ವಿದ್ಯಾರ್ಥಿನಿಯರಿಂದ ಕಾಫಿ ಮಾತ್ರೆ ಆವಿಷ್ಕಾರ; ಸೆಕೆಂಡ್‌ಗಳಲ್ಲಿ ಫಿಲ್ಟರ್ ಕಾಫಿ ರೆಡಿ!

By Suvarna NewsFirst Published Aug 14, 2021, 9:00 PM IST
Highlights
  • ಒಂದೇ ಸೆಕೆಂಡ್‌ನಲ್ಲಿ ಫಿಲ್ಟರ್ ಕಾಫಿ ರೆಡಿ ಮಾಡಲು ಇದೆ ದಾರಿ
  • ಕೇರಳ ವಿದ್ಯಾರ್ಥಿನಿಯರಿಂದ ಕಾಫಿ ಮಾತ್ರೆ ಆವಿಷ್ಕಾರ
  • ಹಾಲು ಅಥವಾ ನೀರಿಗೆ ಒಂದು ಮಾತ್ರೆ ಹಾಕಿದರೆ ಕಾಫಿ ರೆಡಿ

ಕೇರಳ(ಆ.14): ಒಂದು ಮಗ್‌ನಲ್ಲಿ ಹಾಲು, ಮತ್ತೊಂದರಲ್ಲಿ ಕಾಫಿ ಪುಡಿ, ಸ್ವಲ್ಪ ಸಕ್ಕರೆ ಸೇರಿಸಿ, ಈಗ ಮಿಕ್ಸ್ ಆರಂಭಿಸಿ, ಈ ಮಗ್‌ನಿಂದ ಆ ಮಗ್‌ಗೆ ಸವಿಯಿರಿ ಟೇಸ್ಟಿ ಕಾಫಿ...ಈಗ ನೀವು ಫಿಲ್ಟರ್ ಕಾಫಿ ಕುಡಿಯಲು ಇಷ್ಟೂ ಕಸರತ್ತು ಮಾಡಬೇಕಿಲ್ಲ. ಒಂದೇ ಸೆಕೆಂಡ್‌ನಲ್ಲಿ ನಿಮ್ಮಿಷ್ಟದ ಕಾಫಿ ಸವಿಯಲು ಕ್ಯಾಪ್ಶೂಲ್ ಕಾಫಿ ಮಾರುಕಟ್ಟೆಗೆ ಬಂದಿದೆ. ಕೇರಳ ವಿದ್ಯಾರ್ಥಿನಿಯರ ಹೊಸ ಆವಿಷ್ಕಾರ ಇದೀಗ ಭಾರತದಲ್ಲೇ ಸಂಚಲ ಸೃಷ್ಟಿಸಿದೆ.

ಬಟರ್ ಕಾಫಿ: ಏನಿದು, ಕಾಫಿ ಜೊತೆ ಬೆಣ್ಣೆ ಮಿಕ್ಸ್ ಮಾಡ್ತಾರಾ?

ಕೇರಳದ ಎರ್ನಾಕುಲಂನ ಸರ್ಕಾರಿ ಬಾಲಕಿಯರ ಶಾಲೆ ಹಾಗೂ ಪದವಿಪೂರ್ವಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರು ಈ ಫಿಲ್ಟರ್ ಕಾಫಿ ಮಾತ್ರೆ ಆವಿಷ್ಕರಿಸಿದ್ದಾರೆ. ಲಕ್ಷ್ಮಿ, ಎಲಿಶಾ ಏನೋರಿ ಕುಡುತೋಸ್, ಡಿಂಪಲ್ ಹಾಗೂ ಶಿವನಂದನ ಈ ಹೊಸ ಫಿಲ್ಟರ್ ಕಾಫಿ ಮಾತ್ರೆ ಹಿಂದಿನ ರೂವಾರಿಗಳು. ವಿಶೇಷ ಅಂದರೆ ಈ ಕಾಫಿ ಮಾತ್ರೆ ಸಂಪೂರ್ಣ ಆರ್ಗಾನಿಕ್. ಯಾವ ರಾಸಾಯನಿಕ ಮಿಶ್ರಣ ಇದಕ್ಕಿಲ್ಲ. ಹೊರಗೆ ಮರಗೆಣಸಿನ ಲೇಪನ, ಒಳಗೆ ಫಿಲ್ಟರ್ ಕಾಫಿ ಪುಡಿ. ಇದನ್ನು ಬಿಸಿ ನೀರಿಗೆ ಅಥವಾ ಹಾಲಿಗೆ ಹಾಕಿದರೆ ಕಾಫಿ ರೆಡಿ.

ಇಂಟರ್‌ನೆಟ್‌ನ ಹೊಸ ಫೆವರೆಟ್‌ ಡ್ರಿಂಕ್‌ - ಡಾಲ್ಗೊನಾ ಕಾಫಿ!

ಪ್ರಯಾಣದಲ್ಲಿ ಕಾಫಿ ಕುಡಿಯಲು ಇಚ್ಚಿಸುವ ಹಲವರಿಗೆ ನೂತನ ಫಿಲ್ಟರ್ ಕಾಫಿ ಕ್ಯಾಪ್ಶೂಲ್ ವರದಾನವಾಗಿದೆ. ಸಣ್ಣ ಸಣ್ಣ ಗುಳಿಗೆಯಾಗಿರುವುದರಿಂದ ಇದನ್ನು ಪ್ರಯಾಣದ ವೇಳೆ ತೆಗೆದುಕೊಂಡು ಹೋಗುವುದು ಸುಲಭ. ಪರ್ಸ್‌ನೊಳಗೆ, ಸಣ್ಣ ಬಾಟಲಿಯೊಳಗೆ, ಪ್ಯಾಕೆಟ್ ಒಳಗೆ ಇದನ್ನು ಇಟ್ಟುಕೊಳ್ಳಬಹುದು.

ಸ್ವಾದಿಷ್ಟ ಕಾಫಿ ಕುಡಿಯೋ ಮೂಲಕ ವೇಯಿಟ್ ಲಾಸ್ ಮಾಡ್ಬೋದು..!

 ಈ ಕಾಫಿ ಮಾತ್ರೆಗೆ 'ಕಾಪಿಫಿಲೆ' ಅನ್ನೋ ಹೆಸರಿಡಲಾಗಿದೆ. ನೂತನ ಕಾಫಿ ಮಾತ್ರೆ ಇದೀಗ ದೇಶದಲ್ಲಿ ಭಾರಿ ಸಂಚಲ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಫಿಲ್ಟರ್ ಮಾತ್ರೆ ಕಾಫಿಗೆ ಮನ್ನಣೆ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫಿಲ್ಟರ್ ಕಾಫಿ ಮಾತ್ರೆ ಹಾಗೂ ವಿದ್ಯಾರ್ಥಿನಿಯರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

click me!