ಹೊಸ ತಳಿ ಕೊರೋನಾತಂಕದ ನಡುವೆಯೇ ಮತ್ತೊಂದು ಶಾಕ್ ಕೊಟ್ಟಿದೆ ಏಮ್ಸ್ ನಿರ್ದೇಶಕರ ಹೇಳಿಕೆ!

By Suvarna NewsFirst Published Dec 31, 2020, 11:39 AM IST
Highlights

ಕೊರೋನಾತಂಕ ನಡುವೆ ಶಾಕ್ ಕೊಟ್ಟಿದೆ ಏಮ್ಸ್ ನಿರ್ದೇಶಕರ ಹೇಳಿಕೆ| ಡಿಸೆಂಬರ್‌ ಅಲ್ಲ ಮೊದಲೇ ಭಾರತಕ್ಕೆ ಎಂಟ್ರಿ ಕೊಟ್ಟಿದೆ ಹೊಸ ತಳಿಯ ಕೊರೋನಾ?| 

ನವದೆಹಲಿ(ಡಿ.31): ಭಾರತದಲ್ಲಿ ಕೊರೋನಾ ಹೊಸ ಮಾದರಿ ಸೋಂಕು ತಗುಲಿದ ಸುಮಾರು ಇಪ್ಪತ್ತು ಪ್ರಕರಣಗಳು ದಾಖಲಾಗಿವೆ. ಇದನ್ನು ಆಧಾರವಾಗಿಟ್ಟುಕೊಂಡು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿಕೆಯೊಂದನ್ನು ನೀಡಿದ್ದು, ಇದು ಭಾರತೀಯರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಹೌದು ಭಾರತಕ್ಕೆ ಡಿಸೆಂಬರ್‌ಗೂ ಮೊದಲೇ ಹೊಸ ತಳಿಯ ಕೊರೋನಾ ಎಂಟ್ರಿ ಕೊಟ್ಟಿರಬಹುದು. ಉಯಾಕೆಂದರೆ ಬ್ರಿಟನ್‌ನಲ್ಲಿ ಈ ರೂಪಾಂತರಿ ವೈರಸ್ ಸಪ್ಟೆಂಬರ್‌ ತಿಂಗಳಲ್ಲೇ ಹಬ್ಬಿಕೊಳ್ಳಲಾರಂಭಿಸಿತ್ತು. ಹೀಗಿರುವಾಗ ಅಲ್ಲಿಂದ ಭಾರತಕ್ಕೆ ಮರಳಿದವರಲ್ಲಿ ಈ ಸೋಂಕು ಇರುವ ಸಾಧ್ಯತೆಗಳಿವೆ ಎಂದು ಗುಲೇರಿಯಾ ತಿಳಿಸಿದ್ದಾರೆ. ಈಗಾಗಲೇ ಹೊಸ ವೈರಸ್‌ನಿಂದ ಆತಂಕಕ್ಕೀಡಾಗಿರುವ ಮಂದಿಗೆ ಈ ವಿಚಾರ ಮತ್ತಷ್ಟು ಭೀತಿ ಹುಟ್ಟಿಸಿದೆ.

ಆದರೆ ಇದು ಕೇವಲ ಅನುಮಾನವಷ್ಟೇ ಆದರೆ ಡೇಟಾ ಇಲ್ಲದೇ ನಿಖರವಾಗಿ ಹೇಳುವುದು ಅಸಾಧ್ಯವೆಂದಿದ್ದಾರೆ.


 

click me!