ನಿಜವಾಯ್ತು ಮಾನಸಿಕ ಅಸ್ವಸ್ಥನ ಭೂಕುಸಿತ ದುರಂತ ಭವಿಷ್ಯ, ವರ್ಷದ ಹಿಂದಿನ ವಿಡಿಯೋ ವೈರಲ್!

Published : Aug 01, 2024, 01:39 PM ISTUpdated : Aug 01, 2024, 01:44 PM IST
ನಿಜವಾಯ್ತು ಮಾನಸಿಕ ಅಸ್ವಸ್ಥನ ಭೂಕುಸಿತ ದುರಂತ ಭವಿಷ್ಯ, ವರ್ಷದ ಹಿಂದಿನ ವಿಡಿಯೋ ವೈರಲ್!

ಸಾರಾಂಶ

ವಯನಾಡು ಭೂಕುಸಿತ, ಸಾವು ನೋವಿನ ಕುರಿತು ಕೆಲ ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥ ನುಡಿದಿದ್ದ ಭವಿಷ್ಯ ನಿಜವಾಗಿದೆ. ಇಂದಿನ ಪರಿಸ್ಥಿತಿಯನ್ನು ನಿಖರವಾಗಿ ಸೂಚಿಸಿದ್ದ ಈತ, ಇಂದಿನ ಭಯಾನಕ ಚಿತ್ರಣವನ್ನು ಒಂದು ಬಾರಿ ಅಳುತ್ತಾ, ಮತ್ತೊಮ್ಮೆ ನಗುತ್ತಾ ಹೇಳಿದ್ದ. ಅಂದು ಈತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಈ ಹಳೇ ವಿಡಿಯೋ ವೈರಲ್ ಆಗುತ್ತಿದೆ.

ವಯನಾಡ್(ಆ.01) ಕೇರಳದ ಭೂಕುಸಿತ ದುರಂತದ ಭೀಕರತೆ ಪ್ರತಿಯೊಬ್ಬರ ಆತಂಕ ಹೆಚ್ಚಿಸಿದೆ. ಈ ದುರಂತದಲ್ಲಿ ಮಡಿವರ ಸಂಖ್ಯೆ 200 ದಾಟಿದೆ. 200ಕ್ಕೂ ಹಚ್ಚು ಮಂದೆ ನಾಪತ್ತೆಯಾಗಿದ್ದಾರೆ. ಕಂದಮ್ಮಗಳು, ಮಕ್ಕಳು, ಮಹಿಳೆಯರು ಸೇರಿ ರಾಶಿ ರಾಶಿ ಶವಗಳು ಕೆಸರಿನಡಿ ಹೂತು ಹೋಗಿವೆ. ಕೆಲ ಮೃತದೇಹಗಳು ನದಿಯಲ್ಲಿ ತೇಲಿ ಹೋಗುತ್ತಿದೆ. ಈ ಭಯಾನಕ ದುರಂತದ ಕುರಿತು ಕೆಲ ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥನೊಬ್ಬ ಭವಿಷ್ಯ ನುಡಿದಿದ್ದ. ಸದ್ಯದ ಪರಿಸ್ಥಿತಿಯನ್ನು ನಿಖರವಾಗಿ ಊಹಿಸಿದ್ದ. ಆದರೆ ಈತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಷ್ಟೇ ಅಲ್ಲ ಈ ಕುರಿತು ವಿಡಿಯೋ ಕೂಡ ವೀಕ್ಷಣೆ ಕಾಣದೆ ಸೊರಗಿತ್ತು. ಆದರೆ ವಯನಾಡ್ ದುರಂತದ ಬೆನ್ನಲ್ಲೇ ಈ ವಿಡಿಯೋ ಸದ್ದು ಮಾಡುತ್ತಿದೆ. 

ಕೇರಳ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹ ದುರಂತ ಚಿತ್ರಣಗಳು ತೀವ್ರ ನೋವು ತರುತ್ತಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಪ್ರತಿಯೊಂದು ಪರಿಸ್ಥಿತಿಯನ್ನು ಈ ಮಾನಸಿಕ ಅಸ್ವಸ್ಥ ಭವಿಷ್ಯ ನುಡಿದಿದ್ದ. ನಗುತ್ತಾ, ಅಳುತ್ತಾ ಭೀಕರತೆಯ ಚಿತ್ರವಣನ್ನು ತೆರೆದಿಟ್ಟು ಎಚ್ಚರಿಸಿದ್ದ. ಈ ಮಾನಸಿಕ ಅಸ್ವಸ್ಥ ಹೇಳಿದ ಭವಿಷ್ಯ ಇಲ್ಲಿದೆ.

