ಜೈಲು ಭೀತಿ ತಪ್ಪಿಸುವ ಸುಗ್ರೀವಾಜ್ಞೆ ಹರಿದು ಹಾಕಿದ್ದ ರಾಹುಲ್‌ ಗಾಂಧಿ!

By Kannadaprabha News  |  First Published Mar 24, 2023, 6:52 AM IST

2013ರಲ್ಲಿ ತಮ್ಮದೇ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯ ಪ್ರತಿಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹರಿದು ಹಾಕುವ ಮೂಲಕ ರಾಹುಲ್‌ ತಮ್ಮದೇ ಸರ್ಕಾರಕ್ಕೆ ಮುಜುಗರ ತಂದಿದ್ದರು.


ನವದೆಹಲಿ: ಕೋಲಾರ ಕೇಸಲ್ಲಿ ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆಯಾಗಿದೆ. ಆದರೆ ಶಿಕ್ಷೆ ವಿರುದ್ಧ ಮೇಲ್ಮನವಿಗೆ ಕೋರ್ಟ್‌ 30 ದಿನಗಳ ಕಾಲಾವಕಾಶ ನೀಡಿದೆ. ವಿಶೇಷವೆಂದರೆ ಹೀಗೆ ಶಿಕ್ಷೆಯಾದ ಪ್ರಕರಣದಲ್ಲಿ 90 ದಿನಗಳವರೆಗೆ ಬಂಧನದಿಂದ ತಡೆ ನೀಡಲು 2013ರಲ್ಲಿ ತಮ್ಮದೇ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯ ಪ್ರತಿಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹರಿದು ಹಾಕುವ ಮೂಲಕ ರಾಹುಲ್‌ ತಮ್ಮದೇ ಸರ್ಕಾರಕ್ಕೆ ಮುಜುಗರ ತಂದಿದ್ದರು.

ಯಾವುದೇ ಜನಪ್ರತಿನಿಧಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ ಅವರು ತನಗೆ ಲಭ್ಯವಿರುವ ಎಲ್ಲಾ ಕಾನೂನಿನ ಅವಕಾಶ ಬಳಸಿಕೊಳ್ಳುವ ತನಕವೂ ಹುದ್ದೆಯಿಂದ ಅನರ್ಹವಾಗದಂತೆ ರಕ್ಷಣೆ ನೀಡುವ ಕಾಯ್ದೆಯನ್ನು 2013ರಲ್ಲಿ ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್‌ ಸರ್ಕಾರ (Manmohan Singh's government) ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಯಾವುದೇ ಜನಪ್ರತಿನಿಧಿಗೆ ಶಿಕ್ಷೆಯಾದರೆ ಅವರು ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು 90 ದಿನಗಳ ಅವಕಾಶ ಕಲ್ಪಿಸಿತ್ತು. ಈ ಮಸೂದೆ ರಾಷ್ಟ್ರಪತಿ ಬಳಿಗೆ ಹೋಗಿದ್ದ ವೇಳೆ ದಿಢೀರನೆ ಪತ್ರಿಕಾಗೋಷ್ಠಿ ಕರೆದಿದ್ದ ರಾಹುಲ್‌, ಈ ಸುಗ್ರೀವಾಜ್ಞೆ ಅಸಂಬದ್ಧ ಎಂದು ಹೇಳಿ, ಅದರ ಪ್ರತಿಗಳನ್ನು ಹರಿದು ಹಾಕಿದ್ದರು. ಹೀಗಾಗಿ ಸುಗ್ರೀವಾಜ್ಞೆ ಜಾರಿಗೆ ಬಂದಿರಲಿಲ್ಲ.

Tap to resize

Latest Videos

ಮಾನನಷ್ಟ ಕೇಸ್‌: ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ, ಜಾಮೀನು ಪಡೆದ ರಾಗಾ!

