ಏಳುತ್ತಿದೆ ಸೈಕ್ಲೋನ್‌: ರಾಜ್ಯದಲ್ಲಿ ಮತದಾನ ದಿನ ಮಳೆ ಕಾಟ ಸಂಭವ

Published : May 04, 2023, 10:14 AM ISTUpdated : May 04, 2023, 11:33 AM IST
ಏಳುತ್ತಿದೆ ಸೈಕ್ಲೋನ್‌: ರಾಜ್ಯದಲ್ಲಿ ಮತದಾನ ದಿನ ಮಳೆ ಕಾಟ ಸಂಭವ

ಸಾರಾಂಶ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮೇ 8ರಿಂದ 11ರ ನಡುವೆ ಪೂರ್ವ ಕರಾವಳಿಗೆ ಮೋಚಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಅದಕ್ಕೆ ಮಳೆ ತೊಂದರೆ ಕೊಡುವ ಆತಂಕ ಎದುರಾಗಿದೆ.

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮೇ 8ರಿಂದ 11ರ ನಡುವೆ ಪೂರ್ವ ಕರಾವಳಿಗೆ ಮೋಚಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಅದಕ್ಕೆ ಮಳೆ ತೊಂದರೆ ಕೊಡುವ ಆತಂಕ ಎದುರಾಗಿದೆ.

ಬಂಗಾಳ ಕೊಲ್ಲಿಯ (Bay of Bengal)ಆಗ್ನೇಯ ದಿಕ್ಕಿನಲ್ಲಿ ಚಂಡಮಾರುತವೊಂದು ರೂಪುಗೊಳ್ಳುವ ಲಕ್ಷಣ ಕಂಡುಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಬುಧವಾರ ತಿಳಿಸಿದೆ. ಮೇ 9ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ (cyclone) ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದ್ದು, ಅದರ ಪಥ ಯಾವ ಕಡೆ ಇರಲಿದೆ ಎಂಬುದನ್ನು ಇನ್ನು ಕೆಲವೇ ದಿನಗಳಲ್ಲಿ ಹೇಳುವುದಾಗಿ ಮಾಹಿತಿ ನೀಡಿದೆ.

ಮಳೆ ಆರ್ಭಟದ ನಡುವೆ ಮೋಚಾ ಚಂಡಮಾರುತ ಭೀತಿ, ಮುಂದಿನ 48 ಗಂಟೆಗಳಲ್ಲಿ ಅಪ್ಪಳಿಸಲಿದೆ ಸೈಕ್ಲೋನ್!

ಮೇ 6ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಹಲವು ಬದಲಾವಣೆಗಳಾಗಲಿವೆ. ಅದಾದ ಮರುದಿನವೇ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಹಾಗೂ ಹಡಗು ನಡೆಸುವವರು ಬಂಗಾಳ ಕೊಲ್ಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ (Mrityunjaya Mohapatra) ಅವರು ಮನವಿ ಮಾಡಿದ್ದಾರೆ.

ಒಂದು ವೇಳೆ ಈ ಚಂಡಮಾರುತ ಸೃಷ್ಟಿಯಾದದ್ದೇ ಆದಲ್ಲಿ ಅದು ಭಾರತ ಕಾಣುತ್ತಿರುವ ಈ ವರ್ಷದ ಮೊದಲ ಚಂಡಮಾರುತವಾಗಲಿದ್ದು, ಅದಕ್ಕೆ ಸರದಿಯ ಪ್ರಕಾರ ‘ಮೋಕಾ’ ಎಂಬ ಹೆಸರನ್ನು ಇಡಬೇಕಾಗುತ್ತದೆ. ಈ ಹೆಸರನ್ನು ಯೆಮೆನ್‌ ಸೂಚಿಸಿದೆ. ಮೋಕಾ ಎಂಬುದು ಯೆಮೆನ್‌ನಲ್ಲಿರುವ ಕೆಂಪು ಸಮುದ್ರದ ಬಂದರು ನಗರಿಯ ಹೆಸರಾಗಿದೆ. ಭಾರತದಲ್ಲಿ ಎರಡು ಚಂಡಮಾರುತ ಋುತುಗಳು ಇವೆ. ಏಪ್ರಿಲ್‌- ಮೇ- ಜೂನ್‌ ಅವಧಿಯಲ್ಲಿ ಚಂಡಮಾರುತ ಕಂಡುಬರುತ್ತವೆ. ಬಳಿಕ ಅಕ್ಟೋಬರ್‌- ನವೆಂಬರ್‌- ಡಿಸೆಂಬರ್‌ ಅವಧಿಯಲ್ಲೂ ಚಂಡಮಾರುತಗಳು ಕಾಣಿಸಿಕೊಳ್ಳುತ್ತವೆ.