ಕಣ್ಣಮುಂದೆ ಹೆಂಡ್ತಿ, ಮೊಮ್ಮಗ ಕೊಚ್ಚಿಕೊಂಡು ಹೋಗ್ತಿದ್ದರೂ ರಕ್ಷಿಸೋಕೆ ಆಗಲಿಲ್ಲ; ವಯನಾಡ್‌ನಲ್ಲಿ ಕನ್ನಡಿಗನ ಅಳಲು

ಯಾರಿಗೂ ಸಮಯವೇ ಇಲ್ಲ, ಎಲ್ಲರೂ ಹಣ ಮಾಡುವುದರಲ್ಲಿ ಬ್ಯೂಸಿಯಾಗಿದ್ದಾರೆ. ಕಂತೆ ಕಂತೆ ಹಣ ಮಾಡಿ ಈ ರೀತಿ ದೊಡ್ಡ ಅರಮನೆ ರೀತಿಯ ಕಟ್ಟಡ ಕಟ್ಟುತ್ತಿದ್ದಾರೆ. ಬಳಿಕ ಆ ಕಟ್ಟಡದೊಳಗೆ ಈ ನೋಟುಗಳ ಕಂತೆ ಭದ್ರಪಡಿಸುತ್ತಿದ್ದಾರೆ. ಆದರೆ ನೆನಪಿಟ್ಟುಕೊಳ್ಳಿ, ಆ ಕಟ್ಟು ಒಡೆದರೆ ನೀರು, ಮಣ್ಣು, ಕಲ್ಲು ಪ್ರವಾಹ ರೀತಿಯಲ್ಲಿ ಬರುತ್ತದೆ.ಅದು ಮರಣದ ಓಟವಾಗಿರುತ್ತದೆ. ಈ ಮೃತ್ಯವಿನ ಓಟಕ್ಕೆ ಎಲ್ಲವೂ ನಶಿಸುತ್ತದೆ. ನೀವು, ನಿಮ್ಮ ಕುಟುಂಬ, ಗ್ರಾಮದವರರು ಎಲ್ಲವೂ ಸಂಪೂರ್ಣವಾಗಿ ನಶಿಸುತ್ತದೆ.  

ನೀನು ಈವರೆಗೆ ಸಂಪಾದಿಸಿದ ಎಲ್ಲಾ ಆಸ್ತಿ, ಸಂಪತ್ತುಗಳು ಪ್ರವಾಹದ ನೀರು, ಮಣ್ಣಿನಡಿ ಹೋಗಲಿದೆ. ಕೆಸರಿನಲ್ಲಿ ಎಲ್ಲವೂ ಹೂತು ಹೋಗಲಿದೆ. ಅದಕ್ಕೂ ಮುನ್ನ ಈ ದುರಂತವನ್ನು ತಡೆಯಲು ನೋಡಿ, ಏನಾದರು ಪ್ರಯತ್ನ ಮಾಡಿ. ಹಿಂದೂ, ಮುಸ್ಲಿಂ, ಕ್ರಿಶ್ಟಿಯನ್ ಎಲ್ಲರು ಸಾಯುತ್ತಾರೆ. ಬಡವ, ಶ್ರೀಮಂತ ಎಲ್ಲರು ಸಾಯುತ್ತಾರೆ. ಹೋಗಿ ತಡೆಯಿರಿ, ಇಲ್ಲದಿದ್ದರೆ ಒಂದು ದಿನ ನೀರಿನಲ್ಲಿ ಲಕ್ಷಕ್ಕೂ ಹೆಚ್ಚು ಜನರ ಮೃತದೇಹ ನೀರಿನಲ್ಲಿ ತೇಲುತ್ತದೆ. ಹಲವರ ಕೆಸರು ಮಣ್ಣಿನಡಿಯಲ್ಲಿ ಮೌನವಾಗುತ್ತಾರೆ. ಯಾರಿಗೂ ಟೈಂ ಇಲ್ಲ, ಸಾಧ್ಯವಾದರೆ ಹೋಗಿ ತಡೆಯಿರಿ ಎಂದು ಈ ಮಾನಸಿಕ ಅಸ್ವಸ್ಥ ಹೇಳಿದ್ದಾನೆ.

wayanad landslide: ಯಾರಾದರೂ ಬಂದು ನಮ್ಮನ್ನು ಕಾಪಾಡಿ....! ಸಂಬಂಧಿಕರಿಗೆ ಕರೆ ಮಾಡಿ ಮಹಿಳೆಯ ಆರ್ತನಾದ

ಈತ ಹೇಳಿಕ ಪ್ರತಿಯೊಂದು ಮಾತುಗಳು ಅಕ್ಷರಶಃ ನಿಜವಾಗಿದೆ. ಹಚ್ಚ ಹಸಿರು, ಬೆಟ್ಟ ಗುಡ್ಡಗಳಿಂದ ಕೂಡಿದ ಸುಂದರ ವಯಾನಡು ಇದೀಗ ನರಕ ಸದೃಶ್ಯವಾಗಿದೆ. ಎಲ್ಲೆಡೆ ಮೃತದೇಹಗಳು ಸಿಗುತ್ತಿದೆ. ಶವಗಳ ರಾಶಿ ನದಿಯಲ್ಲಿ ತೇಲುತ್ತಿದೆ. ಹಳೇ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಹಲವು ಎಚ್ಚರಿಕೆ ಕರೆಗಂಟೆಗಳನ್ನು ಮನುಷ್ಯನ ನಿರ್ಲಕ್ಷಿಸುತ್ತಿದ್ದಾನೆ ಎಂದು ಇದೀಗ ಭಾರಿ ಚರ್ಚೆಯಾಗುತ್ತಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