ಡ್ರೋನ್, ಮಾನವರಹಿತ ವೈಮಾನಿಕ ವಾಹನ ಬಳಕೆ ನಿಷೇಧಿಸಿದ ಜಮ್ಮುಕಾಶ್ಮೀರ!

By Suvarna NewsFirst Published Jul 4, 2021, 4:03 PM IST
Highlights
  • ವಾಯುನೆಲೆ ಮೇಲಿನ ಡ್ರೋನ್ ದಾಳಿ ಬಳಿಕ ಮಹತ್ವದ ನಿರ್ಧಾರ
  • ಜಮ್ಮು ಕಾಶ್ಮೀರ ರಾಜಧಾನಿಯಲ್ಲಿ ಡ್ರೋನ್ ಬಳಕೆ ನಿಷೇಧ
  • ಡ್ರೋನ್ ದಾಳಿ ಭೀತಿ ಹೆಚ್ಚುತ್ತಿರುವ ಹಿನ್ನಲೆ ಈ ಕ್ರಮ

ಶ್ರೀನಗರ(ಜು.04): ಕಣಿವೆ ರಾಜ್ಯದ ಮಿಲಿಟರಿ ಏರ್‌ಬೇಸ್ ಮೇಲೆ ನಡೆದ ದಾಳಿ ಭಾರತದ ರಕ್ಷಣಾ ವ್ಯವಸ್ಥೆಗೆ ಸವಾಲೆಸೆದಿದೆ. ಇದು ಭಾರತದ ಮೇಲೆ ನಡೆದ ಮೊದಲ ಡ್ರೋನ್ ದಾಳಿಯಾಗಿದೆ. ಹೆಚ್ಚಿನ ಅನಾಹುತ ಸಂಭವಿಸದಿದ್ದರೂ, ಎಚ್ಚರಿಕೆಯ ಕರೆಗಂಟೆಯಾಗಿದೆ. ಡ್ರೋನ್ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಹಾಗೂ ಜಮ್ಮ ಕಾಶ್ಮೀರ ಆಡಳಿತ ಇದೀಗ ಮಹತ್ವದ ನಿರ್ಧಾರ ಪ್ರಕಟಿಸಿದೆ. ಶ್ರೀನಗರದಲ್ಲಿ ಡ್ರೋನ್, ಮಾನವ ರಹಿತ ವೈಮಾನಿಕ ವಾಹನ ಬಳಕೆಗೆ ನಿಷೇಧ ಹೇರಿದೆ.

ದಕ್ಷಿಣ ಭಾರತದ 2 ರಾಜ್ಯದ ಮೇಲೆ ಡ್ರೋನ್ ದಾಳಿ ಸಾಧ್ಯತೆ; ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ!.

ಶ್ರೀಗನರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೊಹಮ್ಮದ್ ಐಜಾಝ್ ಈ ಆದೇಶ ಹೊರಡಿಸಿದ್ದಾರೆ. ಪ್ರಮುಖ ಸ್ಥಾಪನೆ, ಹೆಚ್ಚು ಜನಸಂಖ್ಯೆ ಇರುವ ಸ್ಥಳಗಳು, ಮಿಲಿಟರಿ ತಾಣ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಸುರಕ್ಷತೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಶ್ರೀನಗರದಲ್ಲಿ ಆಯೋಜಿಸುವ ಸಾಂಸ್ಕೃತಿ ಕೂಟ, ಸಾಮಾಜಿಕ ಸಭೆ ಸಮಾರಂಭಗಳಲ್ಲೂ ಯಾವುದೇ ಕಾರಣಕ್ಕೂ ಡ್ರೋನ್ ಬಳಕೆ ಮಾಡುವಂತಿಲ್ಲ.

 

Jammu & Kashmir: Srinagar District administration provides standard operating guidelines to regulate the use of drones. Persons already having drone cameras/unmanned aerial vehicles in their possession shall ground the same in the local police station. pic.twitter.com/pyBsx3trDg

— ANI (@ANI)

ಭದ್ರತಗೆ ಸವಾಲೋಡ್ಡುವ ಹಾಗೂ ಡ್ರೋನ್ ದುರುಪಯೋಗ ಘಟನೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅನುಮತಿ ಇಲ್ಲದೆ ಬಾಹ್ಯಾಕಾಶ ಪ್ರವೇಶ ನಿಯಂತ್ರಿಸಲು CRPC ಸೆಕ್ಷನ್ 144ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಇನ್ನು ಕೆಲ ಸರ್ಕಾರಿ ಸಂಸ್ಥೆಗಳು, ಇಲಾಖೆಗಳು ಡ್ರೋನ್ ಬಳಕೆ ಮಾಡಲು ಇದೀಗ ಪೊಲೀಸ್ ಮುಖ್ಯಸ್ಥರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಜಮ್ಮು ಐಎಎಫ್‌ ಸ್ಟೇಷನ್‌ನಲ್ಲಿ ‘ಡ್ರೋನ್‌ ಜಾಮರ್‌’ ಅಳವಡಿಕೆ!

ಕೃಷಿ, ಪರಿಸರ ಸಂರಕ್ಷಣೆ, ವಿಪತ್ತು ನಿರ್ವಹಣಾ ತಂಡ,  ಮ್ಯಾಪಿಂಗ್, ಸಮೀಕ್ಷೆ ಸೇರಿದಂತೆ ಕೆಲ ಕಾರ್ಯಗಳಿಗೆ ಸರ್ಕಾರಿ ಸಂಸ್ಥೆಗಳು ಡ್ರೋನ್ ಬಳಕೆ ಮಾಡುತ್ತಿದೆ. ಆದರೆ ಶ್ರೀನಗರದಲ್ಲಿ ಈ ರೀತಿಯ ಚಟುವಟಿಕೆಗೆ ಡ್ರೋನ್ ಬಳಕೆ ಮಾಡಲು ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದಿರಬೇಕು. ಇನ್ನು ಡ್ರೋನ್ ಬಳಕೆ ವಲಯ, ಸಮಯ ಸೇರಿದಂತೆ ಎಲ್ಲಾ ವಿವರಗಳನ್ನು ತಿಳಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಡ್ರೋನ್ ಬಳಕೆ ಬ್ಯಾನ್ ಮಾಡಿದ 2ನೇ ಜಿಲ್ಲೆ ಶ್ರೀಗರವಾಗಿದೆ. ಇದಕ್ಕೂ ಮೊದಲು ರಜೌರಿ ಡಿಲ್ಲೆ ಡ್ರೋನ್ ಹಾಗೂ ಮಾನವ ರಹಿತ ವೈಮಾನಿಕ ವಾಹನ ಬಳಕೆಗೆ ನಿರ್ಬಂಧ ಹೇರಿದೆ.

click me!