
ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಕೋವಿಡ್19: ಗುರುವಾರ ಲಾಕ್‌ಡೌನ್ ಭವಿಷ್ಯ ನಿರ್ಧಾರ?
ಸಮುದಾಯಕ್ಕೂ ಹಬ್ಬುವ ಹಂತಕ್ಕೆ ಬಂದಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಶತಕ ಮೀರಿ ದೃಢಪಡುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ರಾಜ್ಯದಲ್ಲೇ ಮತ್ತೊಮ್ಮೆ ಲಾಕ್‌ಡೌನ್ ಮಾಡಲಾಗುತ್ತಾ ಅಥವಾ ಬೆಂಗಳೂರನ್ನ ಮಾತ್ರ ಲಾಕ್‌ಡೌನ್ ಮಾಡಲಾಗುತ್ತಾ? ಎಂಬುದು ಗುರುವಾರ ನಿರ್ಧಾರವಾಗಲಿದೆ. ಲಾಕ್‌ಡೌನ್ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಮತ್ತೊಮ್ಮೆ ಪರಾಮರ್ಶಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಇತಿಹಾಸದಲ್ಲೇ ಮೊದಲ ಬಾರಿ ಭಕ್ತರಿಲ್ಲದೆ ಪುರಿ ಜಗನ್ನಾಥ ರಥ ಯಾತ್ರೆ: ಇಲ್ಲಿವೆ ಫೋಟೋಸ್
ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿ ಪುರಿ ಜಗನ್ನಾಥ ರಥ ಯಾತ್ರೆ ಆಯೋಜಿಸಲು ಅನುಮತಿ ನೀಡಿದೆ. ಇಂದು ರಥ ಯಾತ್ರೆ ನಡೆಯುತ್ತಿದ್ದು, ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೆ ರಥ ಯಾತ್ರೆ ನಡೆದಿದೆ.
ಚೀನಾ ಜೊತೆ ಕಾಂಗ್ರೆಸ್ ಮಾಡಿದ ಒಪ್ಪಂದಿಂದಾಗಿ ಯುದ್ಧ: ರಾಹುಲ್ ವಿರುದ್ಧ ನಡ್ಡಾ ವಾಗ್ದಾಳಿ
ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ದೇಶವನ್ನು ವಿಭಜಿಸುವ, ಸೈನಿಕರನ್ನು ಹತಾಶೆಗೊಳಿಸುವಂತಹ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಗೆ ಒಳಗಾದ ಕರ್ನಾಟಕ ಕ್ರಿಕೆಟರ್ಸ್
ಕ್ರೀಡಾಚಟುವಟಿಕೆಗಳು ಆರಂಭಕ್ಕೆ ಮುನ್ಸೂಚನೆ ಸಿಕ್ಕಿರುವುದರಿಂದ ಒಂದು ಡಜನ್‌ಗೂ ಹೆಚ್ಚು ಕರ್ನಾಟಕದ ಕ್ರಿಕೆಟಿಗರು ಚಿನ್ನಸ್ವಾಮಿ ಮೈದಾನ ಪ್ರವೇಶಿಸಿದ್ದಾರೆ. ಇದರ ಜತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಪಾಸಣೆಗೂ ಒಳಪಟ್ಟರು.
'ಆ' ಪಾತ್ರಗಳೇ ಬೇಕು; ದಪ್ಪಗಾದರೇನು ನಾನು ಮಾಡಲು ರೆಡಿ ಎಂದ ನಟಿ!
ತಮಿಳು ಹಾಗೂ ತೆಲುಗು ಚಿತ್ರರಂಗದ ಹಾಟ್ ನಟಿ ಇಲಿಯಾನಾ ಇದಕ್ಕಿದಂತೆ ಮೇಲಿಂದ ಮೇಲೆ ಚಿತ್ರಕಥೆಗಳನ್ನು ರಿಜೆಕ್ಟ್ ಮಾಡುತ್ತಿರುವುದು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಚಿತ್ರರಂಗದಲ್ಲಿ ಅವಕಾಶ ಇಲ್ಲ ಎಂದು ಅಲ್ಲೊಮ್ಮೆ ಇಲ್ಲೊಮ್ಮೆ ಸಂದರ್ಶನದಲ್ಲಿ ಆರೋಪ ಮಾಡುವ ನಟಿ ಈಗ ರಿಜೆಕ್ಟ್ ಮಾಡಲು ಕಾರಣವೇನು?
ನಿಖಿಲ್ ಕುಮಾರಸ್ವಾಮಿ ಪತ್ನಿಗೆ ಕೊಟ್ರು ಸರ್ಪ್ರೈಸ್ ಬರ್ತಡೇ ಗಿಫ್ಟ್! ಏನದು?
