ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ ಹಣಕಾಸು ನಿಷೇಧಿಸುವ ಬಿಲ್ ಲೋಕಸಭೆಯಲ್ಲಿ ಅಂಗೀಕಾರ!

Published : Apr 06, 2022, 07:26 PM IST
ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ ಹಣಕಾಸು ನಿಷೇಧಿಸುವ ಬಿಲ್ ಲೋಕಸಭೆಯಲ್ಲಿ ಅಂಗೀಕಾರ!

ಸಾರಾಂಶ

ಸಾಮೂಹಿತ ವಿನಾಶದ ಶಸ್ತ್ರಾಸ್ತ್ರಗಳ ತಿದ್ದುಪಡಿ ಮಸೂದೆ 2022  ತಿದ್ದುಪಡಿ ಮಸೂದೆಯಲ್ಲಿ ಹಲವು ಬದಲಾವಣೆ ಕಾನೂನು ಬಾಹಿರ ಶಸ್ತ್ರಾಸ್ತ್ರ ಚಟುವಟಿಕೆಗೆ ಹಣಕಾಸು ನಿಷೇಧ

ನವದೆಹಲಿ(ಏ.06): ದೇಶದ ಸುರಕ್ಷತೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಬಲ್ಲ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ ಹಣಕಾಸು ನಿಷೇಧಿಸುವ ತಿದ್ದಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಕಾನೂನು ಬಾಹಿರವಾಗಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳಿಗೆ ಹಣಕಾಸು ಒದಗಿಸುವುದನ್ನು ತಡೆಯಲು ಹಾಗೂ ಅಂತಹ ಪ್ರಕರಣಗಳಲ್ಲಿ ಹಣಕಾಸು ಒದಗಿಸುವವರ ಆಸ್ತಿಗಳನ್ನು ಫ್ರೀಜ್ ಮಾಡಲು ಹಾಗೂ ಜಪ್ತಿ ಮಾಡಲು ಅಧಿಕಾರ ನೀಡುವ ಬಿಲ್ ಇದಾಗಿದೆ.

ಈ ತಿದ್ದುಪಡಿ 2022ರ ಮಸೂದೆಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಲೋಕಸಭೆಯಲ್ಲಿ ಮಂಡಿಸಿದರು. ಈ ಮಹತ್ವದ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. 2005ರಲ್ಲಿ ಈ ಮಸೂದೆ ತರಲು ಅಂದಿನ ಕಾಂಗ್ರೆಸ್ ಸರ್ಕಾರ ತಯಾರಿ ನಡೆಸಿತ್ತು. ಬಳಿಕ ಮಸೂದೆ ವಿಚಾರ ಕೈಬಿಟ್ಟಿತ್ತು.

ವಜಾ ಆದವರು ಪಂಚಾಯ್ತಿಗೆ ಸ್ಪರ್ಧಿಸುವಂತಿಲ್ಲ, ಮಹತ್ವದ ವಿಧೇಯಕ ಮಂಡನೆ!

ಈ ಮಸೂದೆಯಲ್ಲಿ ಏನಿದೆ?
ಸಾಮೂಹಿತ ವಿನಾಶದ ಶಸ್ತ್ರಾಸ್ತ್ರಗಳ ತಿದ್ದುಪಡಿ ಮಸೂದೆ 2022ರಲ್ಲಿ ವಿನಾಶಕ್ಕೆ ಕಾರಣವಾಗಬಲ್ಲ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಶಸ್ತ್ರಾಸ್ತ್ರಗಳ ವಿತರಣೆ, ಪೂರೈಕೆ ಸೇರಿದಂತೆ ಯಾವುದೇ ಚಟುವಟಿಕೆಗೆ ಹಣಕಾಸ ಸೌಲಭ್ಯ ಒದಿಗಿಸುವುದನ್ನು ನಿಷೇಧಿಸಲಿದೆ. 

2005ರಲ್ಲಿನ ತಿದ್ದುಪಡಿ ಮಸೂದೆಯನ್ನು ಮತ್ತಷ್ಟು ಮಾರ್ಪಡಿಸಿ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ. 2005ರಲ್ಲಿ ತರಲು ತಯಾರಿ ಮಾಡಿದ್ದ ಈ ಮಸೂದೆಯಲ್ಲಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ತಯಾರಿಕೆ, ಪೂರೈಕೆ, ಸಾಗಣೆ, ಅಥವಾ ವರ್ಗಾವಣೆ ಮತ್ತು ವಿತರಣೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ನಿಷೇಧಿಸಿತ್ತು. ಇದೀಗ ಇದೇ ತಿದ್ದುಪಡಿ ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ.

ಮತಾಂತರ ನಿಷೇಧ ಕಾಯ್ದೆಯಿಂದ ಆತಂಕ: ಕ್ರಿಶ್ಚಿಯನ್‌ ಸಮುದಾಯ!

