ಸ್ವಾದಿಷ್ಟ ಕಾಫಿ ಕುಡಿಯೋ ಮೂಲಕ ವೇಯಿಟ್ ಲಾಸ್ ಮಾಡ್ಬೋದು..!
ಬಹಳಷ್ಟು ಜನ ಸ್ವಾದಿಷ್ಟ ಕಾಫಿ ಪ್ರಿಯರು. ಬೆಳಗಿನ ಜಾವ ಬೈಟು ಕಾಫಿ ಸಿಕ್ಕಿದ್ರೆ ಎಷ್ಟೊಂದು ಆಹ್ಲಾದ ಅಲ್ವಾ..? ಅದೇ ಕಾಫಿಯಿಂದ ನೀವು ವೇಯಿಟ್ ಲಾಸ್ ಕೂಡಾ ಮಾಡ್ಕೋಬೋದು. ಹೇಗೆ..? ಇಲ್ಲಿ ನೋಡಿ
ಬಹಳಷ್ಟು ಜನ ಸ್ವಾದಿಷ್ಟ ಕಾಫಿ ಪ್ರಿಯರು. ಬೆಳಗಿನ ಜಾವ ಬೈಟು ಕಾಫಿ ಸಿಕ್ಕಿದ್ರೆ ಎಷ್ಟೊಂದು ಆಹ್ಲಾದ ಅಲ್ವಾ..? ಅದೇ ಕಾಫಿಯಿಂದ ನೀವು ವೇಯಿಟ್ ಲಾಸ್ ಕೂಡಾ ಮಾಡ್ಕೋಬೋದು.
ದಿನಕ್ಕೆ 2 ರಿಂದ 3 ಕಪ್ ಕಾಫಿ ಕುಡಿಯುವುದರಿಂದ ಮಹಿಳೆಯರಲ್ಲಿ ದೇಹದಲ್ಲಿ ವಿಶೇಷವಾಗಿ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ.
ದಪ್ಪಗಾಗುವ ಫ್ಯಾಟ್ ವಿರೋಧಿ ಅಂಶಗಳು ಕಾಫಿಯಲ್ಲಿ ಅಡಕವಾಗಿದೆ ಎಂಬುದು ಅಧ್ಯಯನದಲ್ಲಿ ತಿಳಿದಿದೆ. ಇವು ಕ್ರಮೇಣ ತೂಕವನ್ನು ಕಡಿಮೆಯಾಗಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.
ಸಂಶೋಧನೆಯ ಪ್ರಕಾರ ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಕುಡಿದ ಎಲ್ಲ ವಯಸ್ಸಿನ ಮಹಿಳೆಯರಲ್ಲಿ ಶೇಕಡ 2.8ರಷ್ಟು ಕೊಬ್ಬಿನಂಶ ಕಡಿಮೆಯಾಗಿದೆ.
ಇದು ಪುರುಷರಲ್ಲಿ ಅಷ್ಟು ಒಳ್ಳೆಉ ಫಲಿತಾಂಶ ಕೊಟ್ಟಿಲ್ಲ. ಆದರೂ ದಿನಕ್ಕೆ ಎರಡು ಅಥವಾ ಮೂರು ಕಪ್ ಕುಡಿದ 20-44 ವರ್ಷ ವಯಸ್ಸಿನ ಪುರುಷರ ದೇಹದ ಫ್ಯಾಟ್ ಶೇಕಡ1.3 ಕಡಿಮೆ ಎಂದು ದಿ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ವರದಿ ತಿಳಿಸಿದೆ.
ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಕುಡಿದ 20-44 ವರ್ಷ ವಯಸ್ಸಿನ ಮಹಿಳೆಯರಯಲ್ಲಿ ಅಡಿಪೋಸಿಟಿ ಕಡಿಮೆ ಇದೆ. ಕಾಫಿ ಸೇವಿಸದ ಮಹಿಳೆಯರಿಗಿಂತ ಶೇಕಡ 3.4ರಷ್ಟು ಕಡಿಮೆ ಇದೆ.
ತೂಕವನ್ನು ನಿಯಂತ್ರಿಸುವ ಕೆಫೀನ್ ಮಾತ್ರವಲ್ಲದೆ ಕಾಫಿಯಲ್ಲಿ ಜೈವಿಕ ಸಂಯುಕ್ತಗಳು ಇರಬಹುದು ಎನ್ನುತ್ತೆ ಸಂಶೋಧನೆ. ಇದನ್ನು ಫ್ಯಾಟ್ ವಿರೋಧಿ ಸಂಯುಕ್ತಗಳಾಗಿ ಬಳಸಬಹುದು ಅಧ್ಯಯನ ಸೂಚಿಸಿದೆ.
45 ರಿಂದ 69 ವಯಸ್ಸಿನ ಮಹಿಳೆಯರಲ್ಲಿ ದಿನಕ್ಕೆ ನಾಲ್ಕು ಅಥವಾ ಹೆಚ್ಚು ಕಪ್ ಕಾಫಿಕುಡಿದವರಲ್ಲಿ ಅಡಿಪೋಸಿಟಿ ಶೇಕಡಾ 4.1ರಷ್ಟು ಕಡಿಮೆ ಇತ್ತು.
ಬೊಜ್ಜು ಸಂಬಂಧಿಸಿದ ತೂಕದ ಸಮಸ್ಯೆಗೆ ಕಾಫಿ ಬಳಸಬಹುದು.
ಕಾಫಿಯಲ್ಲಿ ನೈಸರ್ಗಿಕವಾಗಿ ಕೆಫೀನ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಡೈಟರ್ಪೆನ್‌ಗಳು ಸೇರಿದಂತೆ ವಿವಿಧ ಅಂಶವಿದೆ. ಇವು ಆಹ್ಲಾದಕರ ಪರಿಮಳದ ಜೊತೆ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ.