ವಯನಾಡು ಮರಣ ಮೃದಂಗ: ಜವರಾಯನ ವಾಹನದಂತೆ ಕಂಡ ಸಾಲು ಸಾಲು ಆಂಬುಲೆನ್ಸ್‌ಗಳು

By Anusha KbFirst Published Aug 1, 2024, 1:44 PM IST
Highlights

ವಯನಾಡಿನಲ್ಲಿ ಪ್ರವಾಹಕ್ಕೆ ಬಲಿಯಾದವರ ಶವಗಳನ್ನು ಸಾಗಿಸುವ ಆಂಬುಲೆನ್ಸಗಳು ಒಂದಾದ ಮೇಲೊಂದರಂತೆ ಸಾಲು ಸಾಲಾಗಿ ಆಗಮಿಸಿದ್ದು, ಜವರಾಯನ ವಾಹನದಂತೆ ಗೋಚರಿಸಿದೆ. 

ವಯನಾಡಿನಲ್ಲಿ ಪ್ರವಾಹಕ್ಕೆ ಬಲಿಯಾದವರ ಶವಗಳನ್ನು ಸಾಗಿಸುವ ಆಂಬುಲೆನ್ಸಗಳು ಒಂದಾದ ಮೇಲೊಂದರಂತೆ ಸಾಲು ಸಾಲಾಗಿ ಆಗಮಿಸಿದ್ದು, ಜವರಾಯನ ವಾಹನದಂತೆ ಗೋಚರಿಸಿದೆ. ಒಂದಾದ ಮೇಲೊಂದರಂತೆ 10ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಈ ಪ್ರವಾಹ ದುರಂತದಲ್ಲಿ ಮಡಿದವರ ಶವ ಹೊತ್ತು ಸಾಗಿ ಹೋಗಿದ್ದು, ರಸ್ತೆ ಬದಿ ಜನ ಈ ವಾಹನಗಳನ್ನು ನೋಡುತ್ತಾ ಭಾವುಕರಾಗಿದ್ದು ಕಂಡು ಬಂತು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಮನಸ್ಸನ್ನು ಭಾರಗೊಳಿಸಿದೆ.

ಜುಲೈ 30 ರಂದು ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರಾದವರ ಸಂಖ್ಯೆ 276ಕ್ಕೆ ಏರಿಕೆ ಆಗಿದೆ. ಹಾಗೆಯೇ ಪ್ರವಾಹದ ನಂತರ ನಾಪತ್ತೆಯಾದ 191 ಜನ ಇನ್ನು ಪತ್ತೆಯಾಗಿಲ್ಲ. ಬದುಕುಳಿದವರ ರಕ್ಷಣೆಗಾಗಿ ಕಳೆದ 48 ಗಂಟೆಗಳಿಂದ ಸೇನೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್ ತಂಡಗಳು ಶ್ರಮಿಸುತ್ತಿದ್ದು, ಪತ್ತೆಯಾದ ಶವಗಳನ್ನು ಆಂಬುಲೆನ್ಸ್‌ಗೆ ತುಂಬಿಸಿ ಕಳುಹಿಸುತ್ತಿದ್ದಾರೆ. ಈ ಪ್ರವಾಹ ಪೀಡಿತ ಪ್ರದೇಶದಿಂದ ಮೃತದೇಹಗಳನ್ನು ಹೊತ್ತು ಸಾಲು ಸಾಲಾಗಿ ಸಾಗುತ್ತಿರುವ ಆಂಬುಲೆನ್ಸ್‌ಗಳ ದೃಶ್ಯವೊಂದು ಈಗ ವೈರಲ್ ಆಗಿದ್ದು, ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. 

Latest Videos

ನಿಜವಾಯ್ತು ಮಾನಸಿಕ ಅಸ್ವಸ್ಥನ ಭೂಕುಸಿತ ದುರಂತ ಭವಿಷ್ಯ, ವರ್ಷಗಳ ಹಿಂದಿನ ವಿಡಿಯೋ ವೈರಲ್!

