕೆ ಹಿಂದಿರುಗಿಸಬೇಕು ಎಂದು ರಾಣಿ ಎಲಿಜಬೆತ್ ಸಾವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದು, ಇದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಸೃಷ್ಟಿಸಿದೆ.
Rainbow at Buckingham Palace. pic.twitter.com/qHNJMcj5UH
— Andy Lines (@andylines)
ಬ್ರಿಟನ್‌ನ ಸಾಮಾಜ್ರ್ಯವನ್ನು ಅತೀ ದೀರ್ಘಾವಧಿಯ ಕಾಲ ಆಳಿದ ರಾಣಿ ಎಲಿಜಬೆತ್ II ರ ಮರಣವು ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವ ಬೇಡಿಕೆಯನ್ನು ಮತ್ತೆ ಜೀವಂತಗೊಳಿಸಿದೆ. 105.6 ಕ್ಯಾರೆಟ್‌ನ ಬೆಳಕಿನ ಪರ್ವತ ಎಂದೆನಿಸುವ ಜೊತೆಗೆ ವಿವಾದಕ್ಕೆ ಕಾರಣವಾಗಿದ್ದ ಈ ಕೊಹಿನೂರು ವಜ್ರ (Kohinoor diamond) ಬ್ರಿಟಿಷ್ ರಾಣಿಯ ಕಿರೀಟದಲ್ಲಿರುವ 2,800 ವಜ್ರಗಳಲ್ಲಿ (diamonds) ಒಂದಾಗಿದ್ದು, ಇದರ ಜೊತೆ ಬ್ರಿಟಿಷ್ ರಾಣಿಯ (British monarch)ಕಿರೀಟದಲ್ಲಿ ನೀಲಮಣಿಗಳು ಹಾಗೂ ಅತ್ಯಮೂಲ್ಯವಾದ ಕಲ್ಲುಗಳು ಸೇರಿದಂತೆ ಹಲವು ಅತ್ಯಮೂಲ್ಯವಾದ ಅಭರಣಗಳಿದ್ದು, 1937ರಲ್ಲಿ ವಿನ್ಯಾಸಗೊಳಿಸಲಾಗಿದೆ.
Just before The Queen's death was announced, a rainbow appeared at both Buckingham Palace and Windsor Castle. pic.twitter.com/Sw2WQldc1m
— Platinum Jubilee News (@Platinum2022)
ಈ ಐತಿಹಾಸಿಕ ಕಿರೀಟವೂ ಈಗ ಮುಂದಿನ ರಾಣಿ ಎನಿಸಿದ ಕ್ವೀನ್ ಕಮಿಲ್ಲಾಗೆ ಸೇರಲಿದೆ ಎಂದು ವರದಿ ಆಗಿದೆ. ಈ ಕಮಿಲ್ಲಾ(Queen Camilla), ರಾಣಿ ಎಲಿಜಬೆತ್ ಪುತ್ರ ಕಿಂಗ್ ಚಾರ್ಲ್ಸ್‌ನ (Charles III) ಪತ್ನಿಯಾಗಿದ್ದು, ಚಾರ್ಲ್ಸ್ ಜೊತೆ ಈಕೆಗೂ ಪಟ್ಟಾಭಿಷೇಕವಾಗುತ್ತದೆ.
Now can we get our back?
Reminder that Queen Elizabeth is not a remnant of colonial times. She was an active participant in colonialism. pic.twitter.com/v9ZimoCx3b
ಈ ಸಂದರ್ಭದಲ್ಲಿ ಅನೇಕ ಟ್ವಿಟ್ಟರ್ ಬಳಕೆದಾರು, ಈ ಕೊಹಿನೂರ್ ವಜ್ರದ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದ್ದು, ಇದನ್ನು ಭಾರತಕ್ಕೆ ಮರಳಿಸುವಂತೆ ಆಗ್ರಹಿಸುತ್ತಿದ್ದಾರೆ. ಇದೇ ವೇಳೆ ಇತರರು ಇದನ್ನು ಪುಕ್ಕಟೆ ಮನೋರಂಜನೆಯಾಗಿ ತೆಗೆದುಕೊಂಡಿದ್ದಾರೆ. ಬಾಲಿವುಡ್‌ನ (Bollywood film) ಧೂಮ್ 2 ಸಿನಿಮಾದಲ್ಲಿ ಹೃತಿಕ್ ರೋಷನ್, ಚಲಿಸುವ ರೈಲಿನಿಂದ ವಜ್ರವನ್ನು ಹಿಡಿಯುವ 'ಧೂಮ್ 2' ದೃಶ್ಯಕ್ಕೆ ಹೋಲಿಸಿಕೊಂಡು ಹೃತಿಕ್ ರೋಷನ್ (Hrithik Roshan) ಬ್ರಿಟಿಷ್ ಮ್ಯೂಸಿಯಂನಿಂದ (British Museum) ಕೊಹಿನೂರ್ ವಜ್ರವನ್ನು ತೆಗೆದುಕೊಂಡು ಭಾರತಕ್ಕೆ ಬರುತ್ತಿರುವುದು ಎಂದು ಬರೆದುಕೊಂಡು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇನ್ನೊಬ್ಬ ಬಳಕೆದಾರರು ರಾಣಿ ವಸಾಹತುಶಾಹಿಯಲ್ಲಿ ಆಳ್ವಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಈಗ ನಾವು ನಮ್ಮ ಕೊಹಿನೂರ್ ಅನ್ನು ಮರಳಿ ಪಡೆಯಬಹುದೇ? ಎಂದು ಪ್ರಶ್ನಿಸಿದ್ದಾರೆ.
