ಲಂಡನ್(ಮಾ.25): ಕನ್ನಡಿ ಯಾರಿಗಿಷ್ಟ ಇಲ್ಲ ಹೇಳಿ. ಆದರೆ ಇಡೀ ಮನೆಯೇ ಕನ್ನಡಿಯಂತಿದ್ದರೆ ಎಷ್ಟು ಚೆಂದ ಅಲ್ವಾ. ಅದರಲ್ಲೂ ಹೋಗುವ ದಾರಿಯಲ್ಲಿ ಬೃಹತ್ ಆದ ಕನ್ನಡಿ ಇದ್ದರೆ ಅಲ್ಲೇ ಒಂದು ಕ್ಷಣ ನಿಂತು ಮುಖ ನೋಡಿ ಡ್ರೆಸ್ ಸರಿ ಮಾಡಿಕೊಂಡು ಹೇರ್ ಸ್ಟೈಲ್ ಮಾಡಿಕೊಂಡು ಮುಂದೆ ಹೋಗ್ಬಹುದು. ಆದರೆ ಈಗ ಸಂಪೂರ್ಣ ಕನ್ನಡಿಯಂತೆ ನಿರ್ಮಾಣವಾದ ಮನೆಯೊಂದು ಎಲ್ಲರನ್ನು ಒಂದು ಕ್ಷಣ ಅಲ್ಲಿ ನಿಂತು ಮುಂದೆ ಹೋಗುವಂತೆ ಮಾಡುತ್ತಿದೆ.
ಲಂಡನ್‌ನ(London) ರಸ್ತೆ ಬದಿಯಲ್ಲಿ ನಿರ್ಮಾಣವಾಗಿರುವ ಬೃಹತಾದ ಕನ್ನಡಿಯಿಂದ ನಿರ್ಮಾಣವಾದ ಮನೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ವೇಗವಾಗಿ ನಡೆದು ಹೋಗುವ ಜನರು ಒಂದು ಕ್ಷಣ ಅಲ್ಲೇ ನಿಂತು ತಮ್ಮ ಇರುವಿಕೆಯನ್ನು ಕನ್ನಡಿಯಲ್ಲಿ ನೋಡಿಕೊಂಡು ಮುಂದೆ ಸಾಗುತ್ತಾರೆ. ಈ ಮನೆಯು ದೈತ್ಯಾಕಾರದ ಪ್ರತಿಫಲಿತ ಫಲಕಗಳನ್ನು ಹೊಂದಿದೆ. ಆದರೆ ಇದು ಮನೆ ಎಂಬುದನ್ನು ಅನೇಕರಿಗೆ ನಂಬಲಾಗುತ್ತಿಲ್ಲ.
ಅಯೋಧ್ಯೆ ತೀರ್ಪಿಗೂ ಮುನ್ನ ಪುರಾತತ್ವ ಇಲಾಖೆ ಕಲೆ ಹಾಕಿದ್ದ ಈ 10 ಸಾಕ್ಷ್ಯಗಳು
ಸಾಮಾಜಿಕ ಜಾಲತಾಣವಾದ ರೆಡ್ಡಿಟ್ ಬಳಕೆದಾರೊಬ್ಬರು, ನಾನು ಸುಮಾರು 10 ವರ್ಷಗಳಿಂದ ಬರೋದಲ್ಲಿ (borough) ವಾಸಿಸುತ್ತಿದ್ದೇನೆ ಮತ್ತು ನಾನು ಎಣಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚು ಬಾರಿ ಅಲ್ಲೇ ಹೋಗಿದ್ದೇನೆ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ಅದು ಮನೆ ಎಂಬುದನ್ನು ನಾನು ಗಮನಿಸಲಿಲ್ಲ ಎನ್ನುತ್ತಾರೆ. ಈ ಕಾಣದಂತಿರುವ ಅಥವಾ ಅದೃಶ್ಯ ರೂಪದಲ್ಲಿರುವ ಮನೆಯು ಒಂದು ಕುಟುಂಬಕ್ಕೆ ಸೇರಿದ್ದಾಗಿದ್ದು, ಅಲ್ಲಿ ಆ ಕುಟುಂಬಸ್ಥರು ವಾಸ ಮಾಡುತ್ತಾರೆ. ಈ ಮನೆಯ ಹಿಂಭಾಗವು 21 ಸೇಂಟ್ ಜಾನ್ಸ್ (St Johns Road) ರಸ್ತೆಯಲ್ಲಿದೆ ಹಾಗೂ ಮುಂಭಾಗವು ರಿಚ್ಮಂಡ್ ಸರ್ಕಸ್ (Richmond Circus) ವೃತ್ತದ ಬಳಿ A316 ನಲ್ಲಿದೆ.
ಈ ಮನೆಯನ್ನು ವಾಸ್ತುಶಿಲ್ಪಿ ಮತ್ತು ಕಲಾವಿದ ಅಲೆಕ್ಸ್ ಹಾವ್ (Alex Haw) ಅವರು 2015 ರಲ್ಲಿ ಮನೆಯನ್ನು ಮರು ವಿನ್ಯಾಸಗೊಳಿಸಿದರು ಮತ್ತು ಈ ಮನೆಯ ಮಾಲೀಕರು 2019ರ ಕೊನೆಯಲ್ಲಿ ಈ ಮನೆಗೆ ಮತ್ತೆ ಸ್ಥಳಾಂತರಗೊಂಡರು. ಮನೆಯ ಹಿಂಭಾಗವು ಮೂಲ ವಿಕ್ಟೋರಿಯನ್ ಕೋಚ್ ಹೌಸ್ (Victorian coach) ವಾಸ್ತು ವಿನ್ಯಾಸವನ್ನು ಉಳಿಸಿಕೊಂಡಿದೆ.
