ಸಂಸ್ಕೃತಿ ವಿವಿಯಲ್ಲಿ ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್: ವಿಡಿಯೋ ವೈರಲ್

By Anusha Kb  |  First Published Mar 26, 2023, 11:55 AM IST

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಸಂಸ್ಕೃತಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾಶ್ಮೀರ ಮೂಲದ ಆರು ಮುಸ್ಲಿಂ ವಿದ್ಯಾರ್ಥಿಗಳು ನಮಾಜ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.


ಮಥುರಾ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಸಂಸ್ಕೃತಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾಶ್ಮೀರ ಮೂಲದ ಆರು ಮುಸ್ಲಿಂ ವಿದ್ಯಾರ್ಥಿಗಳು ನಮಾಜ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.  ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ವಿಶ್ವವಿದ್ಯಾನಿಲಯದ ಆವರಣದಲ್ಲಿ ನಮಾಜ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿಶ್ವವಿದ್ಯಾಲಯದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಹಿಂದೂ ಮಹಾಸಭಾ ಎಚ್ಚರಿಸಿದೆ. ಮಥುರಾದ ಪ್ರತಿಷ್ಠಿತ ಸಂಸ್ಕೃತಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಕಾಶ್ಮೀರದ ಆರು ಜನ ವಿದ್ಯಾರ್ಥಿಗಳು ನಮಾಜ್ ಮಾಡಿದ್ದು, ಇದೇ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರು ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 

ಇದು ವೈರಲ್ ಆಗುತ್ತಿದ್ದಂತೆ ಅಖಿಲ ಭಾರತ ಹಿಂದೂ ಮಹಾಸಭಾ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದೆ. ವಿವಿ ಆವರಣದಲ್ಲಿ ನಮಾಜ್‌ ಮಾಡಿದವರ ಹಾಗೂ ಇದಕ್ಕೆ ಅವಕಾಶ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷ ಛಾಯಾ ಗೌತಮ್ ಪ್ರತಿಕ್ರಿಯಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವಂತಿಲ್ಲ ಎಂದು ತಿಳುವಳಿಕೆ ಇದ್ದರೂ ವಿಶ್ವವಿದ್ಯಾನಿಲಯದಲ್ಲಿ ಬಹಳ ಹಿಂದಿನಿಂದಲೂ ನಮಾಜ್ ಮಾಡಲಾಗುತ್ತಿದೆ.  ಆದರೆ ಇದಕ್ಕೆ ಇಷ್ಟು ದಿನ ಸಾಕ್ಷ್ಯ ಸಿಕ್ಕಿರಲಿಲ್ಲ. ಇದೀಗ ವಿಡಿಯೋ ಹೊರಬಿದ್ದಿದ್ದು, ಸಾಕ್ಷಿ ಸಿಕ್ಕಂತಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Tap to resize