ಲೆಕ್ಕಪತ್ರ ನಿರ್ವಹಣೆ ಮಸೂದೆಗೆ ಲೋಕಸಭೆ ಅಂಗೀಕಾರ
ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್‌್ಡ ಅಕೌಂಟೆಂಟ್ಸ್‌, ಕಾಸ್ಟ್‌ ಅಕೌಂಟೆಂಟ್ಸ್‌ ಮತ್ತು ಕಂಪನಿ ಕಾರ್ಯದರ್ಶಿಗಳ ಸಂಸ್ಥೆಗಳ ಕಾರ್ಯವಿಧಾನದಲ್ಲಿ ಬದಲಾವಣೆಗೆ ಅವಕಾಶ ಕಲ್ಪಿಸುವ ಲೆಕ್ಕಪತ್ರ ಮಸೂದೆಗೆ ಲೋಕಸಭೆ ಬುಧವಾರ ಅಂಗೀಕಾರ ನೀಡಿದೆ. ಹೊಸ ಮಸೂದೆ ಅನ್ವಯ, ಈ ಮೂರು ಸಂಸ್ಥೆಗಳಲ್ಲಿನ ಶಿಸ್ತು ಸಮಿತಿಯ ಪ್ರಿಸೈಂಡಿಗ್‌ ಆಫೀಸರ್‌ ಆಗಿ ಇನ್ನು, ಆಯಾ ಸಂಸ್ಥೆಗಳ ಹುದ್ದೆಗೆ ಸಂಬಂಧಿಸದ ವ್ಯಕ್ತಿಗಳ ನೇಮಕ ಮಾಡಬಹುದಾಗಿದೆ. ಮಸೂದೆ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಹೊಸ ಮಸೂದೆಯು, ಈ ಮೂರೂ ಸಂಸ್ಥೆಗಳ ಸ್ವಾಯತ್ತೆ ಮೇಲೆ ಯಾವುದೇ ಪರಿಣಾಮ ಬೀರದು. ಆದರೆ ಮೂರು ಸಂಸ್ಥೆಗಳ ಆಡಿಟ್‌ನ ಗುಣಮಟ್ಟಹೆಚ್ಚಳಕ್ಕೆ ಮತ್ತು ದೇಶದಲ್ಲಿ ಹೂಡಿಕೆಯ ವಾತಾವರಣ ಸುಧಾರಣೆಗೆ ಕಾರಣವಾಗಲಿದೆ ಎಂದು ಹೇಳಿದರು.

ದೋಷಿಗಳ ದೈಹಿಕ, ಜೈವಿಕ ಮಾದರಿ ಸಂಗ್ರಹದ ಮಸೂದೆ ಅಂಗೀಕಾರ
ಕ್ರಿಮಿನಲ್‌ ಪ್ರಕರಣಗಳಲ್ಲಿ ದೋಷಿ ಎನ್ನಿಸಿಕೊಂಡ ವ್ಯಕ್ತಿಗಳ ದೈಹಿಕ ಮತ್ತು ಜೈವಿಕ ಮಾದರಿ ಸಂಗ್ರಹಿಸಲು ಕಾನೂನು ಬದ್ಧ ಮಾನ್ಯತೆ ನೀಡುವ ಅಪರಾಧ ಕಾರ್ಯವಿಧಾನ (ಗುರುತಿಸುವಿಕೆ) ಮಸೂದೆಗೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರ ನೀಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಸೂದೆಯನ್ನು ಸಭೆಯಲ್ಲಿ ಮಂಡಿಸಿದ್ದು, ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.

ಈ ಮಸೂದೆಯು ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೊಗೆ ಆರೋಪಿ ಹಾಗೂ ಅಪರಾಧಿಗಳ ಕೈ ಹಾಗೂ ಪಾದಗಳ ಅಚ್ಚುಗಳು, ರೆಟಿನಾ, ಐರಿಸ್‌ ಸ್ಕಾ್ಯನ್‌ ಸೇರಿದಂತೆ ದೈಹಿಕ ಹಾಗೂ ಜೈವಿಕ ಮಾದರಿಗಳನ್ನು ಸಂಗ್ರಹಿಸಲು ಕಾನೂನಾತ್ಮಕ ಮಂಜೂರಾತಿಯನ್ನು ನೀಡುತ್ತದೆ. ಇದು ಪ್ರಸ್ತುತ ಜಾರಿಯಲ್ಲಿರುವ ಕೈದಿಗಳ ಗುರುತಿಸುವಿಕೆ ಕಾಯ್ದೆ, 1920ಯ ಬದಲಾಗಿ ಜಾರಿಗೆ ಬರಲಿದೆ. ಈ ಮೊದಲಿನ ಕಾಯ್ದೆಯಲ್ಲಿ ಅಪರಾಧಿಗಳ ಬೆರಳಚ್ಚು ಹಾಗೂ ಭಾವಚಿತ್ರವನ್ನು ಮಾತ್ರ ಸಂಗ್ರಹಿಸುವ ಅವಕಾಶವಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!