ಇಂದೋರ್(ಆ.14): ದೇಶದಲ್ಲಿ ಮದುವೆಗೂ ಮುನ್ನ ದೈಹಿಂಕ ಸಂಬಂಧ ಬೆಳೆಸಿ ಮೋಸ ಹೋದ ಪ್ರಕರಣಗಳು ಹೆಚ್ಚಾಗಿದೆ. ಪ್ರತಿ ರಾಜ್ಯದಲ್ಲೂ ಈ ರೀತಿ ಹಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿವೆ. ಹೀಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿ ಮೋಸ ಮಾಡಿದ ಪ್ರಕರಣ ಕುರಿತು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
6 ತಿಂಗಳು ಪ್ರೇಯಸಿ ಮನೆಯಲ್ಲೇ ಉಳಿದು ಉಂಡು ಹೋದ.. ಕೊಂಡು ಹೋದ!
ಇದೀಗ ಮದುವೆಗೂ ಮುನ್ನ ಲೈಂಕಿಗ ಕ್ರಿಯೆಯಲ್ಲಿ ತೊಡಗುವ ಜೋಡಿಗಳಿಗೆ ಇದೀಗ ಮಧ್ಯಪ್ರದೇಶ ಹೈಕೋರ್ಟ್ ನೀಡಿದ ತೀರ್ಪು ಮಹತ್ವದ್ದಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಹುಡುಗಿ ತನಗೆ ಮದುವೆ ಭರವಸೆ ಸಿಕ್ಕ ಬಳಿಕ ಲೈಂಕಿಕ ಕ್ರಿಯೆಗೆ ಒಪ್ಪಿಕೊಂಡಿದ್ದಾಳೆ. ಆದರೆ ಬಳಿಕ ಮೋಸ ಹೋಗಿ ಅತ್ಯಾಚಾರ ಅಡಿಯಲ್ಲಿ ಕೇಸ್ ದಾಖಲಿಸಿದ ಹಲವು ಘಟನೆಗಳಿವೆ. ಇಂತಹ ಪ್ರಕರಣಗಳನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸುತ್ತದೆ ಎಂದಿದೆ.
ತನ್ನ ಖುಷಿಯಾಗಿ, ಕಾಮ ತೃಷೆಗಾಗಿ ಹೆಣ್ಣಿಗೆ ಮೋಸ ಮಾಡುವ ಹುಡುಗ ಮುಂದಿನ ಪರಿಣಾಮ ಎದುರಿಸಲು ಸಿದ್ದನಿರಬೇಕು. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಪರಾರಿಯಾಗುವ ಅಥವಾ ಕೈಕೊಟ್ಟ ಪ್ರಕರಣಗಳಲ್ಲಿ ಹುಡಗನಿಗ ಜಾಮೀನು ನೀಡಲು ಸಾಧ್ಯವಿಲ್ಲ ಎಂದಿದೆ.
ಕುಷ್ಟಗಿ: ಮದುವೆ ಆಗೋದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ
ಮಧ್ಯ ಪ್ರದೇಶದ ಹಿಂದೂ ಯುವತಿ ಮುಸ್ಲಿಂ ಹುಡುಗನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಮದುವೆಯಾಗುವುದಾಗಿ ನಂಬಿಸಿದ ಯುವಕ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಬಳಿಕ ಮದುವೆಯಾಗದೆ ಮೋಸ ಮಾಡಿದ್ದ. ಪ್ರಕರಣ ದಾಖಲಿಸಿದ ಹಿಂದೂ ಯುವತಿಗೆ ವಿಳಂಬವಾಗಿ ಸತ್ಯ ತಿಳಿದಿದೆ. ತನ್ನ ಪ್ರೀತಿಸಿದ ಮುಸ್ಲಿಂ ಯುವಕನಿಗೆ ಈಗಾಗಲೇ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಯುವತಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಳು.
ಮೈಸೂರು: ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೇಲೆ ರೇಪ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್..!
ಈ ಯುವತಿ ಅರ್ಜಿ ವಿಚಾರಣೆ ವೇಳೆ ಜಸ್ಟೀಸ್ ಸುಬೋಯದ ಅಭ್ಯಂಕರ್, ಮದುವೆ ಭರವಸೆ ಮೇಲೆ ನಡೆಯುವ ದೈಹಿಕ ಸಂಪರ್ಕಕ್ಕ ಎಚ್ಚರಿಕೆ ನೀಡಿದ್ದಾರೆ. ಯುವತಿ ಅಪ್ರಾಪ್ತೆಯಾಗಿರಲಿಲ್ಲ. ಹೀಗಾಗಿ ತನ್ನ ಭವಿಷ್ಯದ ಕುರಿತು ಯುವತಿಗೂ ಹೆಚ್ಚಿನ ಅರಿವಿದೆ. ಹುಡುಗ ಕೂಡ ನಂಬಿಸಿ ಮೋಸ ಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.