Teacher beats student ಜಮ್ಮು ಕಾಶ್ಮೀರದಲ್ಲಿ ತಿಲಕವಿಟ್ಟು ಶಾಲೆ ಬಂದ ಬಾಲಕಿಗೆ ಥಳಿಸಿದ ಶಿಕ್ಷಕ!

By Suvarna News  |  First Published Apr 6, 2022, 8:28 PM IST
  • ತಿಲಕ ಇಟ್ಟು ಶಾಲೆ ಪ್ರವೇಶಿಸಿದ ಬಾಲಕಿಗೆ ಛಡಿ ಏಟು
  • ಹಿಜಾಬ್ ಬ್ಯಾನ್ ಆದರೆ ತಿಲಕವೂ ಬ್ಯಾನ್ ಎಂದು ಥಳಿತ
  • ಶಿಕ್ಷಕನ ಅಮಾನತು ಮಾಡಿದ ಡೆಪ್ಯೂಟಿ ಕಮಿಷನರ್
     

ರಜೌರಿ(ಏ.06): ಹಿಜಾಬ್ ವಿವಾದ ಸೃಷ್ಟಿಸಿದ ಅವಾಂತರಗಳು ಒಂದೆರೆಡಲ್ಲ. ತೀರ್ಪಿನ ಬಳಿಕವೂ ವಿವಾದ, ಸಮಸ್ಯೆ ಬಗೆಹರಿದಿಲ್ಲ. ಈ ವಿವಾದಲ್ಲಿ ಹಿಂದೂಗಳು ತಿಲಕವಿಡುವುದು ಬ್ಯಾನ್ ಆಗಲಿ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಮಾತನನ್ನೇ ಯಥವಾತ್ತಾಗಿ ಪಾಲಿಸಿದ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಶಿಕ್ಷಕ ನಿಸಾರ್ ಅಹಮ್ಮದ್ ಎಡವಟ್ಟು ಮಾಡಿಕೊಂಡಿದ್ದಾನೆ. ಇಷ್ಟೇ ಅಲ್ಲ ಮಾಡಿದ ತಪ್ಪಿಗೆ ಇದೀಗ ಅಮಾನತ್ತಾಗಿದ್ದಾನೆ.

ರಜೌರಿ ಜಿಲ್ಲೆಯ ಕದೂರಿಯನ್ ಪಂಚಾಯತ್‌ನ ಬಾಲಕಿಯರ ಮಿಡ್ಲ್ ಸ್ಕೂಲ್‌ನಲ್ಲಿ ಹಣೆಗೆ ತಿಲಕವಿಟ್ಟ ಕಾರಣ ಬಾಲಕಿಗೆ ಥಳಿಸಿದ ಘಟನೆ ನಡೆದಿದೆ. ಬಾಲಕಿ ಹಿಂದೂ ಸಂಪ್ರದಾಯದಂತೆ ತಿಲಕವಿಟ್ಟು ಶಾಲೆ ಪ್ರವೇಶಿಸಿದ್ದಾಳೆ. ಇಷ್ಟೇ ನೋಡಿ. ಶಿಕ್ಷಕ ನಿಸಾರ್ ಅಹಮ್ಮದ್ ಪಿತ್ತ ನೆತ್ತಿಗೇರಿದೆ. ಬಾಲಕಿಗೆ ಛಡಿ ಏಟು ನೀಡಿದ್ದಾನೆ.

Tap to resize

Latest Videos

ಹಿಜಾಬ್, ಹಲಾಲ್‌ ಆಯ್ತು ಇದೀಗ ಮತ್ತೊಂದು ವಿವಾದ ಶುರು: ಹಿಂದೂ- ಕ್ರೈಸ್ತರ ಮಧ್ಯೆ ವಾಗ್ವಾದ

ಶಿಕ್ಷನ ಛಡಿ ಏಟಿಗೆ ಬಾಲಕಿ ಕೈ, ಕಾಲು ಮೈ ಬಾಸುಂಡೆ ಬಂದಿದೆ. ಅಳುತ್ತಲೇ ಮನೆಗೆ ಮರಳಿದ ಬಾಲಕಿ ಪೋಷಕರಲ್ಲಿ ಘಟನೆ ವಿವರಿಸಿದ್ದಾಳೆ. ಇತ್ತ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರಜೌರಿ ಡೆಪ್ಯೂಟಿ ಪೊಲೀಸ್ ಕಮಿಷನರ್, ಪ್ರಾಥಮಿಕ ಮಾಹಿತಿ ಆಧರಿಸಿ ಶಿಕ್ಷಕ ನಿಸಾರ್ ಅಹಮ್ಮದ್‌ನನ್ನು ಅಮಾನತು ಮಾಡಿದ್ದಾರೆ.ಪ್ರಕರಣದ ವಿಚಾರಣೆ ನಡೆಸಲು ನಿರ್ದೇಶಿಸಲು ಸೂಚಿಸಲಾಗಿದೆ. 