ನಿಮ್ಮ ಮನೆ ಚೆಂದವೂ ಇರಬೇಕು, ಸುಸ್ಥಿರವೂ ಆಗಿರಬೇಕು ಎಂದಾದರೆ ಹೀಗೆ ಮಾಡಿ
ಪ್ರಚಾರ ಬಯಸದೇ ಅನಾಮಧೇಯರಾಗಿ ಉಳಿಯಲು ಬಯಸಿರುವ ಈ ಕುಟುಂಬವು ಲಂಡನ್ ಮಾಧ್ಯಮ ಮೈಲಂಡನ್ ಜೊತೆ ಮಾತನಾಡಿ 'ನಮ್ಮ ಡಿಸೈನರ್ ಅಲೆಕ್ಸ್ ಹಾವ್ ಅವರು ಕನ್ನಡಿಯ ಕಲ್ಪನೆಯನ್ನು ನೀಡಿದರು. ಕನ್ನಡಿಯು ಮನೆಯನ್ನು ಅದರ ಪರಿಸರದೊಂದಿಗೆ ಮಾತನಾಡುವಂತೆ ಮಾಡುತ್ತದೆ. ನೀವು ಮನೆಯ ಮೇಲೆ ಮರಗಳು ಮತ್ತು ಮೋಡಗಳ ಪ್ರತಿಬಿಂಬ ನೋಡಬಹುದು. ಇವು ಮನೆಯ ಮೇಲೆ ಪ್ರತಿಬಿಂಬಿಸುತ್ತಿದೆ. ನಾವು ಕಲ್ಪನೆಯನ್ನು ನಿಜವಾಗಿಯೂ ಇಷ್ಟಪಟ್ಟಿದ್ದೇವೆ ಮತ್ತು ಅದರೊಂದಿಗೆ ಇರಲು ಬಯಸಿದೆವು ಎಂದು ಹೇಳಿದರು.
ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ, 'ನಾನು ಇದರಲ್ಲಿ ಸೆಲ್ಫಿ (selfie) ತೆಗೆದುಕೊಳ್ಳಬಹುದೇ ಅಥವಾ ಒಳಗೆ ಮಾಲೀಕರು ನಾನು ಸೆಲ್ಫಿ ತೆಗೆಯುವುದನ್ನು ನೋಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ನೀವು ನಿಮ್ಮನ್ನಿಲ್ಲಿ ನೋಡಿಕೊಳ್ಳುವುದನ್ನು ನಿಲ್ಲಿಸಿ ನಾನು ಕನ್ನಡಿಯಲ್ಲ ಎಂದು ಮನೆ ಹೇಳುತ್ತಿದ್ದೆಯೇನೋ ಎಂಬಂತೆ ಮನೆ ಹೇಳುತ್ತಿರುವಂತಿದೆ. ಅಲ್ಲದೇ ಒಳಗಿರುವ ಮನೆಯವರಿಗೆ ನೀವು ಕಾಣಿಸುವಂತೆ ಈ ಮನೆಯ ನಿರ್ಮಾಣವಾಗಿದೆ. ಹೀಗಾಗಿ ಕನ್ನಡಿ ಎಂದು ಈ ಮನೆ ಮುಂದೆ ನಿಂತು ಸ್ಟೈಲ್ ಮಾಡಲು ಶುರು ಮಾಡಿದರೆ ಮನೆ ಒಳಗಿರುವ ಮಾಲೀಕರು ನಿಮ್ಮ ಅವತಾರವನ್ನು ನೋಡುತ್ತಾ ಒಳಗೊಳಗೆ ನಗಬಹುದು. ಅಥವಾ ಬೈದುಕೊಳ್ಳಬಹುದು.
ಮನೆಯ ಮುಂಭಾಗದಲ್ಲಿರುವ ಕನ್ನಡಿ (mirror) ಏಕಮುಖವಾಗಿದೆ . ಇದರರ್ಥ ನಿಮಗೆ ಮನೆಯ ಒಳಭಾಗವನ್ನು ನೋಡಲಾಗದು. ಆದರೆ ಮನೆಯ ಮಾಲೀಕರು ಹೊರಗೆ ನೋಡಬಹುದು. ಮನೆಯಿಂದ ಹಿಂದೆ ನಡೆಯುವಾಗ ಕನ್ನಡಿಯಲ್ಲಿ ಕೂದಲನ್ನು ಸರಿಪಡಿಸುವವರನ್ನು ಮಾಲೀಕರು ನೋಡಿದ್ದಾರೆ. ಒಟ್ಟಿನಲ್ಲಿ ದಾರಿಯಲ್ಲಿ ಹೋಗುವವರಿಗೆ ಸ್ಟೈಲ್ ಮಾಡಲು ಕನ್ನಡಿಯಂತೆ ಈ ಮನೆ ಕಂಡರೆ ಮನೆ ಒಳಗಿರುವ ಮಾಲೀಕರಿಗೆ ಕನ್ನಡಿ ನೋಡಿ ಜನ ಏನು ಮಾಡುತ್ತಾರೆ ಅಂತ ನೋಡುತ್ತಾ ಮಜಾ ಮಾಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