Indians asking about kohinoor to Elizabeth be like: pic.twitter.com/M4PSuSslhe
— Savage2.0 (@Meme_Canteen)ಈ ವಜ್ರವನ್ನು 14 ನೇ ಶತಮಾನದಲ್ಲಿ ಭಾರತದ ಗೋಲ್ಕೊಂಡಾದ ಗಣಿಯಿಂದ (Golconda mine) ಶೋಧಿಸಲಾಗಿತ್ತು. ಮತ್ತು ಇದು ಶತಮಾನಗಳ ಅವಧಿಯಲ್ಲಿ ಹಲವು ಕೈಗಳಿಗೆ ಬದಲಾಗಿ ಭಾರತದಿಂದ ಬ್ರಿಟಿಷ್ ಸಾಮ್ರಾಜ್ಯ (British government) ತಲುಪಿತು. ಸರ್ಕಾರವು 1947 ರಲ್ಲಿ ಒಮ್ಮೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಕೊಹಿನೂರ್ ವಜ್ರದ ವಾಪಸಾತಿಗೆ ಒತ್ತಾಯಿಸಿದೆ. ಆದಾಗ್ಯೂ, ಬ್ರಿಟಿಷ್ ಸರ್ಕಾರ ಮಾತ್ರ ಈ ಬೇಡಿಕೆಯನ್ನು ನಿರಾಕರಿಸುತ್ತಲೇ ಬಂದಿದೆ.
Queen Elizabeth II Passes Away: 2.23 ಲಕ್ಷ ಕೋಟಿಯ ಸಂಪತ್ತಿಗೆ ಒಡತಿಯಾಗಿದ್ದ 2ನೇ ಕ್ವೀನ್ ಎಲಿಜಬೆತ್!
ಇತಿಹಾಸದ ಮೂಲಗಳು ಹೇಳುವಂತೆ ಈ ಕೊಹಿನೂರ್ ವಜ್ರವನ್ನು, ಆಂಗ್ಲೋ-ಸಿಖ್ ಯುದ್ಧದ ನಂತರ ಲಾಹೋರ್‌ನ ಮಹಾರಾಜರೊಂದಿಗೆ ಸಹಿ ಮಾಡಿದ ದಂಡನಾತ್ಮಕ ಒಪ್ಪಂದದ ಭಾಗವಾಗಿ 1849 ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು. ಆ ಸಮಯದಲ್ಲಿ ಈ ವಜ್ರದ ಹರಳು 186 ಕ್ಯಾರೆಟ್ ತೂಕವಿತ್ತು. 1847ರಲ್ಲಿ ಬ್ರಿಟನ್‌ಗೆ ವಜ್ರವನ್ನು ತಲುಪಿಸುವ ಸಲುವಾಗಿ ಕೇವಲ 10 ವರ್ಷದ ಪುಟ್ಟ ಬಾಲಕನಾಗಿದ್ದ ಮಹಾರಾಜ ದುಲೀಪ್ ಸಿಂಗ್ ಅವರನ್ನು ಅವರ ತಾಯಿಯಿಂದ ಬೇರ್ಪಡಿಸಿ ಬ್ರಿಟನ್‌ಗೆ ಕಳುಹಿಸಲಾಯಿತು ಎಂದು ಹೇಳುತ್ತದೆ ಇತಿಹಾಸ. ಅಂದಿನಿಂದ ಇಲ್ಲಿಯವರೆಗೆ ಈ ಕೊಹಿನೂರು ಬ್ರಿಟಿಷ್ ರಾಣಿಯ ಕಿರೀಟದಲ್ಲಿ ಕಂಗೊಳಿಸುತ್ತಿದೆ. ಅದಾಗ್ಯೂ ಈ ಕೊಹಿನೂರು ವಜ್ರದ ಮಾಲೀಕತ್ವದ ವಿಚಾರವಾಗಿ ಐದು ದೇಶಗಳ ನಡುವೆ ವಿವಾದವಿದೆ.