ಮಕ್ಕಳನ್ನು ನೋಯಿಸುವು ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆ 323, 325, 352 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳ ಮೇಲೆ ಹಲ್ಲೆ ನಡೆಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು.

ತರಗತಿ ಒಳಗಡೆ ನಮಾಜ್ ಮಾಡಿ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯಿಂದ ಕ್ಷಮಾಪಣಾ ಪತ್ರ!

ಕರ್ನಾಟಕದಲ್ಲಿ ಹಿಜಾಬ್‌ನಿಂದ ಆರಂಭಗೊಂಡ ಧಾರ್ಮಿಕ ಸಂಘರ್ಷ-ಇನ್ನೂ ಅಂತ್ಯಗೊಂಡಿಲ್ಲ. ಹಲಾಲ್, ಮುಸ್ಲಿಮ್ ವ್ಯಾಪಾರಿಗಳಿಗ ನಿರ್ಬಂಧ ಬಳಿಕ ಇದೀಗ ಅಜಾನ್ ಸಂಘರ್ಷ ಶುರುವಾಗಿದೆ. ಆಜಾನ್‌ ವಿರೋಧಿಸಿ ಮಹಾರಾಷ್ಟ್ರದಲ್ಲಿ ಎಂಎನ್‌ಎಸ್‌ ಮುಖಂಡ ರಾಜ್‌ ಠಾಕ್ರೆ ನಡೆಸುತ್ತಿರುವ ‘ಲೌಡ್‌ ಸ್ಪೀಕರ್‌’ ಅಭಿಯಾನಕ್ಕೆ ರಾಜ್ಯದಲ್ಲೂ ಬೆಂಬಲ ಸೂಚಿಸಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟದಲ್ಲಿ ಹಿಂದೂಪರ ಸಂಘಟನೆಗಳು ತಿಳಿಸಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರಿಂದ ಹೇಳಿಕೆ ಪ್ರತಿಹೇಳಿಕೆಗಳ ಸಮರ ಶುರುವಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಯಾನವನ್ನು ಬೆಂಬಲಿಸಿ ಮಾತನಾಡಿದ್ದರೆ, ವಿಧಾನಸಭೆ ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಶಾಸಕರಾದ ಕನೀಜ್‌ ಫಾತಿಮಾ, ಜಮೀರ್‌ ಆಹ್ಮದ್‌, ರಾಮಲಿಂಗಾರೆಡ್ಡಿ ಸೇರಿದಂತೆ ಅನೇಕರು ಈ ಹೊಸ ವಿವಾದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆ ಜಿಲ್ಲೆಗಳಲ್ಲಿ ಅಜಾನ್ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಪ್ರಾರ್ಥನಾ ಸ್ಥಳಗಳಾದ ದೇವಸ್ಥಾನ, ಮಸ್ಜೀದಿ ಹಾಗೂ ಚಚ್‌ರ್‍ಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ನಿಯಮ ಹಿಂಪಡೆಯಬೇಕು ಎಂದು ಆಗ್ರಹಿಸಿ ಗದಗ-ಬೆಟಗೇರಿ ಅಂಜುಮ-ಎ-ಇಸ್ಲಾಂ ಸಂಸ್ಥೆ, ದಲಿತ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ

ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಮಸೀದಿಗಳಲ್ಲಿನ ಆಜಾನ್‌ ನಿಷೇಧ ಕುರಿತಂತೆ ಸರ್ಕಾರ ಯಾವುದೇ ಹೊಸ ಕಾನೂನುಗಳನ್ನು ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸರ್ಕಾರದ ದೃಷ್ಟಿಯಲ್ಲಿ ಎಲ್ಲ ಜಾತಿ-ಧರ್ಮದವರೂ ಸಮಾನರು. ಈ ವಿಚಾರದಲ್ಲಿ ಯಾವುದೇ ಸಂಘಟನೆಯಾಗಲಿ ಶಾಂತಿ-ಸುವ್ಯವಸ್ಥೆ ಹದಗೆಡಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ. ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಯಾವುದೇ ಹೊಸ ಕಾನೂನುಗಳನ್ನು ಈಗ ಜಾರಿಗೆ ತರುತ್ತಿಲ್ಲ. 2001, 2002ರ ಆದೇಶಗಳು ಮತ್ತು ಹೈಕೋರ್ಚ್‌ ಆದೇಶಗಳ ಅನುಸಾರ ಜಾರಿಯಾಗುತ್ತದೆ. ಹಿಂದಿನ ಸರ್ಕಾರಗಳೇ ಈ ನಿಯಮಗಳನ್ನು ಜಾರಿ ಮಾಡಿದ್ದು ಎಂದರು.

click me!