ಸೈಫ್ ಅಲಿ ಖಾನ್ ಸಿನಿಮಾದ ಪೋಸ್ಟರ್ ಹಂಚಿಕೊಂಡ ಉಗ್ರ ಸಂಘಟನೆ ಜೈಶ್ ಇ ಮೊಹಮ್ಮದ್

By Mahmad Rafik  |  First Published Jul 25, 2024, 11:37 AM IST

ಯಾರದ್ದೆ ಮೊಬೈಲ್‌ಗೆ ವಿಡಿಯೋ ಬಂದ್ರೆ, ಯಾವ ಸಮಯ, ಸಂಖ್ಯೆಯಿಂದ ಬಂದಿದೆ ಎಂಬ ಮಾಹಿತಿಯನ್ನು ರವಾನಿಸುವಂತೆ ಸ್ಥಳೀಯರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 


ನವದೆಹಲಿ: ಉಗ್ರ ಸಂಘಟನೆಯಾದ ಜೈಶ್-ಇ-ಮೊಹಮ್ಮದ್ ಜಮ್ಮು-ಕಾಶ್ಮೀರದಲ್ಲಿ ತನ್ನ ಪ್ರೊಪೆಗೆಂಡಾ ವಿಡಿಯೋವೊಂದನ್ನು ಹರಿಬಿಟ್ಟ ಬಳಿಕ ಸಂಚಲನದ ಜೊತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. 5 ನಿಮಿಷ 55 ಸೆಕೆಂಡ್ ಅವಧಿಯ ಈ ವಿಡಿಯೋ ಜಮ್ಮು ಕಾಶ್ಮೀರ ಭಾಗದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಉಗ್ರರು, ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ನಟನೆಯ ಫ್ಯಾಂಟಮ್ ಸಿನಿಮಾದ ಪೋಸ್ಟರ್ ಬಳಕೆ ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಜಮ್ಮು ಕಾಶ್ಮೀರ ಪೊಲೀಸರು ವಿಡಿಯೋವನ್ನು ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಡಿಕೊಳ್ಳದಂತೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಿಡಿಯೋ ಹಂಚಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. 

ವಿಡಿಯೋ ಹಂಚಿಕೆ ತಡೆಯಲು ಮುಂದಾಗಿರುವ ಜಮ್ಮು ಕಾಶ್ಮೀರ ಪೊಲೀಸರು ಈ ಕುರಿತು ಮಾಹಿತಿ ಮಾಡಿದ್ದಾರೆ. ಜೈಶ್ ಇ ಮೊಹಮ್ಮದ್ ಸಂಘಟನೆಯ ಉಗ್ರರು ತಮ್ಮ ವಿಚಾರಧಾರೆಯುಳ್ಳ ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಡಿಯೋ ಹಂಚಿಕೊಳ್ಳದಂತೆ ಎಲ್ಲರಲ್ಲಿಯೂ ಮನವಿ ಮಾಡಿಕೊಂಡಿದ್ದು, ಇದರ ಮೂಲ ಪತ್ತೆ ಹಚ್ಚುವಲ್ಲಿ ನಾವು ನಿರತವಾಗಿದ್ದೇವೆ. ಯಾರದ್ದೆ ಮೊಬೈಲ್‌ಗೆ ವಿಡಿಯೋ ಬಂದ್ರೆ, ಯಾವ ಸಮಯ, ಸಂಖ್ಯೆಯಿಂದ ಬಂದಿದೆ ಎಂಬ ಮಾಹಿತಿಯನ್ನು ರವಾನಿಸುವಂತೆ ಸ್ಥಳೀಯರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Tap to resize