ನಿಜವಾಗುತ್ತೆಯೇ ಸೌರ ಚಂಡಮಾರುತದ ಬಗ್ಗೆ ಬಾಬಾ ವಾಂಗಾ ಭಯಾನಕ ಭವಿಷ್ಯ? ಬರ್ತಾರಾ ಏಲಿಯನ್ಸ್? 

ಮೇ 9ರ ವೇಳೆಗೆ ದೇಶದ ಪೂರ್ವ ಕರಾವಳಿಗೆ ಚಂಡಮಾರುತ ಲಗ್ಗೆ?

ಬಂಗಾಳ ಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ಚಂಡಮಾರುತವೊಂದು ರೂಪುಗೊಳ್ಳುವ ಲಕ್ಷಣ ಕಂಡುಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ. ಮೇ 9ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದ್ದು, ಅದರ ಪಥ ಯಾವ ಕಡೆ ಇರಲಿದೆ ಎಂಬುದನ್ನು ಇನ್ನು ಕೆಲವೇ ದಿನಗಳಲ್ಲಿ ಹೇಳುವುದಾಗಿ ಮಾಹಿತಿ ನೀಡಿದೆ.

ಮೇ 6ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಹಲವು ಬದಲಾವಣೆಗಳಾಗಲಿವೆ. ಅದಾದ ಮರುದಿನವೇ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಹಾಗೂ ಹಡಗು ನಡೆಸುವವರು ಬಂಗಾಳ ಕೊಲ್ಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಅವರು ಮನವಿ ಮಾಡಿದ್ದಾರೆ.

ಒಂದು ವೇಳೆ ಈ ಚಂಡಮಾರುತ ಸೃಷ್ಟಿಯಾದದ್ದೇ ಆದಲ್ಲಿ ಅದು ಭಾರತ ಕಾಣುತ್ತಿರುವ ಈ ವರ್ಷದ ಮೊದಲ ಚಂಡಮಾರುತವಾಗಲಿದ್ದು, ಅದಕ್ಕೆ ಸರದಿಯ ಪ್ರಕಾರ ‘ಮೋಕಾ’ ಎಂಬ ಹೆಸರನ್ನು ಇಡಬೇಕಾಗುತ್ತದೆ. ಈ ಹೆಸರನ್ನು ಯೆಮೆನ್‌ ಸೂಚಿಸಿದೆ. ಮೋಕಾ ಎಂಬುದು ಯೆಮೆನ್‌ನಲ್ಲಿರುವ ಕೆಂಪು ಸಮುದ್ರದ ಬಂದರು ನಗರಿಯ ಹೆಸರಾಗಿದೆ. ಭಾರತದಲ್ಲಿ ಎರಡು ಚಂಡಮಾರುತ ಋುತುಗಳು ಇವೆ. ಏಪ್ರಿಲ್‌- ಮೇ- ಜೂನ್‌ ಅವಧಿಯಲ್ಲಿ ಚಂಡಮಾರುತ ಕಂಡುಬರುತ್ತವೆ. ಬಳಿಕ ಅಕ್ಟೋಬರ್‌- ನವೆಂಬರ್‌- ಡಿಸೆಂಬರ್‌ ಅವಧಿಯಲ್ಲೂ ಚಂಡಮಾರುತಗಳು ಕಾಣಿಸಿಕೊಳ್ಳುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ
UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