
ನವದೆಹಲಿ(ಮಾ.25): ಕಾಶ್ಮೀರಿ ಪಂಡಿತ್ ಸಂಘಟನೆಯು 1990 ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಗಳ ತನಿಖೆಯನ್ನು ಕೋರಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದೆ. ಈ ಅರ್ಜಿಯಲ್ಲಿ 'ಯಾಸಿನ್ ಮಲಿಕ್, ಫಾರೂಕ್ ಅಹ್ಮದ್ ದಾರ್ (ಬಿಟ್ಟಾ ಕರಾಟೆ) ಅವರಂತಹ ಭಯೋತ್ಪಾದಕರ ವಿರುದ್ಧ ತನಿಖೆ ಮತ್ತು ಕಾನೂನು ಕ್ರಮ ಜರುಗಿಸಬೇಕು' ಎಂದು ಒತ್ತಾಯಿಸಿದೆ.
1990 ರ ದಶಕದಲ್ಲಿ ಕಣಿವೆಯಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಗಳ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುವಂತೆ ಕೋರಿ 'ರೂಟ್ಸ್ ಇನ್ ಕಾಶ್ಮೀರ' ಎಂಬ ಕಾಶ್ಮೀರಿ ಪಂಡಿತ್ ಸಂಘಟನೆ ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದೆ. ಲೈವ್‌ಲಾ ಪ್ರಕಾರ, 2017 ರ ತೀರ್ಪಿನ ವಿರುದ್ಧ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಲಾಗಿದೆ, ಇದು ತನಿಖೆಗೆ 'ದೀರ್ಘ ವಿಳಂಬ'ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಿತ್ತು.
The Kashmir Files ಚಿತ್ರ ಎಲ್ರೂ ನೋಡಿ: ಬಾಲಿವುಡ್ ನಟ ಅಮೀರ್ ಖಾನ್
ಆಗಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ (JS Khehar) ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ (DY Chandrachud) ಅವರನ್ನೊಳಗೊಂಡ ಪೀಠವು 'ಪ್ರಕರಣ ನಡೆದು 27 ವರ್ಷಗಳ ನಂತರ ಯಾವುದೇ ಪುರಾವೆಗಳು ಲಭ್ಯವಾಗುವುದಿಲ್ಲ. ಸಂಭವಿಸಿರುವುದು ಹೃದಯ ವಿದ್ರಾವಕವಾಗಿದೆ ಆದರೆ ನಾವು ಈಗ ಆದೇಶಗಳನ್ನು ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ ಅರ್ಜಿ ವಜಾಗೊಳಿಸಿತ್ತು. ಎಂದು ಲೈವ್ ಲಾ ವರದಿ ಮಾಡಿದೆ.
ವೆಬ್‌ಸೈಟ್ ಪ್ರಕಾರ, ಈಗ ಕಾಶ್ಮೀರಿ ಪಂಡಿತರ ಸಂಘಟನೆ ಸಲ್ಲಿಸಿದ ಹೊಸ ಮನವಿಯು ಮೂಲ ಅರ್ಜಿಯ ಬೇಡಿಕೆಗಳನ್ನು ಪುನರುಚ್ಚರಿಸಿದೆ.
1989-90, 1997 ಮತ್ತು 1998ರ ಅವಧಿಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದಂತೆ ಯಾಸಿನ್ ಮಲಿಕ್ (Yasin Malik), ಫಾರೂಕ್ ಅಹ್ಮದ್ ದಾರ್ (Farooq Ahmed Dar) (ಬಿಟ್ಟಾ ಕರಾಟೆ) ಮತ್ತು ಜಾವೇದ್ ನಲ್ಕಾ (Javed Nalka) ಅವರಂತಹ ಭಯೋತ್ಪಾದಕರ ತನಿಖೆ ಮತ್ತು ಕಾನೂನು ಕ್ರಮಕ್ಕೆ ಅದು ಕರೆ ನೀಡಿದೆ ಮತ್ತು 26 ವರ್ಷಗಳ ನಂತರವೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೂಡ ಆ ಬಗ್ಗೆ ತನಿಖೆ ನಡೆಸದೆ ಸುಮ್ಮನಾಗಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತಾಗಿ CBI, NIA ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ!