Latest Videos

ಜಮ್ಮು ಕಾಶ್ಮೀರ ಪೊಲೀಸರ ಖಡಕ್ ಎಚ್ಚರಿಕೆ

ಈಗಾಗಲೇ ನಿಮ್ಮ ಮೊಬೈಲ್‌ಗೆ ಜೈಶ್ ಸಂಘಟನೆಯ ವಿಡಿಯೋ ಬಂದಿದ್ದರೆ ಅದರ ಮಾಹಿತಿಯನ್ನು ಸಹ ಸಮೀಪದ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ದಿನಾಂಕ, ಸಮಯ ಹಾಗೂ ಸಂಖ್ಯೆಯನ್ನು ತಿಳಿಸಿ. ಇಂತಹ ಮಾಹಿತಿ ಸ್ವೀಕರಿಸುವ  ಅಧಿಕಾರಿಗಳು ಕೂಡಲೇ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು ಎಂದು ಪೊಲೀಸರು ಆದೇಶ ನೀಡಿದ್ದಾರೆ. ವಿಡಿಯೋ ಶೇರ್ ಮಾಡೋರ ವಿರುದ್ಧ ಯುಎಪಿಎ ಸೆಕ್ಷನ್ 13 ಮತ್ತು 18ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದರು.

ಜಮ್ಮು ಕಾಶ್ಮೀರದಲ್ಲಿ ಡಬಲ್‌ ಎನ್‌ಕೌಂಟರ್‌, ಸೇನೆಗೆ ಸವಾಲು ಹಾಕಿದ ನಾಲ್ವರು ಭಯೋತ್ಪಾದಕರು ಹತ!

ಈ ವಿಡಿಯೋದಲ್ಲಿ ಯಾಕೆ ಸೈಫ್ ಅಲಿ ಖಾನ್ ಚಿತ್ರದ ಪೋಸ್ಟರ್ ಬಳಕೆ ಮಾಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ವೈರಲ್ ಆಗುತ್ತಿರುವ ವಿಡಿಯೋದಲ್ಲಿಯ ಮಾಹಿತಿಯನ್ನು ಪೊಲೀಸರು ಬಿಟ್ಟುಕೊಟ್ಟಿಲ್ಲ.

ಭಯೋತ್ಪಾದನೆ ವಿರುದ್ಧ ಹೋರಾಟದ ಕಥೆಯುಳ್ಳ ಚಿತ್ರವೇ ಫ್ಯಾಂಟಮ್ 

ಕಬೀರ್ ಖಾನ್ ನಿರ್ದೇಶನದ ಫ್ಯಾಂಟಮ್ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಹಾಗೂ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಭಾರತದ ಸೀಕ್ರೆಟ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೈಫ್ ಅಲಿ ಖಾನ್, ಹೇಗೆ ಶತ್ರು ರಾಷ್ಟ್ರಕ್ಕೆ ನುಗ್ಗಿನ ಉಗ್ರರನ್ನು ಸದೆಬಡಿಯುತ್ತಾರೆ ಎಂಬುವುದು ಚಿತ್ರದ ಒನ್‌ ಲೈನ್ ಸ್ಟೋರಿ. ಚಿತ್ರ ಅತ್ಯದ್ಭುತವಾಗಿ ಮೂಡಿ ಬಂದಿದ್ದರೂ, ಬಾಕ್ಸ್‌ ಆಫಿಸ್‌ನಲ್ಲಿ ವಿಫಲತೆ ಕಂಡಿತ್ತು. ಸಿನಿಮಾದಲ್ಲಿಯ ಒಂದೊಂದು  ದೃಶ್ಯಗಳು ವೀಕ್ಷಕರನ್ನು ಕುರ್ಚಿಯ ತುದಿಗೆ ತಂದು ಕುಳಿತುಕೊಳ್ಳುವಂತೆ ಮಾಡುತ್ತದೆ. 72 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಫ್ಯಾಂಟಮ್ 84 ಕೋಟಿ ರೂ.ಗಳಿಸಿತ್ತು. 2015ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು.

ಪಾಕ್ ಉಗ್ರರ ಬೇಟೆಗೆ 500 ಪ್ಯಾರಾ ಕಮಾಂಡೋ ನಿಯೋಜನೆ- ಅಕ್ರಮವಾಗಿ ನುಸುಳಿರುವ ಉಗ್ರರ ಎದುರಿಸಲು ದಿಟ್ಟ ಹೆಜ್ಜೆ

click me!