ಕಾಶ್ಮೀರದ ಜಿ20 ಶೃಂಗಸಭೆಗೆ ಕಮ್ಯಾಂಡೋ, ಸೇನೆ ಭದ್ರತೆ

Published : May 04, 2023, 09:05 AM IST
ಕಾಶ್ಮೀರದ ಜಿ20 ಶೃಂಗಸಭೆಗೆ ಕಮ್ಯಾಂಡೋ, ಸೇನೆ ಭದ್ರತೆ

ಸಾರಾಂಶ

ಪಾಕಿಸ್ತಾನ ಹಾಗೂ ಚೀನಾದ ತೀವ್ರ ವಿರೋಧದ ನಡುವೆಯೂ ಮಾಸಾಂತ್ಯಕ್ಕೆ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಜಿ20 ಶೃಂಗ ಸಭೆಯನ್ನು ಆಯೋಜಿಸಲು ನಿರ್ಧರಿಸಿರುವ ಭಾರತ, ಆ ಸಭೆಗೆ ಮರೀನ್‌ ಕಮ್ಯಾಂಡೋಗಳು, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಯೋಧರು ಹಾಗೂ ಸೇನೆಯಿಂದ ಬಿಗಿ ಭದ್ರತೆಯನ್ನು ಕಲ್ಪಿಸಲು ನಿರ್ಧರಿಸಿದೆ.

ಶ್ರೀನಗರ: ಪಾಕಿಸ್ತಾನ ಹಾಗೂ ಚೀನಾದ ತೀವ್ರ ವಿರೋಧದ ನಡುವೆಯೂ ಮಾಸಾಂತ್ಯಕ್ಕೆ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಜಿ20 ಶೃಂಗ ಸಭೆಯನ್ನು ಆಯೋಜಿಸಲು ನಿರ್ಧರಿಸಿರುವ ಭಾರತ, ಆ ಸಭೆಗೆ ಮರೀನ್‌ ಕಮ್ಯಾಂಡೋಗಳು, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಯೋಧರು ಹಾಗೂ ಸೇನೆಯಿಂದ ಬಿಗಿ ಭದ್ರತೆಯನ್ನು ಕಲ್ಪಿಸಲು ನಿರ್ಧರಿಸಿದೆ. ಫಿದಾಯಿನ್‌/ಆತ್ಮಾಹುತಿ, ಡ್ರೋನ್‌ ದಾಳಿ ಸೇರಿದಂತೆ ಎಲ್ಲ ಬಗೆಯ ಉಗ್ರ ದಾಳಿಗಳನ್ನೂ ತಡೆಯಲು ಕಟ್ಟೆಚ್ಚರ ವಹಿಸಲು ತೀರ್ಮಾನಿಸಿದೆ.

ಈ ಸಂಬಂಧ ಶ್ರೀನಗರದಲ್ಲಿ (Srinagar) ಬುಧವಾರ ಮಹತ್ವದ ಸಭೆಯನ್ನು ನಡೆಸಲಾಗಿದೆ. ಇತ್ತೀಚೆಗೆ ಪೂಂಛ್‌ನಲ್ಲಿ (Poonch) ಸೇನಾ ವಾಹನದ ಮೇಲೆ ದಾಳಿ ನಡೆಸಿ ಉಗ್ರರು ಐವರು ಯೋಧರನ್ನು ಕೊಂದಿದ್ದಾರೆ. ಯೋಧರ ಐದು ರೈಫಲ್‌ಗಳನ್ನು ಹೊತ್ತೊಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಮತ್ತಷ್ಟುದಾಳಿಗಳನ್ನು ನಡೆಸಬಹುದು ಎಂಬ ಆತಂಕ ಇದೆ. ಹೀಗಾಗಿ ಫಿದಾಯಿನ್‌ ದಾಳಿ, ಗ್ರೆನೇಡ್‌ ದಾಳಿ (Grenade Attack)ಸೇರಿದಂತೆ ಎಲ್ಲ ಬಗೆಯ ಸಂಭಾವ್ಯ ಭಯೋತ್ಪಾದಕ ದಾಳಿಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದ್ದು, ಅಂತಹ ಭಯೋತ್ಪಾದಕ ಬೆದರಿಕೆಯನ್ನು ಹತ್ತಿಕ್ಕಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಾತುಕತೆಯಾಗಿದೆ.

ಜಿ20 ಶೃಂಗಸಭೆಗೆ ಭೀತಿ ಸೃಷ್ಟಿಗೆ ಪೂಂಚ್‌ನಲ್ಲಿ ಉಗ್ರ ದಾಳಿ? ಪಾಕ್‌ ಕೈವಾಡ ಶಂಕೆ

ಶ್ರೀನಗರದ ಶೇರ್‌ ಎ ಕಾಶ್ಮೀರ್‌ (Sher A Kashmir) ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಮೇ 22-24ರವರೆಗೆ ಜಿ20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ದಾಲ್‌ ಲೇಕ್‌ (Dal Lake) ಬಳಿ ಮರೀನ್‌ ಕಮ್ಯಾಂಡೋಗಳನ್ನು ನಿಯೋಜಿಸಲಾಗುತ್ತದೆ. ಫಿದಾಯಿನ್‌/ಆತ್ಮಾಹುತಿ ದಾಳಿಗಳನ್ನು ತಡೆಯಲು ಎನ್‌ಎಸ್‌ಜಿ ಯೋಧರನ್ನು ನಿಯೋಜನೆ ಮಾಡಲು ನಿರ್ಧರಿಸಲಾಗಿದೆ. ಇದರ ಜತೆಗೆ ವಿಶೇಷ ಕಾರ್ಯಾಚರಣೆ ಪೊಲೀಸರನ್ನು ಎಲ್ಲ ಸ್ಥಳದಲ್ಲೂ ನಿಯೋಜನೆ ಮಾಡಲಾಗುತ್ತದೆ. ಡ್ರೋನ್‌ ದಾಳಿಯನ್ನು ತಡೆಯುವ ಹೊಣೆಗಾರಿಕೆಯನ್ನು ವಹಿಸಲಾಗುತ್ತದೆ.

RRRನ ನಾಟು ನಾಟು ಹಾಡಿಗೆ G20 ಪ್ರತಿನಿಧಿಗಳ ಸಖತ್ ಡಾನ್ಸ್: ವಿಡಿಯೋ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!