25 ಜನವರಿ 1990 ರಂದು ಭಾರತೀಯ ವಾಯುಪಡೆಯ ನಾಲ್ವರು IAF ಅಧಿಕಾರಿಗಳ ಹತ್ಯೆಗೆ ಸಂಬಂಧಿಸಿದಂತೆ ಭಯೋತ್ಪಾದಕ ಯಾಸಿನ್ ಮಲಿಕ್ ವಿಚಾರಣೆ ಮತ್ತು ಆತನ ವಿರುದ್ಧ ಕಾನೂನು ಕ್ರಮವನ್ನು ಪೂರ್ಣಗೊಳಿಸುವುದರ ಬಗ್ಗೆಯೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಈ ಪ್ರಕರಣವು ಸಿಬಿಐ (CBI) ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ.
1989, 1990, 1997 ಮತ್ತು 1998 ರಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ಎಲ್ಲಾ ಕೊಲೆಗಳು ಮತ್ತು ಇತರ ಸಂಬಂಧಿತ ಅಪರಾಧಗಳ ತನಿಖೆಯನ್ನು CBI ಅಥವಾ ರಾಷ್ಟ್ರೀಯ ತನಿಖಾ ದಳ ಅಥವಾ ಸುಪ್ರೀಂಕೋರ್ಟ್ (SC) ನೇಮಿಸಿದ ಯಾವುದೇ ಇತರ ಏಜೆನ್ಸಿಗೆ ವರ್ಗಾಯಿಸುವುದು. ಜಮ್ಮು ಮತ್ತು ಕಾಶ್ಮೀರದಿಂದ ಇತರ ಕೆಲವು ಪ್ರದೇಶಗಳಿಗೆ ಅಥವಾ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಪ್ರಕರಣಗಳನ್ನು ವರ್ಗಾಯಿಸುವುದು. ಇದರಿಂದ ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳ ಮುಂದೆ ಸಾಕ್ಷಿಗಳಿಗೆ ಸುರಕ್ಷಿತ ಭಾವ ಮೂಡುತ್ತದೆ. 1989-90 ಮತ್ತು ನಂತರದ ವರ್ಷಗಳಲ್ಲಿ ಕಾಶ್ಮೀರಿ ಪಂಡಿತರ ಸಾಮೂಹಿಕ ಹತ್ಯೆಯ ತನಿಖೆಗೆ ಸ್ವತಂತ್ರ ಆಯೋಗದ ನೇಮಕ ಮಾಡಬೇಕು.
ದೀರ್ಘ ವಿಳಂಬದ ಏಕೈಕ ಆಧಾರದ ಮೇಲೆ ತನಿಖೆಯ ಮನವಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್‌ನ 2017 ರ ನಿರ್ಧಾರವು 'ದಾಖಲೆಯಲ್ಲಿ ಸ್ಪಷ್ಟವಾದ ದೋಷವಾಗಿದೆ' ಎಂದು ಅರ್ಜಿದಾರರು ಹೇಳಿದ್ದಾರೆ ಎಂಬುದಾಗಿ ಲೈವ್ ಲಾ ವರದಿ ಮಾಡಿದೆ. ಕೆಲವು ಸಂತ್ರಸ್ತ ಕುಟುಂಬಗಳು ಸುರಕ್ಷತೆಯ ದೃಷ್ಟಿಯಿಂದ ಪ್ರಕರಣಗಳನ್ನು ಮುಂದುವರಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಬಾರ್ ಮತ್ತು ಬೆಂಚ್ ಪ್ರಕಾರ, ಕ್ಯುರೇಟಿವ್ ಅರ್ಜಿಯು (curative petition) ಕುಂದುಕೊರತೆಗಳ ಪರಿಹಾರಕ್ಕಾಗಿ ಲಭ್ಯವಿರುವ ಕೊನೆಯ ನ್ಯಾಯಾಂಗದ ಅವಕಾಶ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