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಈಗ ಸೋಷಿಯಲ್ ಮೀಡಿಯಾದ ಸ್ಟಾರ್ ಕಪಲ್ ಆಗಿದ್ದಾರೆ. ಅಷ್ಟೇ ಅಲ್ಲದೆ ಪತ್ನಿ ಸೆರೆ ಹಿಡಿದ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಶೇರ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ಸ್ ಹರಿದು ಬರುತ್ತವೆ. ಇನ್ನು ಜೂನ್ 21ರಂದು ರೇವತಿ ಹುಟ್ಟು ಹಬ್ಬಕ್ಕೆ ನಿಖಿಲ್ ಕೊಟ್ಟ ಸರ್ಪ್ರೈಸ್ ಗಿಫ್ಟ್ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.
29 ದಿನಗಳ ನಂತರ ಕೊಡಗಿನಲ್ಲಿ ಕೊರೋನಾ ಸಕ್ರಿಯ..! ಮತ್ತೆ ಹೆಚ್ಚಿದ ಆತಂಕ
ಕೊಡಗು ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಮೂರು ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಕೊಡಗಿನಲ್ಲಿ ಸುಮಾರು ಒಂದು ತಿಂಗಳ ಬಳಿಕ ಮತ್ತೆ ಕೊರೋನಾ ಪ್ರಕರಣಗಳು ಸಕ್ರಿಯಗೊಂಡಿದೆ.
‘ದೇಶಿ ಟಿಕ್‌ಟಾಕ್’ ಚಿಂಗಾರಿ ಆ್ಯಪ್ ಈಗ ಸೂಪರ್‌ಹಿಟ್!
ಪೂರ್ವ ಲಡಾಖ್ ಗಡಿ ಸಂಘರ್ಷದಲ್ಲಿ ಚೀನಾ 20 ಭಾರತೀಯ ಯೋಧರನ್ನು ಹತ್ಯೆಗೈದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಭಾರತದಲ್ಲಿ ಜೋರಾಗಿದೆ. ಇದರ ಬೆನ್ನಲ್ಲೇ ಚೀನಾ ಮೂಲದ ಟಿಕ್‌ಟಾಕ್ ವಿಡಿಯೋ ಆ್ಯಪ್‌ಗೆ ಪರ್ಯಾಯ ಎಂದೇ ಪರಿಗಣಿಸಲ್ಪಟ್ಟಿರುವ ಬೆಂಗಳೂರು ಮೂಲದ ‘ಚಿಂಗಾರಿ’ ಆ್ಯಪ್ ಅನ್ನು 72 ಗಂಟೆಗಳಲ್ಲಿ 5 ಲಕ್ಷ ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಫಸ್ಟ್‌ನೈಟ್ ಮರುದಿನವೇ ವಿಧವೆಯಾದ ಮದುಮಗಳು, ಮದುವೆಗೆ ಬಂದವರಿಗೆ ಕೊರೋನಾ ಪಾಸಿಟಿವ್!
ದೆಹಲಿಯಿಂದ ತನ್ನ ಮನೆಗೆ ಮರಳಿದ್ದ ಯುವಕನೊಬ್ಬ ಅಂದುಕೊಂಡಂತೆ ಗ್ರ್ಯಾಂಡ್ ಆಗಿಯೇ ಮದುವೆಯಾಗಿದ್ದು, ಈ ದಂಪತಿಯ ಫಸ್ಟ್ ನೈಟ್ ಕೂಡಾ ನಡೆದಿದೆ. ಆದರೆ ಇದಾದ ಮರುದಿನವೇ ಮದುಮಗಳು ವಿಧವೆಯಾಗದ್ದಾಳೆ. ಇದರಿಂದ ಸಂಭ್ರಮದಲ್ಲಿದ್ದ ಮನೆಯಲ್ಲಿ ಕ್ಷಣಮಾತ್ರದಲ್ಲಿ ಶೋಕ ಆವರಿಸಿಕೊಂಡಿದೆ.
KSRTC ಕಂಡಕ್ಟರ್, ಡ್ರೈವರ್ ಭದ್ರತಾ ಕಾರ್ಯಕ್ಕೆ!
ಕೊರೋನಾದಿಂದ ಆರ್ಥಿಕ ನಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ ನಿಗಮ ಹಣ ಉಳಿಸಲು ನಿಗಮದ ಭದ್ರತಾ ಕೆಲಸಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಗೃಹರಕ್ಷಕ ದಳದ ಸಿಬ್ಬಂದಿಗಳ ಸೇವೆಯನ್ನು ರದ್ದುಗೊಳಿಸಲು ತೀರ್ಮಾನಿಸಿದೆ. ಈ ಹುದ್ದೆಗಳಿಗೆ ತಾತ್ಕಾಲಿಕವಾಗಿ ನಿಗಮದ ಚಾಲನಾ ಸಿಬ್ಬಂದಿಯನ್ನೇ (ಚಾಲಕ ಮತ್ತು ನಿರ್ವಾಹಕ) ಬಳಸಿಕೊಳ್ಳಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