ತಪ್ಪಾದ ತೀರ್ಪು: ಕಾಂಗ್ರೆಸ್‌

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸೂರತ್‌ ಕೋರ್ಟ್‌ ನೀಡಿರುವ ತೀರ್ಪು, ತಪ್ಪುಗಳಿಂದ ತುಂಬಿರುವ ಹಾಗೂ ಕಾನೂನಾತ್ಮಕವಾಗಿ ಅಸ್ಥಿರವಾದ ತೀರ್ಪು ಎಂದು ಕಾಂಗ್ರೆಸ್‌ ವಕ್ತಾರ (Congress spokesperson) ಅಭಿಷೇಕ್‌ ಸಿಂಘ್ವಿ (Abhishek Singhvi) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉನ್ನತ ನ್ಯಾಯಾಲಯದಲ್ಲಿ ಶೀಘ್ರವೇ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಹಾಗೂ ಪ್ರಸ್ತುತ ಶಿಕ್ಷೆಯನ್ನು ತಡೆಹಿಡಿದು, ರದ್ದುಗೊಳಿಸಲಾಗುವುದು ಎಂದಿದ್ದಾರೆ. ಅಲ್ಲದೇ ಸಾರ್ವಜನಿಕ ಹಿತಾಸಕ್ತಿಗಾಗಿ ನಿರ್ಭೀತವಾಗಿ ಮಾತನಾಡುವುದನ್ನು ತಡೆಯುವ ನಿಮ್ಮ ಪ್ರಯತ್ನ ರಾಹುಲ್‌ ಗಾಂಧಿಯನ್ನಾಗಲೀ ಪಕ್ಷವನ್ನಾಗಲೀ ತಡೆಯವುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಖರ್ಗೆ ನಿವಾಸದಲ್ಲಿ ತುರ್ತು ಸಭೆ
ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಸೂರತ್‌ ಕೋರ್ಟ್‌ (Surat Court) ತೀರ್ಪು ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕರು ಗುರುವಾರ ಇಲ್ಲಿ ತುರ್ತು ಸಭೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಮನೆಯಲ್ಲಿ ಸೇರಿದ್ದ ಪಕ್ಷದ ಹಿರಿಯ ನಾಯಕರು, ತೀರ್ಪಿನ ಪರಿಣಾಮಗಳು ಮತ್ತು ಮುಂದೆ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ನನ್ನನ್ನು ದೇಶದ್ರೋಹಿ ಅಂತ ಕರೀಬೇಡಿ: ರಾಹುಲ್‌ಗಾಂಧಿ

8ನೇ ದಿನವೂ ಸಂಸತ್‌ ಕಲಾಪ ಬಲಿ
ರಾಹುಲ್‌ ಗಾಂಧಿ (Rahul Gandhi), ಅದಾನಿ ವಿಷಯವಾಗಿ ಸಂಸತ್ತಿನಲ್ಲಿ ಗದ್ದಲ ಮುಂದುವರೆದಿದ್ದು ಸತತ 8ನೇ ದಿನವೂ ಸಂಸತ್ತಿನ ಉಭಯ ಕಲಾಪಗಳು ಬಲಿಯಾಗಿವೆ. ಗುರುವಾರ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ರಾಹುಲ್‌ ಗಾಂಧಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಆಡಳಿತ ಪಕ್ಷ ವಿರೋಧ ವ್ಯಕ್ತಪಡಿಸಿದ ಕಾರಣ ಸದನದಲ್ಲಿ ಗದ್ದಲ ಏರ್ಪಟ್ಟಿತು. ಹೀಗಾಗಿ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. 

ಮತ್ತೆ ಕಲಾಪ ಆರಂಭವಾದಾಗ ಅದಾನಿ ಪ್ರಕರಣದ ವಿರುದ್ಧ ಜಂಟಿ ಸಂಸದೀಯ ಸಮಿತಿ ರಚನೆಗೆ ಆಗ್ರಹಿಸಿ ವಿಪಕ್ಷಗಳು ಗದ್ದಲ ಸೃಷ್ಠಿ ಮಾಡಿದವು. ಹೀಗಾಗಿ ಕಲಾಪವನ್ನು ಸಾಯಂಕಾಲ 6 ಗಂಟೆಗೆ ಮುಂದೂಡಲಾಯಿತು. ರಾಜ್ಯಸಭೆಯಲ್ಲೂ ಸಂಸದೀಯ ಸಮಿತಿ ರಚನೆಗೆ ವಿಪಕ್ಷಗಳು ಆಗ್ರಹಿಸಿದ ಕಾರಣ ಗದ್ದಲ ಆರಂಭವಾಗಿ ಕಲಾಪವನ್ನು ಮುಂದೂಡಲಾಯಿತು. ಲೋಕಸಭೆಯಲ್ಲಿ ಗದ್ದಲದ ನಡುವೆಯೇ 2024ನೇ ಸಾಲಿಗೆ 45 ಲಕ್ಷ ಕೋಟಿ ರು. ವೆಚ್ಚದ ಬಜೆಟ್‌ಗೆ ಅಂಗೀಕಾರ ಪಡೆಯಲಾಯಿತು. ಸಾಯಂಕಾಲ 6 ಗಂಟೆಗೆ ಸದನ ಮತ್ತೆ ಸೇರಿದಾಗ ಈ ಬೇಡಿಕೆಯನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸದಸನ ಒಪ್ಪಿಗೆ ಪಡೆದುಕೊಂಡರು.

ರಾಗಾಗೆ ಶಿಕ್ಷೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ತಳಮಳ, ಸಂಸದ ಸ್ಥಾನ ಕಳೆದುಕೊಳ್ತಾರಾ ರಾಹುಲ್‌ ಗಾಂಧಿ?

click me!