ಜಡ್ಜ್‌ಗಳ ನೇಮಕ: ಕೇಂದ್ರದ ವಿಳಂಬಕ್ಕೆ ಮತ್ತೆ ಸುಪ್ರೀಂ ಗರಂ

By Kannadaprabha NewsFirst Published Mar 24, 2023, 9:16 AM IST
Highlights

ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಸೂಚಿಸಿದ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರ ತಡೆ ನೀಡುತ್ತಿರುವುದು ಹಾಗೂ ಕಡೆಗಣಿಸುತ್ತಿರುವುದಕ್ಕೆ ಕೊಲಿಜಿಯಂ ಕಳವಳ ವ್ಯಕ್ತಪಡಿಸಿದೆ.

ನವದೆಹಲಿ: ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಸೂಚಿಸಿದ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರ ತಡೆ ನೀಡುತ್ತಿರುವುದು ಹಾಗೂ ಕಡೆಗಣಿಸುತ್ತಿರುವುದಕ್ಕೆ ಕೊಲಿಜಿಯಂ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ನ್ಯಾಯಾಧೀಶರ ನೇಮಕಾತಿಯನ್ನು ಅಗತ್ಯ ಎಂದು ಪರಿಗಣಿಸುವಂತೆ ಸೂಚಿಸಿದೆ.

ಕೊಲಿಜಿಯಂ ಸೂಚಿಸಿದ ನ್ಯಾಯಾಧೀಶರ ನೇಮಕವನ್ನು ವಿಳಂಬ ಮಾಡುವುದರಿಂದ ಅದು ಅವರ ಹಿರಿತನದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಕೇಂದ್ರ ಮತ್ತು ನ್ಯಾಯಾಂಗದ ನಡುವೆ ಘರ್ಷಣೆಗೆ ಕಾರಣವಾಗಲಿದೆ ಎಂದು ಕೊಲಿಜಿಯಂ ಹೇಳಿದೆ. ಇತ್ತೀಚಿಗೆ ಆರ್‌.ಜಾನ್‌ ಸತ್ಯಂ ಅವರಿಗೆ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಿರುವ ಕುರಿತಾಗಿ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಅವರ ನೇಮಕಕ್ಕೆ ಸೂಚಿಸಿದ್ದರೂ ಸಹ ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿರಲಿಲ್ಲ. ಹೀಗಾಗಿ ಜ.17ರಂದು ಮತ್ತೊಮ್ಮೆ ಅವರ ನೇಮಕವನ್ನು ಕೊಲಿಜಿಯಂ (collegium) ಒತ್ತಿ ಹೇಳಿತ್ತು.

ಜಡ್ಜ್‌ ನೇಮಕಕ್ಕೆ ಹೊಸ ಸಮಿತಿ: ಕೇಂದ್ರ ಪುನರುಚ್ಚಾರ

ಅಲ್ಲದೇ ಆರ್‌.ಶಕ್ತಿವೇಲ್‌ (R. Sakthivel), ಪಿ.ಧನಪಾಲ್‌ (P. Dhanapa), ಚಿನ್ನಸ್ವಾಮಿ ಕುಮಾರಪ್ಪನ್‌ (Chinnaswamy Kumarappan) ಮತ್ತು ಕೆ.ರಾಜಶೇಖರ್‌ ಅವರ ನೇಮಕದ ಕುರಿತಾಗಿ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಕೊಲಿಜಿಯಂ ಕಳವಳ ವ್ಯಕ್ತಪಡಿಸಿದೆ.

ಜಡ್ಜ್‌ಗಳು ಆಡಳಿತಕ್ಕಿಳಿದರೆ ನ್ಯಾಯಾಂಗ ನೋಡಿಕೊಳ್ಳುವವರಾರು: ರಿಜಿಜು ಪ್ರಶ್ನೆ

click me!