ಘಟನಾ ಸ್ಥಳದಲ್ಲಿ ಗಾಯಾಳುಗಳಿಗೆ ವೈದ್ಯಕೀಯ ನೆರವಿಗೆ ವೈದ್ಯಕೀಯ ತಂಡ ಬೀಡುಬಿಟ್ಟಿದ್ದು, ಬದುಕುಳಿದವರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತಿದೆ. ಹಾಗೂ ಹಲವು ತಂಡಗಳು ಈ ಅವಘಡದಲ್ಲಿ ಪ್ರಾಣ ಕಳೆದುಕೊಂಡವರ ಶವಗಳನ್ನು ಶವಾಗಾರಕ್ಕೆ ತಲುಪಿಸಲು ನೆರವಾಗುತ್ತಿದ್ದಾರೆ. ರಸ್ತೆಗಳಲ್ಲಿ ಸಾಲುಗಟ್ಟಿ ನಿಂತು ಜನ ಈ ದುರಂತವನ್ನು ಮೂಖರಂತೆ ನೋಡುತ್ತಿದ್ದಾರೆ. ಅಲ್ಲದೇ ಮತ್ತೊಂದು ವಿಡಿಯೋದಲ್ಲಿ ನೀರು ತುಂಬಿದ ರಸ್ತೆಯಲ್ಲಿ ಆಂಬುಲೆನ್ಸ್‌ ಒಂದು ನಿಂತಾಗ ರಸ್ತೆ ಬದಿ ನಿಂತ ಜನರು ಓಡಿಹೋಗಿ ಅದು ಮುಂದೆ ಸಾಗಲು ಸಹಾಯ ಮಾಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಜನರ ಒಗಟ್ಟು ಕೂಡ ಇಲ್ಲಿ ಗಮನ ಸೆಳೆಯುತ್ತಿದೆ. ಆದರೆ ಕಾಲದ ಮುಂದೆ ಎಲ್ಲವೂ ಕ್ಷಣಿಕ, ಬಡವ, ಶ್ರೀಮಂತ, ಹಿಂದೂ,  ಮುಸ್ಲಿಂ, ಕ್ರಿಶ್ಚಿಯನ್ ಎಂಬ ಯಾವುದೇ ಬೇಧ ಮಾಡದೇ ಪ್ರಕೃತಿ ಇಲ್ಲಿ ಎಲ್ಲರನ್ನು ಒಟ್ಟೊಟ್ಟಿಗೆ ತನ್ನ ಭೂಗರ್ಭದೊಳಗೆ ಸೇರಿಸಿದೆ. 

ವಯನಾಡು ಭೀಕರ ಭೂಕುಸಿತ ದುರಂತ: ಮೃತರ ಸಂಖ್ಯೆ 270ಕ್ಕೇರಿಕೆ, 200ಕ್ಕೂ ಹೆಚ್ಚು ಮಂದಿ ನಾಪತ್ತೆ..!

ಸೇನೆ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಇದುವರೆಗೆ 1500 ಜನರನ್ನು ಸ್ಥಳದಿಂದ ರಕ್ಷಿಸಲಾಗಿದೆ. ಆದರೆ 191  ಜನ ಮಾತ್ರ ಇನ್ನು ಪತ್ತೆಯಾಗಿಲ್ಲ, ಘಟನೆಯ ಬಳಿಕ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಇಂದು ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಎಲ್ಲಾ ಪಕ್ಷಗಳ ಶಾಸಕರು ಜಿಲ್ಲಾಡಳಿತ ಸಚಿವರನ್ನು ಒಟ್ಟುಗೂಡಿಸಿ ಪರಿಹಾರ ಕಾರ್ಯಗಳಿಗೆ ಸಂಘಟಿಸಲು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ. 

Wayanad landslide rescue ambulance | Thirai Suvadu

pic.twitter.com/jFI5Wy207k

— Thirai Suvadu (@Thiraisuvadu)

 

click me!