Latest Videos

ರೈಲೊಳಗೆ ಕಾರಿಡಾರ್‌ನಲ್ಲಿ ನಮಾಜ್: ವಿಡಿಯೋ ವೈರಲ್, ಆಕ್ರೋಶ

ಈ ಸಂಸ್ಕೃತಿ ವಿಶ್ವವಿದ್ಯಾನಿಲಯಕ್ಕೆ 82 ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.  ಛಾಯಾ ಗೌತಮ್ (Chhaya Gautam) ಪ್ರಕಾರ ಇವರು ಸರ್ಕಾರದ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಜಮ್ಮು ಕಾಶ್ಮೀರದ (Jammu and Kashmir) ನಿವಾಸಿಗಳಾಗಿದ್ದು, ವಿಶ್ವವಿದ್ಯಾನಿಲಯದಲ್ಲಿ ಕಳೆದ 6 ದಿನಗಳಿಂದ ಸತತವಾಗಿ ನಮಾಜ್ ಮಾಡುತ್ತಿದ್ದಾರೆ.  ಘಟನೆಯ ವಿಡಿಯೊ ನನ್ನ ಬಳಿ ಇದೆ ಎಂದು ಗೌತಮ್ ಹೇಳಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ (Akhil Bharat Hindu Mahasabha) ರಾಷ್ಟ್ರೀಯ ಖಜಾಂಜಿ ದಿನೇಶ್ ಶರ್ಮಾ (Dinesh Sharma) ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ವಿಶ್ವವಿದ್ಯಾನಿಲಯದಲ್ಲಿ ನಮಾಜ್ ಮಾಡುವುದು ಗಂಭೀರ ಸಮಸ್ಯೆ ಎಂದಿದ್ದಾರೆ. ಶಿಕ್ಷಣ ದೇಗುಲ ಎಂದು ಕರೆಯಲ್ಪಡುವ ವಿಶ್ವವಿದ್ಯಾನಿಲಯಗಳಲ್ಲಿ ನಮಾಜ್ ಮಾಡುವುದು ಸರಿಯಲ್ಲ. ಒಂದು ವೇಳೆ ಇವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ  ಹಿಂದೂ ಮಹಾಸಭಾ ವತಿಯಿಂದ ವಿಶ್ವವಿದ್ಯಾಲಯದಲ್ಲಿ ಹನುಮಾನ್ ಚಾಲೀಸಾ (Hanuman Chalisa) ಪಠಿಸಲಾಗುವುದು ಎಂದರು.  ನಿರಂತರ ಪ್ರತಿಭಟನೆ ಮತ್ತು ಕ್ರಮದ ಹೊರತಾಗಿಯೂ, ನಿರ್ದಿಷ್ಟ ಸಮುದಾಯದ ಜನರು ತಮ್ಮ ಈ ಕಾರ್ಯವನ್ನು ನಿಲ್ಲಿಸುತ್ತಿಲ್ಲ. ಇದು ಮುಂದುವರಿದಲ್ಲಿ ಹಿಂದೂ ಮಹಾಸಭಾದ ಪದಾಧಿಕಾರಿಗಳು ಗಂಗಾಜಲದೊಂದಿಗೆ (Gangajal)ಕ್ಯಾಂಪಸ್‌ನ ಶುದ್ಧಿ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ. 

ಭೋಪಾಲ್ ಮಾಲ್‌ನಲ್ಲಿ ನಮಾಜ್‌: ಭಜರಂಗದಳದಿಂದ ಪ್ರತಿಭಟನೆ

ಆದರೆ ವಿಶ್ವವಿದ್ಯಾನಿಲಯದ ಪಿಆರ್‌ಒ (PRO) ಕಿಶನ್ ಚತುರ್ವೇದಿ (Kishan Chaturvedi) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು  ಹಳೆಯ ವೀಡಿಯೋ ಎಂದು ಪ್ರತಿಕ್ರಿಯಿಸಿದ್ದಾರೆ.   ವಿವಿಯಲ್ಲಿ 25–30 ದಿನಗಳ ಹಿಂದೆ ನಮಾಜ್ (namaz) ಮಾಡಲಾಗಿತ್ತು. ಈ ವಿಚಾರ ಅವರ ಗಮನಕ್ಕೆ ಬಂದ ನಂತರ, ಮುಸ್ಲಿಂ ವಿದ್ಯಾರ್ಥಿಗಳಿಗೆ (Muslim students) ಕೌನ್ಸೆಲಿಂಗ್ ಮಾಡಲಾಯಿತು. ನಂತರ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಗಳಲ್ಲಿ ಮಾತ್ರ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾರೆ  ಎಂದು ಚತುರ್ವೇದಿ ಹೇಳಿಕೊಂಡಿದ್ದು, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸಮಸ್ಯೆಯನ್ನು ಉತ್ಪ್ರೇಕ್ಷಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ. 

श्री कृष्ण नगरी मथुरा में संस्कृति विश्वविद्यालय में जम्मू कश्मीर से आए 82 छात्रों के द्वारा लगातार इस विद्यालय के अंदर नमाज पढ़ी जाती है जिसको लेकर हिंदू संगठनों ने कड़ा एतराज जताया है उनका कहना है अगर नमाज की जा रही है तो हनुमान चालीसा का पाठ हिंदू छात्र करेंगे। pic.twitter.com/9dGYsqwOzy

— Gaurav Mishra गौरव मिश्रा 🇮🇳 (@gauravstvnews)

 

click me!