ಪಂಚಾಯತ್‌ನಲ್ಲಿ ಪಾರ್ಟ್‌ಟೈಂ ಕೆಲಸವಾಗಿ ಕಸ ಗುಡಿಸುತ್ತಿದ್ದ ಮಹಿಳೆ ಅದೇ ಆಫೀಸ್‌ನಲ್ಲಿ ಪಂಚಾಯತ್ ಪ್ರೆಸಿಡೆಂಟ್ ಆದ ಘಟನೆ ಕೇರಳದಲ್ಲಿ ನಡೆದಿದೆ. ಈಕೆಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿ ಓದಿ
ತಿರುವನಂತಪುರ(ಡಿ.31): ಸುಮಾರು 10 ವರ್ಷಗಳಿಂದ ಪಂಚಾಯತ್ ಕಚೇರಿಯಲ್ಲಿ ಮಹಡಿಗಳನ್ನು ಮತ್ತು ಧೂಳಿನಿಂದ ಕೂಡಿದ ಕುರ್ಚಿಗಳನ್ನು ಒರೆಸುತ್ತಿದ್ದ ಆನಂದವಲ್ಲಿ (46) ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯ ಪಥನಪುರಂನಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷರ ಕುರ್ಚಿಯಲ್ಲಿ ಕೂರುವ ತನಕ ತಲುಪಿದ್ದಾರೆ. ತಾನು ಧೂಳು ಒರೆಸಲು ಮಾತ್ರ ಮುಟ್ಟಿದ್ದ ಕುರ್ಚಿಯಲ್ಲಿ ಕೂರುವ ಮಟ್ಟಕ್ಕೆ ತಲುಪಿದ್ದಾರೆ ಈಕೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅವರು ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ.
ದಲಿತ ಮಹಿಳೆ ಸುಮಾರು ಒಂದು ದಶಕದಿಂದ ಅದೇ ಪಂಚಾಯತ್ ಕಚೇರಿಯಲ್ಲಿ ಅರೆಕಾಲಿಕ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು.
ಅಬಾರ್ಷನ್ ಕಾನೂನು ಬದ್ಧ..! ದಶಕದ ಹೋರಾಟಕ್ಕೆ ಜಯ
ನನ್ನ ಪಕ್ಷ ಮಾತ್ರ ಇಂತಹ ಕೆಲಸಗಳನ್ನು ಮಾಡಬಹುದು. ನಾನು ಅದಕ್ಕೆ ನಿಜವಾಗಿಯೂ ಋಣಿಯಾಗಿದ್ದೇನೆ. ಬ್ಲಾಕ್ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾದಾಗ ಭಾವುಕರಾವಗಿ ಕಣ್ಣೀರನ್ನು ನಿಯಂತ್ರಿಸುವ ವಿಫಲ ಪ್ರಯತ್ನ ಮಾಡಿದ್ದಾರೆ ಈಕೆ.
ಕಮ್ಯುನಿಸ್ಟ್ ಬೆಂಬಲಿಸುವ ಕುಟುಂಬದಿಂದ ಬಂದ ಈಕೆ ಶಾಲೆಯಿಂದ ಹೊರಗುಳಿದಿದ್ದರು. ವೃತ್ತಿಯಲ್ಲಿ ವರ್ಣಚಿತ್ರಕಾರರಾಗಿದ್ದ ಅವರ ಪತಿ ಸಹ ಸಕ್ರಿಯ ಸಿಪಿಐ (ಎಂ) ಕೆಲಸಗಾರ. ಅವರು 2011 ರಲ್ಲಿ ಅರೆಕಾಲಿಕ ಸ್ವೀಪರ್ ಆಗಿ ಸೇರಿಕೊಂಡರು. ಸಂಬಳ ತಿಂಗಳಿಗೆ 2,000 ರೂ., ಆದರೆ ಈಗ ಅವರು 6,000 ರೂ. ಹೊಸ ಹುದ್ದೆ ವಹಿಸಿಕೊಂಡ ನಂತರ, ಅವರು ತಾತ್ಕಾಲಿಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.