ಅಮಿತ್‌ ಶಾ, ನಡ್ಡಾಗೆ ಜನಸಂಘ ಶ್ಯಾಮ್‌ಪ್ರಸಾದ್‌ ಮುಖರ್ಜಿ ಪುಸ್ತಕ

By Kannadaprabha NewsFirst Published Mar 24, 2023, 7:10 AM IST
Highlights

ಜನಸಂಘದ ಸ್ಥಾಪಕ ಡಾ.ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಕುರಿತಾಗಿ ಸಂಸದ, ಪಾಂಚಜನ್ಯದ ಮಾಜಿ ಸಂಪಾದಕ ತರುಣ್‌ ವಿಜಯ್‌ ಅವರು ಬರೆದಿರುವ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುರುವಾರ ಸ್ವೀಕರಿಸಿದರು.

ನವದೆಹಲಿ: ಜನಸಂಘದ ಸ್ಥಾಪಕ ಡಾ.ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಕುರಿತಾಗಿ ಸಂಸದ, ಪಾಂಚಜನ್ಯದ ಮಾಜಿ ಸಂಪಾದಕ ತರುಣ್‌ ವಿಜಯ್‌ ಅವರು ಬರೆದಿರುವ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುರುವಾರ ಸ್ವೀಕರಿಸಿದರು.

ಈ ಪುಸ್ತಕವನ್ನು ಭಾರತ ಸರ್ಕಾರದ ಪ್ರಕಾಶನ ವಿಭಾಗ ಪ್ರಕಟಿಸಿದ್ದು, ಪುಸ್ತಕಕ್ಕೆ 2,100 ರು. ಬೆಲೆ ನಿಗದಿಪಡಿಸಲಾಗಿದೆ. ಇದರಲ್ಲಿ ಮುಖರ್ಜಿ ಅವರ ಬಾಲ್ಯದಿಂದ ಹಿಡಿದು ಸುಮಾರು 350 ಚಿತ್ರಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಬಹುಪಾಲು ಚಿತ್ರಗಳು ಈವರೆಗೆ ನೋಡಿಲ್ಲದ ಚಿತ್ರಗಳಾಗಿವೆ. ಇಡೀ ಪುಸ್ತಕವನ್ನು ಎ4 ಅಳತೆಯಲ್ಲಿ ಪ್ರಕಟಿಸಲಾಗಿದ್ದು, ಹೊಳಪು (glossy paper) ಮೈಹೊಂದಿರುವ ಪೇಪರ್‌ ಬಳಕೆಯಾಗಿದೆ.

Mayors Conference: ಜನಸಂಘ ಕಾಲದ ಉಡುಪಿ ನಗರಸಭೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ!

ಈ ಪುಸ್ತಕಕ್ಕೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು (Lok Sabha Speaker Om Birla) ಮುನ್ನುಡಿ ಬರೆದಿದ್ದು, ಶ್ಯಾಂ ಪ್ರಸಾದ್‌ ಮುಖರ್ಜಿ ಅವರು ಮೊಮ್ಮಗ ನ್ಯಾ.ಚಿತ್ತತೋಷ್‌ ಮುಖರ್ಜಿ (Chittatosh Mukherjee) ಅವರು ಪೀಠಿಕೆ ಬರೆದಿದ್ದಾರೆ. ಅವರ ಮೊಮ್ಮಗಳು ಡಾ.ದೇವದತ್ತ ಚಕ್ರವರ್ತಿ (Dr. Devadatta Chakraborty) ಅವರು ವಿಶೇಷ ಲೇಖನವನ್ನು ಬರೆದಿದ್ದಾರೆ. ಜನಸಂಘದ ಸ್ಥಾಪಕ ಡಾ.ಶ್ಯಾಂ ಪ್ರಸಾದ್‌ ಮುಖರ್ಜಿ ಅವರ ಕುರಿತಾಗಿ ಸಂಸದ, ಪಾಂಚಜನ್ಯದ ಮಾಜಿ ಸಂಪಾದಕ ತರುಣ್‌ ವಿಜಯ್‌ (Chittatosh Mukherjee) ಅವರು ಬರೆದಿರುವ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನೀಡಿದರು.
 

'ಭಾರತೀಯ ಜನತಾ ಪಾರ್ಟಿ' ನಾಮಕರಣ ಮಾಡಿದ್ದ ಅಟಲ್‌ಜೀ, 2 ರಿಂದ 303 ಸ್ಥಾನ ತಲುಪಿದ BJP!

click me!